ತಿರುವನಂತಪುರಂ: ತಾನು ನೆಟ್ಟ ಗಿಡದಲ್ಲಿ ಹಣ್ಣು ಕೀಳುವುದು ಬೇಡ ಎಂದರೂ ಪಪ್ಪಾಯ ಕೀಳಲು ಮುಂದಾದ ಅತ್ತೆಯ ವರ್ತನೆಯಿಂದ ಕುಪಿತಗೊಂಡ ಸೊಸೆ ಆಕೆಯನ್ನು ಚಾಕುವಿನಿಂದ ಇರಿದಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಹಲ್ಲೆ ನಡೆಸಿದ ಸೊಸೆಯನ್ನು 33 ವರ್ಷದ ಸಿಂಧು ಎಂದು ಗುರುತಿಸಲಾಗಿದ್ದು, ಹಲ್ಲೆಗೊಳಗಾದ 67 ವರ್ಷದ ಸರೋಜಿನಿ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸೊಸೆ ಬೇಡವೆಂದರು ಹಣ್ಣು ಕೀಳಲು ಹೋಗಿ ಅತ್ತೆ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಳು.
ತೋಟದಲ್ಲಿ ಬೆಳೆದಿದ್ದ ಪಪ್ಪಾಯ ಕೀಳಲು ಹೋದ ಅತ್ತೆಗೆ ಸೊಸೆ ವಿರೋಧಿಸಿದ್ದಾಳೆ. ಆದರೂ ಕೂಡ ಆಕೆಯ ಮಾತನ್ನು ನಿರ್ಲಕ್ಷಿಸಿದ ಅತ್ತೆ ಪಪ್ಪಾಯ ಕೀಳಲು ಕೈ ಹಾಕಿದ್ದಾಳೆ. ಈ ವೇಳೆ ಸಿಟ್ಟಿಗೆದ್ದ ಸೊಸೆ ಜೋರಾಗಿ ಚಾಕುವಿನಿಂದ ಅತ್ತೆಯತ್ತ ಬೀಸಿದ್ದಾಳೆ. ಅತ್ತೆಯ ಬಲಗೈಗೆ ಬಿದ್ದಿದೆ. ಬಲಗೈ ಸೀಳಿದ್ದು, ಸದ್ಯ ಗಂಭೀರವಾದ ಗಾಯವಾಗಿಲ್ಲ. ಇದನ್ನೂ ಓದಿ: ನನಗೆ ಬರುವ ಸಂಬಳ ಸಾಕಾಗ್ತಿಲ್ಲ: ಮಾಯಣ್ಣ
ಹೇಳಿಕೆ ನೀಡಿರುವ ಸೊಸೆ ನಾನು ನೆಟ್ಟು ಬೆಳೆಸಿದ ಗಿಡದಲ್ಲಿ ಹಣ್ಣು ಕೀಳಲು ಮುಂದಾದ ಕಾರಣ ಈ ಹಲ್ಲೆ ನಡೆಸಿರುವುದಾಗಿ ಹೇಳಿಕೆ ನೀಡಿದ್ದಾಳೆ. ಈ ಘಟನೆ ಸಂಬಂಧ ಕಣ್ಣೂರು ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವೇಳೆ ಅತ್ತೆ ಮತ್ತು ಸೊಸೆ ನಡುವೆ ಸದಾ ವಾಗ್ವಾದ ನಡೆಯುತ್ತಿತ್ತು ಎಂಬುದು ತಿಳಿದು ಬಂದಿದ್ದು, ಸೊಸೆ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಾನು ಪ್ರಾಮಾಣಿಕ ಅಧಿಕಾರಿ, ತೆರಿಗೆ ಕಟ್ಟುತ್ತಿದ್ದೇನೆ: ಎಲ್.ಸಿ.ನಾಗರಾಜ್