ಮಕ್ಕಳು ಹಠ ಮಾಡುತ್ತಿದ್ದಾಗ ಅಥವಾ ತುಂಟಾಟ ಮಾಡುತ್ತಿದ್ದಾಗ ಐಸ್‌ಕ್ರೀಮ್ ಕೊಡಿಸುತ್ತೇನೆ ಎಂದರೆ ಸಾಕು ಸುಮ್ಮನಾಗಿಬಿಡುತ್ತಾರೆ. ಐಸ್‌ಕ್ರೀಮ್ ಚಿಕ್ಕವರನ್ನು ಮಾತ್ರವಲ್ಲದೇ ದೊಡ್ಡವರನ್ನೂ ಆಕರ್ಷಿಸುತ್ತದೆ. ಐಸ್‌ಕ್ರೀಮ್ ತಿನ್ನಬೇಕೆಂದರೆ ಅಂಗಡಿಗಳಿಗೆ ಹೋಗಿ ತರಬೇಕಾಗಿಲ್ಲ. ಇದನ್ನು ಮನೆಯಲ್ಲಿಯೇ ತಯಾರಿಸಬಹುದು. ಇವತ್ತು ಹೋಮ್‌ಮೇಡ್ ಪಪ್ಪಾಯ ಐಸ್‌ಕ್ರೀಮ್ ರೆಸಿಪಿಯನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಹಾಗಿದ್ದರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಟ್ರೈ ಮಾಡಿ ನೋಡಿ ಸ್ಪೈಸೀ ಸಿಹಿಗೆಣಸಿನ ವೆಡ್ಜಸ್
Advertisement
ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ ಪಪ್ಪಾಯ ಹಣ್ಣು – 1 ಕಪ್
ಕೊಬ್ಬಿನಾಂಶವಿರುವ ಹಾಲು – 1 ಲೀಟರ್
ಕಂಡೆನ್ಸ್ಡ್ ಮಿಲ್ಕ್ – 20 ಎಂಎಲ್
ಕಸ್ಟರ್ಡ್ ಪೌಡರ್ – 2 ಚಮಚ
ಸಕ್ಕರೆ – 140 ಗ್ರಾಂ
Advertisement
Advertisement
ಮಾಡುವ ವಿಧಾನ:
Advertisement
- ಮೊದಲಿಗೆ ಪಪ್ಪಾಯ ಹಣ್ಣನ್ನು ಮಿಕ್ಸಿ ಜಾರಿಗೆ ಹಾಕಿ ಚನ್ನಾಗಿ ರುಬ್ಬಿಕೊಳ್ಳಿ.
- ಬಳಿಕ ಒಂದು ಬೌಲಿಗೆ ಕಸ್ಟರ್ಡ್ ಪೌಡರ್ ಹಾಕಿ ಅದಕ್ಕೆ ಕಾಲು ಕಪ್ ಹಾಲನ್ನು ಹಾಕಿ ಮಿಕ್ಸ್ ಮಾಡಿ ಬದಿಗಿಡಿ.
- ನಂತರ ಉಳಿದ ಹಾಲನ್ನು ಚನ್ನಾಗಿ ಕುದಿಸಿ. ಹಾಲಿನ ಪ್ರಮಾಣ ಅದರ ಅರ್ಧದಷ್ಟು ಕುಂದಬೇಕು. ಅಲ್ಲಿಯವರೆಗೆ ಕುದಿಸಿಕೊಳ್ಳಿ. ಈಗ ಅದಕ್ಕೆ ಮಿಕ್ಸ್ ಮಾಡಿಟ್ಟಿದ್ದ ಕಸ್ಟರ್ಡ್ ಪೌಡರ್ ಮಿಶ್ರಣವನ್ನು ಹಾಕಿಕೊಳ್ಳಿ. ನಂತರ ಅದಕ್ಕೆ ಸಕ್ಕರೆ ಸೇರಿಸಿಕೊಂಡು ಚನ್ನಾಗಿ ತಿರುವಿಕೊಳ್ಳಿ.
- ಬಳಿಕ ಇದಕ್ಕೆ ರುಬ್ಬಿದ ಪಪ್ಪಾಯ ಮಿಶ್ರಣವನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕಂಡೆನ್ಸ್ಡ್ ಮಿಲ್ಕ್ ಸೇರಿಸಿಕೊಂಡು ಒಂದು ಬಾರಿ ತಿರುವಿಕೊಳ್ಳಿ. ಬಳಿಕ ಗ್ಯಾಸ್ ಆಫ್ ಮಾಡಿ ಮಿಶ್ರಣವನ್ನು ತಣ್ಣಗಾಗಲು ಬಿಡಿ.
- ನಂತರ ಈ ಮಿಶ್ರಣವನ್ನು ಗಾಳಿಯಾಡದ ಬಾಕ್ಸ್ಗೆ ಹಾಕಿ ಫ್ರೀಜರ್‌ನಲ್ಲಿ ಗಟ್ಟಿಯಾಗಲು ಇಡಿ. ಸುಮಾರು 6ರಿಂದ 7 ಗಂಟೆಯವರೆಗೆ ಫ್ರೀಜ್ ಮಾಡಿದ ಬಳಿಕ ಸರ್ವಿಂಗ್ ಬೌಲ್‌ಗೆ ಹಾಕಿ ಮಕ್ಕಳಿಗೆ ಸವಿಯಲು ಕೊಡಿ. ಇದನ್ನೂ ಓದಿ: ಚೈನೀಸ್ ಬಾದಾಮಿ ಕುಕೀಸ್ ಮಾಡೋಕೆ ತುಂಬಾ ಸಿಂಪಲ್