ಇಸ್ಲಾಮಾಬಾದ್: ಭಾರತದ ದಾಳಿಯಿಂದ (India’s Strike) ದಿವಾಳಿಯತ್ತ ಸಾಗುತ್ತಿರುವ ಪಾಕಿಸ್ತಾನದಲ್ಲೀಗ ( ಇಂಧನ ಕೊರತೆ ಎದುರಾಗಿದೆ. ರಾಜಧಾನಿ ಇಸ್ಲಾಮಾಬಾದ್ ಆಡಳಿತ ಮುಂದಿನ 48 ಗಂಟೆಗಳ ಕಾಲ ಎಲ್ಲಾ ಪೆಟ್ರೋಲ್ ಪಂಪ್‌ಗಳನ್ನು ಸಂಪೂರ್ಣವಾಗಿ ಬಂದ್ (Petrol Pumps Shut) ಮಾಡುವಂತೆ ಆದೇಶ ಹೊರಡಿಸಿದೆ.
ಇಸ್ಲಾಮಾಬಾದ್ (Islamabad) ಆಡಳಿತ ಹೊರಡಿಸಿದ ಅಧಿಕೃತ ಸೂಚನೆಯಲ್ಲಿ ನಿಖರ ಕಾರಣ ಉಲ್ಲೇಖಿಸದೇ, ಎಲ್ಲಾ ಪೆಟ್ರೋಲ್ ಪಂಪ್‌ಗಳನ್ನು ಕೂಡಲೇ ಮುಚ್ಚಬೇಕೆಂದು ಕಟ್ಟಾಜ್ಞೆ ಮಾಡಿದೆ. ಈ ಆದೇಶ ಶನಿವಾರ ಮುಂಜಾನೆ ಹೊರಡಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಶಕ್ತಿಶಾಲಿ ಅಸ್ತ್ರಗಳಿಂದಲೇ ಪಾಕ್‌ಗೆ ಶತಕೋಟಿ ಲಾಸ್ – ದಿವಾಳಿಯತ್ತ ʻಭಿಕಾರಿಸ್ತಾನʼ
ಇದರಿಂದ 48 ಗಂಟೆ ವರೆಗೆ ಇಸ್ಲಾಮಾಬಾದ್‌ನಲ್ಲಿ ಖಾಸಗಿ ವಾಹನಗಳು, ಸಾರ್ವಜನಿಕ ಸಾರಿಗೆ ಹಾಗೂ ವಾಣಿಜ್ಯ ವಾಹನಗಳಿಗೆ ಇಂಧನ ಲಭ್ಯವಾಗದೇ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದೆ. ಜೊತೆಗೆ ಈ ಬೆಳವಣಿಗೆ ಪಾಕ್ ಸರ್ಕಾರಕ್ಕೆ ಭಾರೀ ನಷ್ಟ ತಂದೊಡ್ಡುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: ದೆಹಲಿಗೆ ಬರುತ್ತಿದ್ದ ಪಾಕ್ ಬ್ಯಾಲಿಸ್ಟಿಕ್ ಮಿಸೈಲ್ ಹರ್ಯಾಣದಲ್ಲೇ ಛಿದ್ರ!
ಭಾರತದ ʻಆಪರೇಷನ್ ಸಿಂಧೂರʼ (Operation Sindoor) ಎಫೆಕ್ಟ್ ಪಾಕಿಸ್ತಾನದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಭಾರತ ನಡೆಸಿದ ವಾಯುದಾಳಿಗೆ ಪತರುಗುಟ್ಟಿಹೋಗಿರುವ ಪಾಕ್ ತಾನು ನಂಬಿದ್ದ ಶಕ್ತಿಶಾಲಿ ಅಸ್ತ್ರಗಳಿಂದಲೇ ಶತಕೋಟಿ ನಷ್ಟ ಅನುಭವಿಸಿದೆ. ಇದರಿಂದ ಪಾಕಿಸ್ತಾನದ ಆರ್ಥಿಕ ಸ್ಥಿತಿ ಈಗಾಗಲೇ ಅಧೋಗತಿ ತಲುಪಿದ್ದು, ದಿವಾಳಿಯ ಆಗುವ ಹಂತಕ್ಕೆ ತಲುಪಿದೆ. ಇದನ್ನೂ ಓದಿ: ವಾಯುನೆಲೆಯ ಮೇಲೆ ಭಾರತ ದಾಳಿ – ಇಸ್ಲಾಮಾಬಾದ್, ರಾವಲ್ಪಿಂಡಿಯಲ್ಲಿ ಅಲ್ಲೋಲ ಕಲ್ಲೋಲ
ಭಾರತದ ವಿರುದ್ಧದ ಹೋರಾಟಕ್ಕೂ ಭಿಕ್ಷೆ ಬೇಡುವ ಪರಿಸ್ಥಿತಿಗೆ ತಲುಪಿದೆ. ಭಾರತದ ದಾಳಿಯಿಂದ ತನಗೆ ಭಾರೀ ನಷ್ಟವಾಗವಾಗಿದ್ದು ಸಾಲ ನೀಡುವಂತೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಬೇಡಿಕೆ ಇಟ್ಟಿದೆ. ಪಾಕಿಸ್ತಾನದ ಆರ್ಥಿಕ ಇಲಾಖೆಯ ಆರ್ಥಿಕ ವ್ಯವಹಾರಗಳ ವಿಭಾಗದ ಸಾಮಾಜಿಕ ಜಾಲತಾಣ ʻxʼ ಖಾತೆಯಲ್ಲಿ ಸಾಲಕ್ಕಾಗಿ ಅಧಿಕೃತ ಮನವಿ ಮಾಡಿಕೊಂಡಿದೆ. ಇದು ವಿಶ್ವಮಟ್ಟದಲ್ಲಿ ಟೀಕೆಗೆ ಒಳಗಾಗುತ್ತಿದ್ದಂತೆ ವರಸೆ ಬದಲಿಸಿದ ಪಾಕ್ ʻತನ್ನ ಎಕ್ಸ್ ಖಾತೆ ಹ್ಯಾಕ್ ಆಗಿದೆʼ ಎಂದು ಹೇಳಿಕೊಂಡಿದೆ. ಇದಾದ ಬಳಿಕ ಭಾರತದ ಆಕ್ಷೇಪದ ನಡುವೆಯೂ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) 2 ಕಂತುಗಳಲ್ಲಿ 19 ಸಾವಿರ ಕೋಟಿ ಸಾಲ ಮಂಜೂರು ಮಾಡಿದೆ.