– ನಿವೃತ್ತ ನ್ಯಾಯಾಧೀಶರ ನೇತೃತ್ವದದಲ್ಲಿ ತನಿಖೆ – ಕೇಂದ್ರ ಗೃಹ ಸಚಿವ ಭರವಸೆ
ನವದೆಹಲಿ: ಈಶಾನ್ಯ ರಾಜ್ಯ ಮಣಿಪುರದಲ್ಲಿ (Manipur Violence) ನಡೆದ ಹಿಂಸಾಚಾರದ ಘಟನೆಗಳ ತನಿಖೆಯನ್ನು ಸಿಬಿಐ (CBI) ವಿಶೇಷ ತಂಡ ನಡೆಸಲಿದ್ದು, ಇದರ ಮೇಲ್ವಿಚಾರಣೆಗೆ ಕೇಂದ್ರ ಸರ್ಕಾರವು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದರು.
Advertisement
ಇಂಫಾಲ್ ಪ್ರವಾಸದಲ್ಲಿರುವ ಅಮಿತ್ ಶಾ ಸರ್ವಪಕ್ಷಗಳ ಸಭೆ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆಗಳನ್ನು ನಡೆಸಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಹಿಂಸಾತ್ಮಕ ಘಟನೆಗಳ ತನಿಖೆಗಾಗಿ ಮಣಿಪುರದಲ್ಲಿ ಹಲವಾರು ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ. 6 ಹಿಂಸಾಚಾರದ ಘಟನೆಗಳಲ್ಲಿ ಉನ್ನತ ಮಟ್ಟದ ಸಿಬಿಐ ತನಿಖೆ ನಡೆಯಲಿದೆ. ಈ ತನಿಖೆ ನ್ಯಾಯಯುತವಾಗಿರಲಿದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಶಾ ಹೇಳಿದರು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಭೂಕುಸಿತ – ಸಂಕಷ್ಟಕ್ಕೆ ಸಿಲುಕಿದ 300 ಮಂದಿ ಪ್ರಯಾಣಿಕರು
Advertisement
Advertisement
ಸಂಘರ್ಷದಿಂದ ಸಂತ್ರಸ್ತರಾದವರಿಗೆ ಪರಿಹಾರ ಮತ್ತು ಪುನರ್ವಸತಿಯನ್ನು ಸಿದ್ಧಪಡಿಸಲಾಗಿದೆ. ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯ ಎರಡೂ ತಲಾ 5 ಲಕ್ಷ ರೂ. ನೀಡುತ್ತೇವೆ. ಮಣಿಪುರದ ರಾಜ್ಯಪಾಲರು ನಾಗರಿಕ ಸಮಾಜದ ಸದಸ್ಯರನ್ನೊಳಗೊಂಡ ಶಾಂತಿ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ ಎಂದು ಅವರು ತಿಳಿಸಿದರು.
Advertisement
ರಾಜ್ಯದಲ್ಲಿ ಹಿಂಸಾಚಾರದ ಸಂತ್ರಸ್ತರಿಗೆ ನೆರವು ನೀಡಲು ಕೇಂದ್ರ ಸರ್ಕಾರವು 20 ವೈದ್ಯರು ಸೇರಿದಂತೆ 8 ವೈದ್ಯಕೀಯ ತಜ್ಞರ ತಂಡಗಳನ್ನು ಮಣಿಪುರಕ್ಕೆ ಒದಗಿಸಿದೆ. ಈಗಾಗಲೇ 5 ತಂಡಗಳು ಇಲ್ಲಿಗೆ ತಲುಪಿವೆ ಮತ್ತು 3 ಇತರ ತಂಡಗಳು ದಾರಿಯಲ್ಲಿವೆ ಎಂದು ಅವರು ವಿವರಿಸಿದರು. ಇದೇ ವೇಳೆ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಜನರಿಗೆ ಧೈರ್ಯ ತುಂಬಿದ ಶಾ, ಖೊಂಗ್ಸಾಂಗ್ ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ಪ್ಲಾಟ್ಫಾರ್ಮ್ ನಿರ್ಮಿಸಲು ಯುದ್ಧೋಪಾದಿಯಲ್ಲಿ ಕೆಲಸ ನಡೆಯುತ್ತಿದೆ. ಒಂದು ವಾರದ ಅವಧಿಯಲ್ಲಿ ಅದು ಕಾರ್ಯರೂಪಕ್ಕೆ ಬರಬಹುದು ಎಂದರು. ಇದನ್ನೂ ಓದಿ: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ರಕ್ಷಿಸಿದ ಬಿಜೆಪಿ ಶಾಸಕ
ಇದೇ ವೇಳೆ ದಂಗೆಕೋರರಿಗೆ ಕೇಂದ್ರ ಗೃಹ ಸಚಿವರು ಎಚ್ಚರಿಕೆಯನ್ನೂ ನೀಡಿದ್ದಾರೆ. ಕೂಡಲೇ ಅನಧಿಕೃತ ಶಸ್ತ್ರಾಸ್ತ್ರಗಳನ್ನು ಒಪ್ಪಿಸಬೇಕು ಎಂದು ಸೂಚಿಸಿದ್ದಾರೆ. ಸಮಾಜದಲ್ಲಿ ಶಾಂತಿ ಕಾಪಾಡಬೇಕು ಎಂದು ಜನರಿಗೆ ಮನವಿ ಮಾಡಿದ್ದಾರೆ.
ಹಿಂಸಾಚಾರ ಪೀಡಿತ ಮಣಿಪುರಕ್ಕೆ ಗೃಹ ಸಚಿವ ಅಮಿತ್ ಶಾ ನಾಲ್ಕು ದಿನಗಳಿಂದ ಪ್ರವಾಸದಲ್ಲಿದ್ದು, ಸಮುದಾಯಗಳ ನಡುವೆ ಶಾಂತಿ ಮಾತುಕತೆ, ಭದ್ರತಾ ಪಡೆಗಳು ಮತ್ತು ನಾಗರಿಕ ಅಧಿಕಾರಿಗಳೊಂದಿಗೆ ಸಭೆಗಳ ಅಧ್ಯಕ್ಷತೆ ವಹಿಸಿದ್ದಾರೆ. ಮೈಟಿ ಮತ್ತು ಕುಕಿ ಸಮುದಾಯಗಳ CSO ಗಳನ್ನು ಭೇಟಿ ಮಾಡಿದ್ದಾರೆ. ಇದನ್ನೂ ಓದಿ: LPG Cylinder Price: ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ ಭಾರೀ ಇಳಿಕೆ