– ಹೆತ್ತ ಮಗ ಸೇರಿ ನಾಲ್ಕು ಮಕ್ಕಳನ್ನು ಹತ್ಯೆ ಮಾಡಿದ್ದಳು ಆರೋಪಿ
ಚಂಡೀಗಢ: ತನಗಿಂತ ಯಾರು ಕೂಡ ಸುಂದರವಾಗಿ ಕಾಣಬಾರದು ಅಂತ 6 ವರ್ಷದ ಹುಡುಗಿಯನ್ನು ಮಹಿಳೆ ಹತ್ಯೆ ಮಾಡಿರುವ ಘಟನೆ ಹರಿಯಾಣದ (Haryana) ಪಾಣಿಪತ್‌ನಲ್ಲಿ ನಡೆದಿದೆ.
ತನ್ನ 6 ವರ್ಷದ ಮುದ್ದು ಸೊಸೆಯನ್ನೇ ಕೊಲೆ ಮಾಡಿದ್ದಕ್ಕಾಗಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್ ಸಹಚರ ಗ್ಯಾಂಗ್ ವಾರ್‌ನಲ್ಲಿ ಸಾವು
ಸೋನಿಪತ್‌ನಲ್ಲಿ ಮದುವೆ ಕಾರ್ಯಕ್ರಮಕ್ಕಾಗಿ ಇಡೀ ಕುಟುಂಬ ಒಟ್ಟುಗೂಡಿತ್ತು. ಈ ವೇಳೆ, ಆರೋಪಿ ಪೂನಂ ತನ್ನ ಸೊಸೆಯನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಂದಿದ್ದಾಳೆ. ಪೂನಂ ಈ ಹಿಂದೆ 2023 ರಲ್ಲಿ ತನ್ನ ಮಗ ಸೇರಿದಂತೆ ಮೂವರು ಮಕ್ಕಳನ್ನು ಕೊಂದಿದ್ದಳು. ಅವರನ್ನು ಸಹ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಳು.
ವಿಧಿ (6) ಕೊಲೆಯಾದ ಮಗು. ಪಾಣಿಪತ್‌ನ ಇಸ್ರಾನಾ ಪ್ರದೇಶದ ನೌಲ್ತಾ ಗ್ರಾಮಕ್ಕೆ ತಮ್ಮ ಕುಟುಂಬದೊಂದಿಗೆ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ಬಂದಿದ್ದಳು. ಆಕೆಯ ಅಜ್ಜ ಪಾಲ್ ಸಿಂಗ್, ಅಜ್ಜಿ ಓಂವತಿ, ತಂದೆ ಸಂದೀಪ್, ತಾಯಿ ಜೊತೆ ಬಂದಿದ್ದಳು.
ಮದುವೆ ಮನೆಯಲ್ಲಿ ವಿಧಿ ಕಾಣೆಯಾಗಿದ್ದಳು. ಕುಟುಂಬದವರು ಎಲ್ಲಾ ಕಡೆ ಹುಡುಕಾಡಿದರು. ವಿಧಿಯ ಅಜ್ಜಿ ತನ್ನ ಸಂಬಂಧಿಕರ ಮನೆಯ ಮೊದಲ ಮಹಡಿಯಲ್ಲಿರುವ ಸ್ಟೋರ್ ರೂಂಗೆ ಹೋಗಿ ನೋಡಿದಾಗ ಮೃತದೇಹ ಕಂಡುಬಂದಿದೆ.
ತನಗಿಂತ ಯಾರೂ ಸುಂದರವಾಗಿ ಕಾಣಬಾರದು ಅಂತ ಪೂನಂ ಬಯಸಿದ್ದಳು. ಚಿಕ್ಕ ಮಕ್ಕಳು ಮತ್ತು ಸುಂದರ ಹುಡುಗಿಯರನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದಳು. ಇದುವರೆಗೆ ನಾಲ್ಕು ಮಕ್ಕಳನ್ನು ಪೂನಂ ಹತ್ಯೆ ಮಾಡಿದ್ದಾರೆ. ತಾನು ಹೆತ್ತ ಮಗನನ್ನು ಕೂಡ ಇದೇ ರೀತಿ ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಂದಿದ್ದಾಳೆಂಬುದು ಪೊಲೀಸರು ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಪೋಕ್ಸೋ ಕೇಸ್ – ಬಿಎಸ್‌ವೈಗೆ ಸುಪ್ರೀಂನಿಂದ ಬಿಗ್ ರಿಲೀಫ್
2023 ರಲ್ಲಿ ಪೂನಂ ತನ್ನ ಅತ್ತಿಗೆಯ ಮಗಳನ್ನು ಕೊಂದಿದ್ದಳು. ಅದೇ ವರ್ಷ ಅನುಮಾನ ಬರದಂತೆ ತನ್ನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಳು. ಈ ವರ್ಷದ ಆಗಸ್ಟ್‌ನಲ್ಲಿ ಪೂನಂ ಸಿವಾ ಗ್ರಾಮದಲ್ಲಿ ಮತ್ತೊಬ್ಬ ಹುಡುಗಿಯನ್ನು ಕೊಲೆ ಮಾಡಿದ್ದಳು. ಈ ಎಲ್ಲಾ ಪ್ರಕರಣಗಳಲ್ಲೂ ಮಕ್ಕಳ ಸಾವನ್ನು ಆಕಸ್ಮಿಕ ಎಂದು ಬಿಂಬಿಸಲಾಗಿತ್ತು.

