Dakshina Kannada

ಯುವಕನೊಬ್ಬನ ಹುಚ್ಚಾಟದಿಂದ ಮದ್ವೆ ಮನೆಯಲ್ಲಿ ಹೊತ್ತಿ ಉರಿದ ಪೆಂಡಾಲ್- ಮಂಗ್ಳೂರಲ್ಲಿ ವಿಡಿಯೋ ವೈರಲ್

Published

on

Share this

ಮಂಗಳೂರು: ಮದುವೆಯ ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬನ ಹುಚ್ಚಾಟ ಇಡೀ ಪೆಂಡಾಲನ್ನೇ ಸುಟ್ಟು ಭಸ್ಮ ಮಾಡಿದ ಘಟನೆ ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ನಡೆದಿದೆ.

ಈ ಬೆಂಕಿ ಆಕಸ್ಮಿಕದಿಂದ ಪೆಂಡಲ್ ಹೊತ್ತಿ ಉರಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರಿನ ಮೂಡಬಿದ್ರೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮೆಹಂದಿ ಕಾರ್ಯಕ್ರಮದಲ್ಲಿ ಯುವಕರು ನಾನಾ ರೀತಿಯಲ್ಲಿ ಡಿಜೆ ಸಾಂಗ್‍ಗೆ ಕುಣಿದು ಕುಪ್ಪಳಿಸಿದ್ದಾರೆ.

ಈ ಮೆಹೆಂದಿ ಕಾರ್ಯಕ್ರಮದಲ್ಲಿ ಇಬ್ಬರು ಯುವಕರು ವಿಭಿನ್ನವಾಗಿ ಕಾಣಿಸಿಕೊಳ್ಳಲು ದೆವ್ವದಂತೆ ವೇಷವನ್ನು ತೊಟ್ಟು ಕುಣಿಯುತ್ತಿದ್ದರು. ಬಳಿಕ ಓರ್ವ ಎರಡೂ ಕೈಗಳಲ್ಲಿ ಬೆಂಕಿಯ ಪಂಜು ಹಿಡಿದುಕೊಂಡು ಪೆಂಡಾಲ್ ಕೆಳಗೆ ಆಗಮಿಸಿ ಕುಣಿಯಲಾರಂಭಿಸಿದ್ದ. ಪಂಜನ್ನು ಮೇಲಕ್ಕೆತ್ತಿ ಕುಣಿಯುತ್ತಿದ್ದು, ಬೆಂಕಿ ಪೆಂಡಾಲ್‍ಗೆ ಹೊತ್ತಿಕೊಂಡಿದೆ.

ಸಂಪೂರ್ಣ ಸಿಲ್ಕ್ ನ ಪೆಂಡಾಲ್ ಆಗಿದ್ದರಿಂದ ಕ್ಷಣಾರ್ಧದಲ್ಲಿ ಬೆಂಕಿ ಇಡೀ ಪೆಂಡಾಲ್‍ಗೆ ಹೊತ್ತಿಕೊಂಡಿದೆ. ಪರಿಣಾಮ ಪೆಂಡಾಲ್ ಸಂಪೂರ್ಣ ಕೆಳಗುರುಳಿ ಬಿದ್ದಿದೆ. ಪೆಂಡಾಲ್‍ನ ಕೆಳಗೆ ಜನರಿದ್ದು ಕೆಲವರಿಗೆ ಸಣ್ಣಪುಟ್ಟ ಗಾಯಗಾಳಾಗಿದ್ದು ಭಾರೀ ಅನಾಹುತವೊಂದು ತಪ್ಪಿದೆ.

https://www.youtube.com/watch?v=w4R1EExx5u4

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications