– ಜಯಾ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ಆಗ್ಬೇಕು
ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಜಯಲಲಿತಾ ಸಮಾಧಿ ಬಳಿ ಧ್ಯಾನ ಮಗ್ನರಾಗಿದ್ದ ಪನ್ನೀರ್ ಸೆಲ್ವಂ ಶಶಿಕಲಾ ವಿರುದ್ಧ ತಿರುಗಿಬಿದದ್ದಿದ್ದಾರೆ. ಜಯಲಲಿತಾ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಒಂದು ಬಾರಿಯೂ ಅವರನ್ನು ನೋಡಲು ನನ್ನನ್ನು ಬಿಟ್ಟಿರಲಿಲ್ಲ ಎಂದು ಪನ್ನೀರ್ ಸೆಲ್ವಂ ಟ್ವೀಟ್ ಮಾಡಿದ್ದಾರೆ.
ನಾನು ಪ್ರತಿದಿನ ಅಮ್ಮನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗುತ್ತಿದ್ದೆ. ಆದ್ರೆ ಒಂದು ಬಾರಿಯೂ ಅವರನ್ನು ಭೇಟಿಯಾಗುವ ಅವಕಾಶ ಸಿಗಲಿಲ್ಲ ಎಂದು ಒನ್ನೀರ್ ಸೆಲ್ವಂ ಹೇಳಿದ್ದಾರೆ. ವರದಿಗಾರರೊಂದಿಗೆ ಮಾತನಾಡಿರುವ ಅವರು, ಇನ್ಫೆಕ್ಷನ್ ಆಗುತ್ತದೆ ಎಂಬ ಭಯದಿಂದ ಜಯಲಲಿತಾರನ್ನು ನೋಡಲು ಆಗಲಿಲ್ಲ ಎಂದು ಪ್ರತಿದಿನ ನನ್ನ ಕುಟುಂಬದವರಿಗೆ ಹೇಳುತ್ತಿದೆ. ಪ್ರತಿದಿನ ನನ್ನ ಕುಟುಂಬದವರು, ನೀವು ಆಸ್ಪತ್ರೆಯಲ್ಲಿ ಅಮ್ಮನನ್ನು ನೋಡಿದ್ರಾ ಅಂತ ಕೇಳ್ತಿದ್ರು. ಹೌದು ಅಂತ ಹೇಳಬೇಕು ಎಂದುಕೊಂಡರೂ ಸುಳ್ಳು ಹೇಳಲು ಮನಸ್ಸಾಗಲಿಲ್ಲ ಎಂದಿದ್ದಾರೆ.
Advertisement
ಜಯಲಲಿತಾ ಚಿಕಿತ್ಸೆಯ ಬಗ್ಗೆ ಅನುಮಾನಗಳಿದ್ದು, ಅದಕ್ಕೆ ಉತ್ತರ ಬೇಕು. ಜಯಲಲಿತಾ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ. ಮಂಗಳವಾರದಂದು ಎಐಎಡಿಂಕೆಯ ಕಾರ್ಯಕರ್ತ ಪಿಹೆಚ್ ಪಂಡಿಯನ್, ಜಯಲಲಿತಾ ಅವರ ಸಾವು ಸಹಜ ಸಾವಲ್ಲ ಎಂದು ಆರೋಪಿಸಿದ್ದರು.
Advertisement
ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾರನ್ನು ಶಶಿಕಲಾ ಸೇರಿದಂತೆ ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಭೇಟಿ ಮಾಡಿದ್ದರು. ಸಿಎಂಬರ್ 5 ರಂದು ಜಯಲಲಿತಾ ನಿಧನರಾದ್ರು.