ಬೆಂಗಳೂರು: ನಗರದಲ್ಲಿ ಚಿರತೆ (Leopard) ಕಾಟ ಆರಂಭವಾಗಿ ಮೂರು ದಿನ ಕಳೆದ್ರು, ಅತ್ತ ಚಿರತೆಯೂ ಸಿಕ್ತಿಲ್ಲ, ಇತ್ತ ಜನರ ಆತಂಕವು ದೂರವಾಗ್ತಿಲ್ಲ. ಆದರೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಮಾತ್ರ ಚಿರತೆಯ ಚಮಕ್‍ಗೆ ಥಂಡಾ ಹೊಡೆದಿದ್ದಾರೆ.
Advertisement
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಚಿರತೆ ಕಾಟದಿಂದ ಮತ್ತಷ್ಟ ಆತಂಕ ಹೆಚ್ಚಾಗಿದೆ. ಕಳೆದ ಮೂರು ದಿನದಿಂದ ಅಧಿಕಾರಿಗಳಿಟ್ಟ ಬೋನಿಗೆ ಬೀಳದ ಚಿರತೆ ಅತ್ತ ಅಧಿಕಾರಿಗಳನ್ನು, ಇತ್ತ ಸ್ಥಳೀಯರನ್ನು ಮತ್ತಷ್ಟು ಕಂಗೆಡಿಸಿದೆ. ದಿನ ಬೆಳಗಾದರೆ ಜನರು ಓಡಾಡುವುದೇ ದುಸ್ತರವಾಗಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ವೇದ ಟೀಸರ್ ಬಿಡುಗಡೆ – ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು
Advertisement
Advertisement
ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗ್ತಿದೆಯೇ ಹೊರತು ಚಿರತೆ ಮಾತ್ರ ಸಿಕ್ಕಿ ಬೀಳ್ತಿಲ್ಲ. ನಿನ್ನೆ ರಾತ್ರಿ ಕೂಡ ಅರಣ್ಯ ಸಿಬ್ಬಂದಿ ವಿಶೇಷ ಕೂಂಬಿಂಗ್ ಮಾಡಿದ್ದು, ಚಿರತೆಯ ಜಾಡು ಮತ್ತಷ್ಟು ನಿಗೂಢವಾಗಿದೆ. ಅತ್ತ ಚಿರತೆ ಬಂಧನಕ್ಕಾಗಿ ಕೆಲ ಕಡೆ ಬೋನ್ ಇಟ್ಟಿದ್ದರೂ ಪ್ರಯೋಜನವಾಗ್ತಿಲ್ಲ. ಇನ್ನೊಂದೆಡೆ ಕಂಡು ಮರೆಯಾಗಿರುವ ಚಿರತೆಯಿಂದ ಜನವಸತಿ ಪ್ರದೇಶದಲ್ಲಿ ಮತ್ತಷ್ಟು ಆತಂಕ ಮನೆಮಾಡಿದ್ದು, ಎಚ್ಚರವಾಗಿರುವಂತೆ ಅರಣ್ಯ ಇಲಾಖಾಧಿಕಾರಿಗಳು ಎಚ್ಚರಿಕೆ ನೀಡ್ತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಬಲಗೈ ಬಂಟ ಕಪನೂರ್ ಬಂಧನ
Advertisement
ಸೊಂಪುರ, ಚಿಕ್ಕಗೌಡನಪಾಳ್ಯ, ಜಟ್ಟಿಗಾನಹಳ್ಳಿ ಸೇರಿದಂತೆ ಸುತ್ತಮುತ್ತ ಹಳ್ಳಿಗಳ ಅನೇಕ ಕಡೆ ಕೂಂಬಿಂಗ್ ನಡೆಯುತ್ತಿದೆ. ಆದರೆ ಚಿರತೆ ಮಾತ್ರ ಪತ್ತೆಯಾಗುತ್ತಿಲ್ಲ. ಅರಣ್ಯ ಮೂಲೆ ಮೂಲೆಯಲ್ಲೂ ಹುಡುಕಾಡಿದ್ರು ಚಿರತೆಯ ಇರುವಿಕೆ ಮಾತ್ರ ಪತ್ತೆಯಾಗ್ತಿಲ್ಲ. ಈ ಕಾರಣಕ್ಕಾಗಿಯೇ ತಂಡಗಳಾಗಿ ಅರಣ್ಯಧಿಕಾರಿಗಳು ಕಾರ್ಯಚರಣೆಗೆ ಮುಂದಾಗಿದ್ದಾರೆ. ಎರಡುರಿಂದ ಮೂರು ತಂಡಗಳ ಮೂಲಕ ಅರಣ್ಯ ಪ್ರದೇಶಗಳ ಸೂಕ್ಷ್ಮ ಪ್ರದೇಶಗಳಲ್ಲಿ ಚಿರತೆ ಪತ್ತೆಗೆ ಮುಂದಾಗಿದ್ದಾರೆ. ಜೊತೆಗೆ ಇನ್ನೊಂದೆರೆಡು ಬೋನ್‍ಗಳನ್ನು ಹೆಚ್ಚಿಸುವ ಸಾಧ್ಯತೆ ಕೂಡ ಇದೆ. ಒಟ್ಟಾರೆ ಮೂರು ದಿನ ಕಳೆದರೂ ಚಿರತೆಯ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ. ಇಂದು ಕೂಡ ಇನ್ನಷ್ಟು ಪ್ಲ್ಯಾನ್‍ನೊಂದಿಗೆ ಅಧಿಕಾರಿಗಳು ಕಾರ್ಯಚರಣೆಗೆ ಇಳಿಯಲಿದ್ದಾರೆ. ಈ ಮೂಲಕವಾದರು ಚಿರತೆ ಸಿಕ್ಕಿಬೀಳುತ್ತ ಕಾದುನೋಡಬೇಕಿದೆ.