ಬೆಂಗಳೂರು: ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯೋರ್ವನ (College Student) ಮೇಲೆ ಪಂಜುರ್ಲಿ ದೈವ (Panjurli Daiva) ಆವಾಹನೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ (PUC Student) ಕಾಂತಾರ ಸಿನಿಮಾ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ದೈವ ಆವಾಹನೆಯಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಮತ್ತೆ ಕರೆಂಟ್ ಶಾಕ್‍ಗೆ ಸಜ್ಜು- ಹೋಟೆಲ್ ಉದ್ಯಮದಿಂದ ವ್ಯಾಪಕ ಆಕ್ರೋಶ
ಬೆಂಗಳೂರಿನ ಹೊಂಬೇಗೌಡ ಪಿಯು ಕಾಲೇಜು (Hombegowda PU College) ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿಶಾಲ್ ಕಾಂತಾರ ಸಿನಿಮಾದ (Kantara Cinema) `ವರಾಹ ರೂಪಂ’ ಹಾಡಿಗೆ ನೃತ್ಯ ಮಾಡುತ್ತಿದ್ದನು. ಈ ವೇಳೆ ವಿದ್ಯಾರ್ಥಿ ಪಂಜುರ್ಲಿ ದೈವದ ವೇಷ ಧರಿಸಿದ್ದ. ಕೆಲ ನಿಮಿಷಗಳ ಬಳಿಕ ವೇದಿಕೆಯಿಂದ ಕೆಳಗೆ ಬಂದು ನರ್ತಿಸುತ್ತಿದ್ದಂತೆ ದೈವ ಆವಾಹನೆಯಾಗಿದೆ. ಬಳಿಕ ಸಹಪಾಠಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಯನ್ನು ಸಮಾಧಾನಪಡಿಸಿದ್ದಾರೆ. ಕಾರ್ಯಕ್ರಮ ಆಯೋಜಕರು ತಕ್ಷಣವೇ ಹಾಡು ನಿಲ್ಲಿಸಿದ್ದಾರೆ.
ಸದ್ಯ ಈ ದೃಶ್ಯಕಂಡು ವಿದ್ಯಾರ್ಥಿ ಪೋಷಕರು ಶಾಖ್ ಆಗಿದ್ದಾರೆ. ಇದನ್ನೂ ಓದಿ: ಪತಿಯನ್ನ ಅರೆಸ್ಟ್ ಮಾಡ್ತಾರೆ ಅಂತಾ ಹೆದರಿ ನವ ವಿವಾಹಿತೆ ಆತ್ಮಹತ್ಯೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k