ಧರ್ಮಶಾಲಾ: ಕಾಂಗ್ರಾ ಜಿಲ್ಲೆಯಲ್ಲಿ ಟೇಕಾಫ್ ಆದ ಸ್ವಲ್ಪ ಕೆಲಹೊತ್ತಲ್ಲೇ ಟಂಡೆಮ್ ಪ್ಯಾರಾಗ್ಲೈಡರ್ (Paraglider Crash) ತಾಂತ್ರಿಕ ದೋಷದಿಂದ ಅಪಘಾತಕ್ಕೀಡಾಗಿ ಪೈಲಟ್ ಸಾವನ್ನಪ್ಪಿದ್ದಾರೆ.
ಪ್ಯಾರಾಗ್ಲೈಡರ್ ಸಮತೋಲನ ಕಳೆದುಕೊಂಡು ರಸ್ತೆಯ ಬಳಿ ಅಪಘಾತಕ್ಕೀಡಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ಬಿರ್ ಬಿಲ್ಲಿಂಗ್ ಪ್ಯಾರಾಗ್ಲೈಡಿಂಗ್ ಸ್ಥಳದಲ್ಲಿ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆ; ಮುಖಕ್ಕೆ ಕಪ್ಪು ಬಟ್ಟೆ ಮುಚ್ಚಿ, ಕೈ ಕಟ್ಟಿಕೊಂಡು ಜೈಲಿಂದ ಬಂದು ನಾಮಪತ್ರ ಸಲ್ಲಿಸಿದ ಗ್ಯಾಂಗ್‌ಸ್ಟರ್
ದುರಂತದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ನಿರ್ವಾಹಕರು ಎಲ್ಲಾ ಪ್ಯಾರಾಗ್ಲೈಡಿಂಗ್ ಚಟುವಟಿಕೆಗಳನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ‘ಪ್ಯಾರಾಗ್ಲೈಡರ್ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ತಾಂತ್ರಿಕ ದೋಷ ಕಾಣಿಸಿಕೊಂಡು, ಗಾಳಿಯಲ್ಲಿ ಸಮತೋಲನ ಕಳೆದುಕೊಂಡು, ಉಡಾವಣಾ ಸ್ಥಳದ ಕೆಳಗಿನ ರಸ್ತೆಯ ಬಳಿ ಅಪಘಾತಕ್ಕೀಡಾಯಿತು. ಪೈಲಟ್ ಸಾವನ್ನಪ್ಪಿದ್ದು, ಜೊತೆಗಿದ್ದ ಪ್ರವಾಸಿ ಗಾಯಗೊಂಡಿದ್ದಾರೆ’ ಎಂದು ಬಿರ್ ಬಿಲ್ಲಿಂಗ್ ಪ್ಯಾರಾಗ್ಲೈಡಿಂಗ್ ಅಸೋಸಿಯೇಷನ್ ಅಧಿಕಾರಿಗಳು ತಿಳಿಸಿದ್ದಾರೆ.
ಮಂಡಿ ಜಿಲ್ಲೆಯ ಬರೋಟ್ ನಿವಾಸಿ ಮೋಹನ್ ಸಿಂಗ್ ಎಂದು ಗುರುತಿಸಲಾದ ಪೈಲಟ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳೀಯ ನಿವಾಸಿಗಳು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಪೈಲಟ್ ಮತ್ತು ಪ್ರವಾಸಿಗರಿಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದರು. ಆದಾಗ್ಯೂ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಿಂಗ್ ಸಾವನ್ನಪ್ಪಿದರು, ಆದರೆ, ಪ್ರವಾಸಿಗನಿಗೆ ಪ್ರಥಮ ಚಿಕಿತ್ಸೆ ನೀಡಿದ ನಂತರ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಅಪಘಾತಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಮತ್ತು ಮಾಹಿತಿಯನ್ನು ಸ್ಥಳದಲ್ಲಿ ನಿಯೋಜಿಸಲಾದ ಮಾರ್ಷಲ್‌ಗಳು ಮತ್ತು ತಾಂತ್ರಿಕ ಸಲಹೆಗಾರರಿಂದ ಕೇಳಲಾಗಿದೆ ಎಂದು ಕಾಂಗ್ರಾದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧಿಕಾರಿ ವಿನಯ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಮರಾಠಿ ಮಾತನಾಡದಿದ್ದಕ್ಕೆ 6 ವರ್ಷದ ಮಗಳನ್ನೇ ಕೊಂದ ತಾಯಿ!

