ಬೆಂಗಳೂರು: ರಾಮೇಶ್ವರಂ ಕೆಫೆ (Rameshwaram Cafe) ಬ್ಲಾಸ್ಟ್ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ರಾಷ್ಟ್ರೀಯ ತನಿಖಾ ದಳ ಹಾಗೂ ಕರ್ನಾಟಕದ ಪೊಲೀಸರಿಗೆ ಗೃಹ ಸಚಿವ ಪರಮೇಶ್ವರ್ (G Parameshwar) ಅಭಿನಂದನೆ ಸಲ್ಲಿಸಿದ್ದಾರೆ.
Advertisement
ನಗರದಲ್ಲಿ ಸುದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆಬ್ರವರಿ 29 ರಂದು ರಾಮೇಶ್ವರಂ ಕೆಫೆ ಹೋಟೆಲ್ ನಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದು ಇಡಿ ವಿಶ್ವ ನೋಡಿದೆ. ಅವತ್ತು ಸಿಕ್ಕಿದ ಸಿಸಿಟಿವಿ ಫೂಟೇಜ್ ಸೇರಿದಂತೆ ಬೇರೆ ಬೇರೆ ಅಂಶಗಳನ್ನ ಪರಿಶೀಲಿಸಿ ತನಿಖೆ ಮಾಡುವಾಗ ಎನ್ ಐಎ ನವರು ಇನ್ವೆಸ್ಟಿಗೇಷನ್ ಆರಂಭಿಸಿದ್ದಾರೆ. ಅನೇಕ ಮಾಹಿತಿಯನ್ನು ಪೊಲೀಸರು ಕೊಟ್ಟಿದ್ದರು ಎಂದರು.
Advertisement
Advertisement
ಹಿಂದೆ ಶಿವಮೊಗ್ಗ ಬ್ಲಾಸ್ಟ್ ನಲ್ಲಿ ಇರುವ ವ್ಯಕ್ತಿಗಳು ಎಂಬ ಗುಮಾನಿ ಬಂದಾಗ ವ್ಯಕ್ತಿ ತೀರ್ಥ ಹಳ್ಳಿ ಮೂಲದ ವ್ಯಕ್ತಿ ಎಂಬುದು ಗೊತ್ತಾಗಿದೆ. ಮುಸಾವಿರ್ (Mussavir Hussain Shazeb) ಹಾಗೂ ಮತಿನ್ ಪಶ್ಚಿಮ ಬಂಗಾಳದ ದಿಗಾ ಎಂಬ ಊರಿನ ಹೋಟೆಲ್ ನಲ್ಲಿ ಸಿಕ್ಕಿದ್ದಾರೆ. ಇವರನ್ನು ಬೆಂಗಳೂರಿಗೆ ಕರೆತಂದು ಪೊಲೀಸರಿಗೆ ಹ್ಯಾಂಡ್ ಓವರ್ ಮಾಡಿ ತನಿಖೆ ಮಾಡ್ತಾರೆ. ಬಂಧನವನ್ನ ಎನ್ ಐಎ ಯವರು ಖಚಿತ ಪಡಿಸಿದ್ದಾರೆ ಎಂದು ತಿಳಿಸಿದರು.
Advertisement
ಎನ್ ಐಎಗೆ ಹಾಗೂ ಕರ್ನಾಟಕ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಇದೇ ವ್ಯಕ್ತಿಗಳು ಕಳೆದ ನಾಲ್ಕುವರೆ ವರ್ಷದಿಂದ ತಪ್ಪಿಸಿಕೊಂಡು ಓಡಾಡುತಿದ್ದರು ಎಂಬುದು ಗೊತ್ತಾಗಿದೆ. ಬೇರೆ ಸಂಘಟನೆ ಜೊತೆಗೆ ನಂಟು ಇದೆಯಾ ಇಲ್ವಾ ಎಂಬುದು ತನಿಖೆಯಿಂದ ಗೊತ್ತಾಗುತ್ತದೆ ಎಂದರು.
ನಮ್ಮ ಅಂದಾಜು ಶಿವಮೊಗ್ಗದಲ್ಲಿ ಮಾಡಿದ್ದು ಇವರೆ ಅಂತ ಅದು ತನಿಖೆಯಿಂದ ಅವರ ಹೇಳಿಕೆಯಿಂದ ಗೊತ್ತಾಗುತ್ತದೆ. ಬೇರೆ ಸಂಘಟನೆ ಅಥವ ಬೇರಾವುದೇ ಲಿಂಕ್ ಇದ್ದರೆ ಎನ್‌ಐಎ ತನಿಖೆ ನಡೆಸಬಹುದು ಇನ್ನೂ ತೀರ್ಮಾನ ಆಗಬೇಕು ಎಂದು ತಿಳಿಸಿದರು.