ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಉಧಮ್‌ಪುರದಲ್ಲಿ ಗಸ್ತು ಪಡೆಯ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ.
ಈ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಆರಂಭಿಸಲಾಗಿದೆ. ಸಿಆರ್‌ಪಿಎಫ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಉಧಮ್‌ಪುರದ ದಾದು ಪ್ರದೇಶದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಒಳಗಾಯಿತು. ಇದನ್ನೂ ಓದಿ: ಇಂದಿರಾ ಗಾಂಧಿಯಂತೆ ಮಮತಾ ಬ್ಯಾನರ್ಜಿಯನ್ನೂ ಶೂಟ್ ಮಾಡಿ ಎಂದಿದ್ದ ವಿದ್ಯಾರ್ಥಿನಿ ಅರೆಸ್ಟ್
ಕಾಶ್ಮೀರಕ್ಕೆ ಹೋಲಿಸಿದರೆ ಹಲವಾರು ವರ್ಷಗಳ ಕಾಲ ಶಾಂತವಾಗಿದ್ದ ಜಮ್ಮು ಪ್ರದೇಶದಲ್ಲಿ ಇದೀಗಿ ಗುಂಡಿನ ಸದ್ದು ಕೇಳಿದೆ. ಜಮ್ಮುವಿನಲ್ಲಿ ನಿರ್ದಿಷ್ಟವಾಗಿ ಪೀರ್ ಪಂಜಾಲ್ ಶ್ರೇಣಿಯ ದಕ್ಷಿಣ ಭಾಗದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಉಲ್ಬಣಗೊಂಡಿವೆ. ಇದು ದಟ್ಟವಾದ ಕಾಡುಗಳು ಮತ್ತು ಭಯೋತ್ಪಾದಕರು ಅಡಗಿಕೊಳ್ಳಲು ಸೂಕ್ತವಾದ ಕಡಿದಾದ ಪರ್ವತಗಳನ್ನು ಹೊಂದಿದೆ.
ಆಗಸ್ಟ್ 14 ರಂದು ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸೇನಾ ಅಧಿಕಾರಿ ಕ್ಯಾಪ್ಟನ್ ದೀಪಕ್ ಸಿಂಗ್ ಹುತಾತ್ಮರಾಗಿದ್ದರು. ಘಟನೆಯಲ್ಲಿ ಓರ್ವ ನಾಗರಿಕ ಕೂಡ ಗಾಯಗೊಂಡಿದ್ದರು. ಇದನ್ನೂ ಓದಿ: ರಕ್ಷಾ ಬಂಧನ; ದುಡಿದು ಕೂಡಿಟ್ಟಿದ್ದ ಹಣವನ್ನು ತಂಗಿ ವಿನೇಶ್ ಫೋಗಟ್‌ಗೆ ಕೊಟ್ಟ ಅಣ್ಣ