– ಪ್ಯಾನಿಕ್ ಬಟನ್, ಲೊಕೆಷನ್ ಟ್ರ್ಯಾಕಿಂಗ್ ಡಿವೈಸ್ ಅಳವಡಿಕೆಗೆ 7,599 ರೂ. ಫಿಕ್ಸ್
– ಡಿವೈಸ್ ಅಳವಡಿಸದಿದ್ರೇ ಎಫ್‌ಸಿ ನವೀಕರಣವಾಗಲ್ಲ
– ಸಾರಿಗೆ ಇಲಾಖೆಯ ಆದೇಶಕ್ಕೆ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ವಿರೋಧ
– ಕರ್ನಾಟಕ ಲಾರಿ ಅಸೋಸಿಯೇಷನ್‌ನಿಂದ ರಾಮಲಿಂಗಾರೆಡ್ಡಿಗೆ ಪತ್ರ
ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆ (Transport Department) ಇದೇ ತಿಂಗಳಿನಿಂದ ಮಹತ್ವದ ಆದೇಶವೊಂದನ್ನು ಜಾರಿಗೊಳಿಸಿದೆ. ಪರ್ಮಿಟ್ ವಾಹನಗಳು (Permit Vehicle) ಕಡ್ಡಾಯವಾಗಿ ಪ್ಯಾನಿಕ್ ಬಟನ್, GPS ಡಿವೈಸ್ ಅಳವಡಿಕೆ ಮಾಡುವಂತೆ ಆದೇಶದಲ್ಲಿ ಸೂಚಿಸಿದ್ದು, ಇದಕ್ಕೆ ಖಾಸಗಿ ಸಾರಿಗೆ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಸಾರಿಗೆ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದೆ. ಈ ಬೆನ್ನಲ್ಲೇ ಡಿಸೆಂಬರ್ 1 ರಿಂದ (ಶುಕ್ರವಾರ) ರಾಜ್ಯದ ಪರ್ಮಿಟ್ ವಾಹನಗಳಿಗೆ ಪ್ಯಾನಿಕ್ ಬಟನ್ (Panic Button) ಹಾಗೂ ಲೋಕೇಷನ್ ಟ್ರಾಕಿಂಗ್ ಡಿವೈಸ್ ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಇದೆನ್ನೂ ಓದಿ: ಬೆಂಗಳೂರಿನ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ತಾಳಮದ್ದಳೆ, ಕಾರ್ತಿಕ ದೀಪೋತ್ಸವ, ಪಲ್ಲಕ್ಕಿ ಉತ್ಸವ
Advertisement
Advertisement
ದೆಹಲಿಯ ಕಾಲೇಜು ವಿದ್ಯಾರ್ಥಿನಿ ಮೇಲೆ ಬಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಕೇಂದ್ರಸರ್ಕಾರ ದೇಶದ ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಲ್ಲಿ/ಪರ್ಮಿಟ್ ವಾಹನಗಳಿಗೆ GPS ಡಿವೈಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಸಲು ಸೂಚಿಸಿತ್ತು. ಈ ಹಿನ್ನೆಲೆ ಇದೇ ತಿಂಗಳಿನಿಂದ ಪರ್ಮಿಟ್ ವಾಹನಗಳಿಗೆ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಡಿವೈಸ್ ಅಳವಡಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
Advertisement
ಕೇಂದ್ರ ಹಾಗೂ ರಾಜ್ಯ ಸರ್ಕಾರದ 60:40 ಅನುಪಾತದ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೆ 2035.90 ಲಕ್ಷ ರೂ.ಗಳ ವೆಚ್ಚಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಹೀಗಾಗಿ ಪರ್ಮಿಟ್ ವಾಹನಗಳ ಮಾಲೀಕರು ಅರ್ಹ ಕಂಪನಿಗಳಿಂದ 7,599 ರೂ. ನೀಡಿ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಡಿಸೆಂಬರ್ 1 ರಿಂದ ಈ ಯೋಜನೆ ಪ್ರಾರಂಭವಾಗಿದ್ದು, ಒಂದು ವರ್ಷದೊಳಗೆ (30-11-24) ರ ಒಳಗೆ ಪರ್ಮಿಟ್ ವಾಹನಗಳು ಈ ಡಿವೈಸ್ ಹಾಕಿಸಿಕೊಳ್ಳಬೇಕು. ಇಲ್ಲದಿದ್ದರೇ ಸಾರಿಗೆ ಇಲಾಖೆ ವಾಹನಗಳ ಎಫ್‌ಸಿ ನವೀಕರಣಕ್ಕೆ ಬ್ರೇಕ್ ಹಾಕುವುದಾಗಿ ಎಚ್ಚರಿಸಿದೆ.
Advertisement
ಸರ್ಕಾರದ ಈ ಆದೇಶಕ್ಕೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಲಾರಿ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜಶರ್ಮಾ, ಪ್ಯಾನಿಕ್ ಬಟನ್, ಜಿಪಿಎಸ್ ಅಳವಡಿಸಿದ ನಂತರ ಜಿಪಿಎಸ್, ಪ್ಯಾನಿಕ್ ಬಟನ್ ಹೇಗೆ, ಯಾರು ಕಂಟ್ರೋಲ್ ಮಾಡ್ತಾರೆ ಅನ್ನೋ ಮಾಹಿತಿ ಕೊಟ್ಟಿಲ್ಲ. ಜೊತೆಗೆ ಈ ಡಿವೈಸ್ ಅಳವಡಿಸಲು ಖಾಸಗಿ ಕಂಪನಿಗಳಲ್ಲಿ 3,000-3,500 ರೂಪಾಯಿ ಆಗುತ್ತೆ. ಆದ್ರೆ ಸರ್ಕಾರ ಸೆಲೆಕ್ಟ್ ಮಾಡಿದ 13 ಕಂಪನಿಗಳಿಗೆ 8,500 ರೂಪಾಯಿ ಯಾಕೆ ಕೊಡಬೇಕು. ಇದ್ರ ಬಗ್ಗೆ ಚರ್ಚೆಯಾಗಲಿ, ಅಲ್ಲಿಯವರೆಗೂ ಈ ಆದೇಶ ವಾಪಾಸ್ ಪಡೆಯಲಿ ಅಂತ ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ಲಾರಿ ಅಸೋಸಿಯೇಷನ್‌ನಿಂದಲೂ ವಿರೋಧ ವ್ಯಕ್ತವಾಗಿದ್ದು, ಈ ಆದೇಶವನ್ನು ಪರಿಶೀಲಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಪತ್ರ ಬರೆದಿದ್ದಾರೆ. ಇದೆನ್ನೂ ಓದಿ: ತಿಂಗಳಿಗೆ 70 ಮಕ್ಕಳನ್ನು ಅಬಾರ್ಷನ್ ಮಾಡುತ್ತಿದ್ದೆ: ಭ್ರೂಣ ಹತ್ಯೆ ಕುರಿತು ನರ್ಸ್ ಮಂಜುಳ ಸ್ಫೋಟಕ ಮಾಹಿತಿ