– ಬೇಕಿದ್ದರೆ ನಮ್ಮ ಯೋಜನೆ ಸರಿ ಇಲ್ಲ ಎನ್ನಲಿ
ತುಮಕೂರು: ನಮ್ಮ ಯೋಜನೆಗಳು ಸರಿ ಇಲ್ಲ ಎಂದು ಹೇಳಲಿ, ಅದು ಬಿಟ್ಟು ರಾಜ್ಯದ ತಾಯಂದಿರು ದಾರಿತಪ್ಪಿದ್ದಾರೆ ಎಂದು ಹೆಚ್‍ಡಿಕೆ ಹೇಳಿದ್ದಾರೆ. ಅವರ ಈ ಹೇಳಿಕೆ ಹಳ್ಳಿ ಭಾಷೆಯಲ್ಲಿ ಕೆಟ್ಟ ಅರ್ಥ ಬರುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ಅವರು ಮಾಜಿ ಸಿಎಂ ಕುಮಾರಸ್ವಾಮಿ (H.D Kumaraswamy )ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್‍ಡಿಕೆ ನೀಡಿದ್ದ ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರಸ್ವಾಮಿಯವರು ಸಿಎಂ ಆಗಿದ್ದವರು, ಅವರು ನಮ್ಮ ಯೋಜನೆಗಳ ಬಗ್ಗೆ ಮಾತನಾಡಲಿ. ನಮ್ಮ ಯೋಜನೆಗಳು ಸರಿ ಇಲ್ಲ ಎಂದು ಹೇಳಲಿ, ಆದರೆ ರಾಜ್ಯದ ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
ಹೆಚ್‍ಡಿಕೆ ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೆ? ಹಳ್ಳಿ ಭಾಷೆಯಲ್ಲಿ ಅದು ಕೆಟ್ಟ ಅರ್ಥ ಬರುತ್ತದೆ. ಹಾಗಾಗಿ ಅವರು ಒಂದು ಸ್ಪಷ್ಟನೆ ಕೊಡಬೇಕು. ಇಲ್ಲದಿದ್ದರೆ ಅವರು ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು. ನಮ್ಮ ಕಾರ್ಯಕ್ರಮ ವಿರೋಧ ಮಾಡಿದರೆ ಯಾವುದೇ ತಕರಾರಿಲ್ಲ, ಈ ರೀತಿ ಅವಹೇಳನಕಾರಿಯಾದಂತಹ ಮಾತನ್ನು ಆಡಬಾರದು. ಯಾರು ಬಡತನ ರೇಖೆಗಿಂತ ಕಡಿಮೆ ಇದ್ದಾರೆ, ಅವರಿಗೆ ಸಹಾಯವಾಗಲಿ ಎಂದು ಈ ಕಾರ್ಯಕ್ರಮ ಮಾಡಿದ್ದೇವೆ. ಅದನ್ನು ಸಹಿಸೋಕೆ ಆಗಿಲ್ಲ ಎಂದರೆ ಬೇರೆ ವಿಚಾರ, ಹೀಗೆಲ್ಲ ಹೇಳಬಾರದು ಎಂದು ಕಿಡಿಕಾರಿದ್ದಾರೆ.
Advertisement
Advertisement
ಬಿಜೆಪಿ ಪ್ರಣಾಳಿಕೆ ಬಿಡುಗಡೆ ವಿಚಾರವಾಗಿ, ನಾವು ಗ್ಯಾರಂಟಿ ಕೊಟ್ಟಿದ್ದೇವೆ ಎಂದು ನಮ್ಮನ್ನು ಟೀಕೆ ಮಾಡುತ್ತಿದ್ದರು. ಈಗ ಅವರೇ ಗ್ಯಾರಂಟಿ ನೀಡಲು ಹೊರಟಿದ್ದಾರೆ. ನಮ್ಮನ್ನ ಕಾಪಿ ಮಾಡಿದ್ದಾರೆ ಎಂದು ಹೇಳಬೇಕಾಗುತ್ತದೆ. ಜನರು ಒಪ್ಪುವುದು ಬಿಡುವುದು ಜನಗಳ ತಿರ್ಮಾನಕ್ಕೆ ಬಿಡುತ್ತೇವೆ. 15 ಲಕ್ಷ ರೂ. ಕೊಡುತ್ತೇವೆ ಎಂದಿದ್ದರು. ಆ ಸುಳ್ಳುಗಳು ಗ್ಯಾರಂಟಿ ರೂಪದಲ್ಲಿ ಇದ್ದವು, 2014-2019ರ ಸುಳ್ಳುಗಳು ಸತ್ಯವಾಗಲಿಲ್ಲ, ಅದೇ ರೀತಿ ಈಗ ಹೇಳುವ ಗ್ಯಾರಂಟಿ ಸುಳ್ಳುಗಳ ಕಂತೆ ಎಂದು ಹೇಳಬೇಕಾಗುತ್ತದೆ ಎಂದು ಬಿಜೆಪಿ ಪ್ರಣಾಳಿಕೆ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆ, ಮಾಜಿ ಸಿಎಂ ಹೆಚ್‍ಡಿಕೆ, ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ. ಗ್ಯಾರಂಟಿ ದುಡ್ಡು ಹೇಗೆ ಬರುತ್ತದೆ ಎಂದು ಅವರಿಗೆ ಗೊತ್ತಿಲ್ಲ ಎಂದಿದ್ದರು.