ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಪಾಲಾಗಿರುವ ದರ್ಶನ್ & ಗ್ಯಾಂಗ್‌ಗೆ ಕೊನೆಗೂ ಬೆಡ್‌ಶೀಟ್ ಭಾಗ್ಯ ಒದಗಿಬಂದಿದೆ.
ನಟ ದರ್ಶನ್ (Actor Darshan) ಸೇರಿದಂತೆ ಪ್ರಕರಣದ ಇತರ ಆರೋಪಿಗಳು ಕೋರ್ಟ್ನಲ್ಲಿ ಬೆಡ್‌ಶೀಟ್‌ಗಾಗಿ ಮನವಿ ಮಾಡಿಕೊಂಡಿದ್ದರು. ಚಳಿ ತಡೆಯೋದಕ್ಕೆ ಆಗುತ್ತಿಲ್ಲ. ಹೀಗಾಗಿ ಹೆಚ್ಚುವರಿ ಬೆಡ್‌ಶೀಟ್ ನೀಡಿ ಎಂದು ಅಂಗಲಾಚಿದ್ದರು. ಅದರಂತೆ ಸೆಂಟ್ರಲ್ ಜೈಲ್‌ನ ಅಧಿಕಾರಿಗಳು ಆರೋಪಿ ನಾಗರಾಜ್ ಸೇರಿದಂತೆ ಇತರ ಆರೋಪಿಗಳಿಗೂ ಬೆಡ್‌ಶೀಟ್ ನೀಡಿದ್ದು, ನಟ ದರ್ಶನ್‌ಗೆ ಮನೆಯಿಂದಲೇ ಬೆಡ್‌ಶೀಟ್‌ನ್ನು ತರಿಸಿಕೊಟ್ಟಿದ್ದಾರೆ.ಇದನ್ನೂ ಓದಿ: ಬೆಂಗಳೂರಲ್ಲಿ 7 ಕೋಟಿ ದರೋಡೆ ಕೇಸ್ – ಹೈದರಾಬಾದ್ ಲಾಡ್ಜ್‌ನಲ್ಲಿ ಮತ್ತೆ ಮೂವರು ಅರೆಸ್ಟ್
ಇನ್ನೂ ಈ ನಡುವೆ ದರ್ಶನ್ ಬ್ಯಾರಕ್ ಟೆಂಕ್ಷನ್ ಬಿಟ್ಟು ಕೂಲ್ ಆಗಿದ್ದಾರೆ. ಸಹಚರರ ಜೊತೆಗೆ ಡೆವಿಲ್ ಸಿನಿಮಾ ಬಗ್ಗೆ ಮಾತನಾಡುತ್ತಿದ್ದು, ಸಿನಿಮಾ ಪ್ರಮೋಷನ್ ಹೆಚ್ಚಾಗಿ ಮಾಡಲು ಪತ್ನಿ ಮತ್ತು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಜೊತೆಗೆ ಒಂದು ವಾರದೊಳಗೆ ಡೆವಿಲ್ ಸಿನಿಮಾ ತಂಡ ಕೂಡ ದರ್ಶನ್ ಭೇಟಿ ಮಾಡುವ ಸಾಧ್ಯತೆಗಳಿವೆ ಎಂದು ಜೈಲು ಮೂಲಗಳು ತಿಳಿಸಿವೆ.
