Connect with us

Bellary

ಮಸೀದಿಯಲ್ಲಿ ಮೊಬೈಲ್ ಬಳಸ್ಬೇಡಿ ಎಂದಿದ್ದಕ್ಕೆ ಮೌಲನಾರನ್ನು ಎತ್ತಂಗಡಿ ಮಾಡಿಸಿದ ಪರಮೇಶ್ವರ್ ನಾಯ್ಕ್

Published

on

ಬಳ್ಳಾರಿ: ಹೂವಿನಹಡಗಲಿ ಶಾಸಕ ಪರಮೇಶ್ವರ ನಾಯ್ಕ್ ಸಚಿವರಾಗಿದ್ದಾಗ ಫೋನ್ ಹೋಲ್ಡ್ ಮಾಡಿದ್ರು ಅಂತ ಕೂಡ್ಲಗಿ ಡಿವೈಎಸ್‍ಪಿ ಅನುಪಮಾ ಶಣೈ ಅವ್ರನ್ನೇ ಎತ್ತಂಗಡಿ ಮಾಡಿಸಿದ್ರು. ಈಗ ಮಸೀದಿಯಲ್ಲಿ ಮೊಬೈಲ್ ಫೋನ್ ಬಳಸಬೇಡಿ ಅಂತ ಪರಮೇಶ್ವರ್ ನಾಯ್ಕ್ ಆಪ್ತರಿಗೆ ಸೂಚಿಸಿದ್ದಕ್ಕೆ ಮುಸ್ಲಿಂ ಮೌಲಾನಾರಿಗೆ ಮಸೀದಿಯಿಂದಲೇ ಗೇಟ್‍ಪಾಸ್ ಕೊಟ್ಟಿದ್ದಾರೆ.

ನಾಯ್ಕ್ ಸಹಚರ ವರದಾ ಗೌಸ್ ಎಂಬವರ ಸಹೋದರ ನಿಯಾಜ್‍ಗೆ ಬುದ್ಧಿ ಹೇಳಿದ್ದಕ್ಕೆ ಧರ್ಮಗುರುಗಳು ಪರಮೇಶ್ವರ್ ನಾಯ್ಕ್ ವಕ್ರದೃಷ್ಠಿಗೆ ಗುರಿಯಾಗಿದ್ದಾರೆ. ಮೆಹಮೂದ್ ಆಲಂ 18 ವರ್ಷಗಳಿಂದ ಹಡಗಲಿಯ ಜಾಮಿಯಾ ಮಸೀದಿ ಧರ್ಮಗುರುವಾಗಿ ಸೇವೆ ಸಲ್ಲಿಸ್ತಿದ್ದಾರೆ. ಆದ್ರೆ ಮೌಲನಾರನ್ನು ಎತ್ತಂಗಡಿ ಮಾಡದಿದ್ದರೆ ದೊಂಬಿ, ಕೋಮು ಗಲಭೆ, ರಕ್ತಪಾತ ಸೃಷ್ಟಿಯಾಗುತ್ತೆ ಅಂತಾ ತಹಶೀಲ್ದಾರ್‍ರಿಂದ ವಕ್ಫ್ ಬೋರ್ಡ್‍ಗೆ ವರದಿ ಸಲ್ಲಿಸಿದ್ದಾರೆ. ಅಲ್ಲದೆ ಮೌಲನಾರ ವಿರುದ್ಧ ನಡೆದ ಷಂಡ್ಯತ್ರದ ಆಡಿಯೋ ಸಂಭಾಷಣೆ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಆಡಿಯೋದಲ್ಲೇನಿದೆ?: ನಾಳೆ ಬೆಳಗ್ಗೆ ಒಂದು ಡ್ರಾಪ್ ಮಾಡು, ಒಂದು ಕಾಪಿ ದೈವಕ್ಕೂ, ಒಂದು ಕಾಪಿ ಮಸೀದಿ ಕಮಿಟಿಗೆ ಕಳಿಸು. ಹತ್ತತ್ತು ಮಂದಿದಾ ಸಹಿ ಮಾಡಿಸ್ಕೋ. ಸಹಿ ಯಾಕೆ ಅಂತಾ ಅವರಿಗೆ ಏನೂ ಹೇಳ್ಬೇಡ. ನಾಲ್ಕು ಜನ ಮಿನಿಸ್ಟರ್ ಹತ್ತಿರ ಹೋಗಿ ಮಿನಿಸ್ಟರ್‍ನಿಂದ ಡಿವೈಎಸ್‍ಪಿಗೆ ಫೋನ್ ಮಾಡ್ಸಿ. ಆತ ಮೌಲನಾ ಆದ್ರೆ ಕೋಮು ಗಲಭೆ ಮಾಡಿಸ್ತಾನೆ. ಯೆಂಡಾ ಪಂಡಾ ಕಟ್ಟಿಸ್ತಾನೆ. ಪೊಲೀಸ್ರು ಎಂಎಲ್‍ಎ ಮಂತ್ರಿನಾ ಬೈತಾನೆ. ಊರಮ್ಮನ ಜಾತ್ರೆ ಮಾಡಬೇಡ ಅಂತಾನೆ ಅಂತ ಹೇಳು. ಮಸೀದಿ ಕಮಿಟಿ ರದ್ದು ಮಾಡೋದೆ ನಮ್ಮ ಕೆಲಸ ಗೊತ್ತಾಯ್ತಾ.

https://www.youtube.com/watch?v=UWEQaBKFeRw&feature=youtu.be

ಹೀಗೆ ಮಸಲತ್ತು ಮಾಡಿ ಮೌಲಾನರನ್ನ ಮಸೀದಿಯಿಂದ ಓಡಿಸಿದ್ದಕ್ಕೆ ಮುಸ್ಲಿಮರು ಸಿಟ್ಟಿಗೆದ್ದಿದ್ದಾರೆ. ಹೀಗಾಗಿ ಮಸೀದಿಯ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ವರದಾ ಗೌಸ್

ನಿಯಾಜ್‍

Click to comment

Leave a Reply

Your email address will not be published. Required fields are marked *