ತಮಿಳಿನ ಖ್ಯಾತ ನಿರ್ದೇಶಕ, ರಜನಿಕಾಂತ್ ಸೇರಿದಂತೆ ಹಲವು ಸ್ಟಾರ್ ನಟರುಗಳಿಗೆ ಸಿನಿಮಾ ಮಾಡಿರುವ ಪಾ.ರಂಜಿತ್ ಕನ್ನಡಿಗರಿಗೆ ತಲೆಗೆ ಹುಳು ಬಿಟ್ಟುಕೊಳ್ಳುವಂತಹ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲೂ ಕನ್ನಡ ಸಿನಿಮಾ ರಂಗವನ್ನು ಜಗತ್ತಿಗೆ ಪರಿಚಯಿಸಿದ ‘ಕೆಜಿಎಫ್’ ಸಿನಿಮಾದ ಅಸಲಿ ಕಥೆಯನ್ನೂ ಅವರು ಬಿಚ್ಚಿಟ್ಟಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದ ಕೆಜಿಎಫ್ ಸಿನಿಮಾ ಅದೊಂದು ಕಾಲ್ಪನಿಕ ಕಥೆಯನ್ನು ಹೊಂದಿತ್ತು. ತಾವು ಅಸಲಿ ಕಥೆಯನ್ನು ಹೇಳುವುದಾಗಿ ತಿಳಿಸಿದ್ದಾರೆ.
Advertisement
ಕೆಜಿಎಫ್ ಸಿನಿಮಾ ಬರುವ ಮುಂಚೆಯೇ ಅವರು ಕೆಜಿಎಫ್ ನೆಲದ ಕರುಣಾಜನಕ ನೈಜ ಕಥೆಯನ್ನು ಸಿನಿಮಾ ಮಾಡಲು ಹೊರಟಿದ್ದರಂತೆ. ಆದರೆ, ಕನ್ನಡದ ಕೆಜಿಎಫ್ ಸಿನಿಮಾ ಬಂದಿದ್ದರಿಂದ ಅದನ್ನು ಮುಂದೆಹಾಕಿದ್ದರಂತೆ. ಈ ವಿಷಯವನ್ನು ಸ್ವತಃ ರಂಜಿತ್ ಅವರೇ ಕಾನ್ ಫೆಸ್ಟಿವೆಲ್ ನಲ್ಲಿ ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಅಲ್ಲದೇ, ಕೆಜಿಎಫ್ ಸಿನಿಮಾದ ಪಾತ್ರಗಳು ಕಾಲ್ಪನಿಕವಾಗಿದ್ದವು. ರಂಜಿತ್ ಮಾಡಿರುವ ಕಥೆಯಲ್ಲಿ ಬಹುತೇಕ ಪಾತ್ರಗಳು ಆ ನೆಲದಲ್ಲಿ ಜೀವಿಸಿದ್ದವು ಎಂದಿದ್ದಾರೆ. ಇದನ್ನೂ ಓದಿ: ದಿಗಂತ್ ಡಿಸ್ಚಾರ್ಜ್ ಬೆನ್ನಲ್ಲೇ ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ ನಟಿ ಐಂದ್ರಿತಾ ರೇ
Advertisement
Advertisement
ಈಗಾಗಲೇ ಅವರು ಕಥೆಯನ್ನು ಬರೆದು ಮುಗಿಸಿದ್ದಾರಂತೆ. ಚಿಯಾನ್ ವಿಕ್ರಮ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರಂತೆ. ಕೆಜಿಎಫ್ ಹುಟ್ಟಿದ್ದು ಹೇಗೆ? ಚಿನ್ನಕ್ಕಾಗಿ ಬ್ರಿಟಿಷರು ಹೂಡಿದ್ದ ಆಟವೇನು? ಈ ನೆಲದಲ್ಲಿ ತಮಿಳಿಗರ ಪಾತ್ರ ಏನಾಗಿತ್ತು? ಹೀಗೆ ಹಲವು ಸಂಗತಿಗಳನ್ನು ಚಿತ್ರದಲ್ಲಿ ತೋರಿಸಲಿದ್ದಾರಂತೆ. ಕನ್ನಡಿಗರಿಗಿಂತಲೂ ತಮಿಳಿಗರನ್ನು ಕರೆತಂದು ಈ ಚಿನ್ನದ ಗಣಿಯಲ್ಲಿ ಬಿಡುತ್ತಿದ್ದರಂತೆ ಬ್ರಿಟಿಷರು. ಪ್ರಮುಖವಾಗಿ ಕಥೆಯನ್ನು ಅವರು ಹೇಳಲಿದ್ದಾರಂತೆ.