ಬೆಂಗಳೂರು: ಗೃಹ ಸಚಿವ ಪರಮೇಶ್ವರ್ (Parameshwar) ಅವರು ರಾಜಣ್ಣ (Rajanna) ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ರಾಜಣ್ಣ ನೀಡಿದ ಮನವಿಗೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೃಹ ಸಚಿವರು ನಮ್ಮ ಪಕ್ಷದ ಹಿರಿಯ ಸಚಿವರು, ಪಕ್ಷದ ಅಧ್ಯಕ್ಷರು ಸಹ ಆಗಿದ್ದಾರೆ. ಅವರು ಸದನದಲ್ಲಿ ತನಿಖೆ ಮಾಡುತ್ತೇವೆ ಎಂದಿದ್ದರು. ಸಿಎಂ ಸಿದ್ದರಾಮಯ್ಯನವರು (CM Siddaramaiah) ಸಹ ತನಿಖೆ ನಡೆಸುವುದಾಗಿ ಹೇಳಿದ್ದರು ಎಂದರು. ಇದನ್ನೂ ಓದಿ: ಹನಿಟ್ರ್ಯಾಪ್ ಕೇಸ್ – ಪರಮೇಶ್ವರ್‌ಗೆ ದೂರು ನೀಡದೇ ಮನವಿ ಕೊಟ್ಟ ರಾಜಣ್ಣ
ಯಾರಿಗೆಲ್ಲ ಅನ್ಯಾಯ ಆಗಿದೆಯೋ ಅವರಿಗೆ ನ್ಯಾಯ ಕೊಡಿಸೋ ಕೆಲಸ ಪರಮೇಶ್ವರ್ ಮಾಡುತ್ತಾರೆ ಎಂದು ತಿಳಿಸಿದರು.
ಹನಿಟ್ರ್ಯಾಪ್ ಪ್ರಕರಣ ಪಕ್ಷಕ್ಕೆ ಮುಜುಗರ ತಂದಿದೆಯಾ ಎಂಬ ಪ್ರಶ್ನೆಗೆ, ಇದನ್ನು ನನಗೆ ಕೇಳಬೇಡಿ. ನೀವು ಯಾರನ್ನು ಕೇಳಬೇಕೋ ಎಂದುಕೊಂಡಿದ್ದೀರೋ ಅವರನ್ನು ಕೇಳಿ ಎನ್ನುವ ಮೂಲಕ ಡಿಕೆಶಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.