ಕಲರ್ಸ್ ಕನ್ನಡ ವಾಹಿನಿಯಿಂದ ಹೊರ ಬಂದು, ಇದೀಗ ಜಿಯೋ ಸ್ಟುಡಿಯೋಸ್ ಗೆ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವ ಪರಮೇಶ್ವರ ಗುಂಡ್ಕಲ್ (Parameshwar Gundkal) ಚಿತ್ರ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಸದ್ದಿಲ್ಲದೇ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾದ ಚಿತ್ರೀಕರಣವನ್ನೂ ಅವರು ಆರಂಭಿಸಿದ್ದಾರೆ.
ಪರಮೇಶ್ವರ ಗುಂಡ್ಕಲ್ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಆನಂತರ ಆ ಸಿನಿಮಾದ ಹೀರೋ ಯಾರು ಎಂದು ಎಕ್ಸಕ್ಲೂಸಿವ್ ನ್ಯೂಸ್ ನೀಡಿತ್ತು. ಇದೀಗ ಸದ್ದಿಲ್ಲದೇ ಸಿನಿಮಾದ ನಾಯಕಿಯನ್ನೂ ಪರಮ್ ಆಯ್ಕೆ ಮಾಡಿಕೊಂಡಿದ್ದಾರೆ. ಮುಂದಿನ ತಿಂಗಳು ಮೊದಲ ವಾರದಿಂದ ಶುರುವಾಗುವ ಚಿತ್ರೀಕರಣದಲ್ಲಿ ನಾಯಕಿ ಟೀಮ್ ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ:ಸರಕಾರದ ಮುಂದೆ ಹಳೆ ಬೇಡಿಕೆ ಇಟ್ಟ ರಿಷಬ್ ಶೆಟ್ಟಿ
ಹೌದು, ಪರಮ್ ಸದ್ಯ ಮೈಸೂರಿನಲ್ಲಿ ಚಿತ್ರೀಕರಣ ಶುರು ಮಾಡಿದ್ದಾರೆ. ಡಾಲಿ ಧನಂಜಯ್ ಸೇರಿದಂತೆ ಹಲವರು ಈ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಜೂನ್ ಮೊದಲ ವಾರದಿಂದ ಶುರುವಾಗುವ ಎರಡನೇ ಹಂತದ ಶೂಟಿಂಗ್ ನಲ್ಲಿ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿರುವ ಮೋಕ್ಷಾ ಕುಶಾಲ್ (Moksha Kushal) ಸೇರ್ಪಡೆಗೊಳ್ಳಲಿದ್ದಾರೆ.
ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿರುವ ಮೋಕ್ಷಾ, 2ನೇ ಸಿನಿಮಾಗೆ ಧನಂಜಯ್ (Dhananjay) ಜೊತೆ ನಟಿಸಲು ಅವಕಾಶ ಸಿಕ್ಕಿದೆ. ನಟಿಸಿರುವ ಮೊದಲ ಸಿನಿಮಾ ಇನ್ನೂ ರಿಲೀಸ್ ಆಗದೇ ಇದ್ದರೂ ಎರಡನೇ ಚಿತ್ರಕ್ಕೆ ಅವಕಾಶ ಸಿಕ್ಕಿದೆ. ಅದೂ ಆಡಿಷನ್ ಮಾಡಿ ಪರಮ್ ನಾಯಕಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.