ಬೆಂಗಳೂರು: ಇಲ್ಲಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಷೇಧಿತ ವಸ್ತುಗಳ ತಡೆಗೆ ಎಷ್ಟೇ ಕಠಿಣ ನಿಯಮ ಜಾರಿಗೆ ತರ್ತಿದ್ರೂ ಹಲವು ರೀತಿಯ ವಸ್ತುಗಳು ಪತ್ತೆಯಾಗ್ತಾನೆ ಇವೆ. ನಿನ್ನೆ ರಾತ್ರಿ ಕೂಡ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಈ ವೇಳೆ ಕೂಡ ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿವೆ.
ಮಂಗಳವಾರ ರಾತ್ರಿ 8 ಗಂಟೆಯಿಂದ 8:45 ತನಕ ಜೈಲಿನಲ್ಲಿ ಪರಿಶೀಲನೆ ನಡೆಸಿದ್ದ ಅಧಿಕಾರಿಗಳಿಗೆ ಈ ಕೆಳಗಿನ ವಸ್ತುಗಳು ಪತ್ತೆಯಾಗಿವೆ. ಈ ಸಂಬಂಧ ಇಲ್ಲಿವರೆಗೂ 6 ಎಫ್‌ಐಆರ್‌ಗಳು ದಾಖಲಾಗಿವೆ.
ಮಂಗಳವಾರ ರಾತ್ರಿ ಪತ್ತೆಯಾದ ವಸ್ತುಗಳು
* 14 – ಮೊಬೈಲ್ ಗಳು.
* 9 – ಸಿಮ್ ಕಾರ್ಡ್ ಗಳು.
* 05 – ಮೊಬೈಲ್ ಚಾರ್ಜರ್ ಗಳು.
* 02 – ಇಯರ್ ಪೋನ್ ಗಳು.
* 10 – ವಿವಿಧ ಬಗೆಯ ಚಾಕುಗಳು ಪತ್ತೆ..
6 ಬಾರಿಯ ದಾಳಿಯಲ್ಲಿ ಪತ್ತೆಯಾದ ಒಟ್ಟು ನಿಷೇಧಿತ ವಸ್ತುಗಳು
* 67- ಮೊಬೈಲ್ ಗಳು
* 14 – ಚಾರ್ಜರ್ ಗಳು.
* 48 – ಸಿಮ್ ಕಾರ್ಡ್ ಗಳು.
* 10 – ಇಯರ್ ಪೋನ್ ಗಳು
* 60,880 – ನಗದು
* 10 – ಹರಿತವಾದ ಆಯುಧಗಳು – ಪತ್ತೆಯಾಗಿವೆ.

