ಚಂಡೀಗಢ: ಚುನಾವಣೆಯಲ್ಲಿ (Election) ಗೆಲ್ಲಲು ಅಭ್ಯರ್ಥಿಗಳು ಏನೆಲ್ಲಾ ಸರ್ಕಸ್ ಮಾಡಲ್ಲ? ಜನರ ಮತವನ್ನು ಸೆಳೆಯಲು ಭರವಸೆಗಳ ಸರಮಾಲೆಯನ್ನೇ ಹರಿಸುತ್ತಾರೆ. ಆದರೆ ಅವರ ಭರವಸೆಗಳು ನಿಜವಾಗುತ್ತೋ ಇಲ್ಲವೋ ಎಂಬುದು ಅವರು ಗೆದ್ದ ಬಳಿಕವೇ ಸಾಬೀತಾಗಬೇಕು.
ಇಲ್ಲೊಬ್ಬ ಪಂಚಾಯತ್ ಚುನಾವಣಾ ಅಭ್ಯರ್ಥಿ (Candidate) ತಾನು ಗೆದ್ದರೆ, ಭವಿಷ್ಯದಲ್ಲಿ ಎಂತೆಂತಹ ಯೋಜನೆಗಳನ್ನು ಜಾರಿಗೆ ತರುತ್ತಾರೆ ಎಂದು ಒಂದು ಪೋಸ್ಟರ್‌ನಲ್ಲಿ (Poster) ಬರೆದು ಹಾಕಿದ್ದಾರೆ. ಅಭ್ಯರ್ಥಿಯ ಭರವಸೆಗಳ ಲಿಸ್ಟ್ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.
Am shifting to this village ???? pic.twitter.com/fsfrjxbdLc
— Arun Bothra ???????? (@arunbothra) October 9, 2022
ಹರಿಯಾಣದ (Haryana) ಸಿರ್ನಾದ್ ಗ್ರಾಮದಲ್ಲಿ ಸರಪಂಚ್ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಜೈಕರನ್ ಲಾಥ್ವಾಲ್ ಅವರು ಚುನಾವಣೆಯಲ್ಲಿ ಗೆದ್ದರೆ, ಭವಿಷ್ಯದಲ್ಲಿ ಅವರು ಕುಗ್ರಾಮದಲ್ಲಿ 3 ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಪ್ರಾರಂಭಿಸುತ್ತೇನೆ. ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 20 ರೂ. ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಯನ್ನು 100 ರೂ.ಗೆ ಇಳಿಸುತ್ತೇನೆ. ಸರಕು ಮತ್ತು ಸೇವಾ ತೆರಿಗೆಯನ್ನೂ (GST) ತೆಗೆದುಹಾಕುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಕಾರು ನಿಲ್ಲಿಸಿ ಅಭಿಮಾನಿಯಿಂದ ತಾಯಿಯ ಫೋಟೋ ಸ್ವೀಕರಿಸಿದ ಮೋದಿ
ಅವರ ಭರವಸೆಗಳ ಪಟ್ಟಿ ಇಷ್ಟಕ್ಕೇ ಮುಗಿಯದೇ ಇನ್ನೂ ಬೆಳೆಯುತ್ತಲೇ ಹೋಗಿದ್ದು, ಉಚಿತ ವೈ-ಫೈ, ಎಲ್ಲಾ ಮಹಿಳೆಯರಿಗೆ ಮೇಕಪ್ ಕಿಟ್‌ಗಳು, ಪ್ರತಿ ಕುಟುಂಬಕ್ಕೆ ಉಚಿತ ಬೈಕುಗಳು, ಮದ್ಯವ್ಯಸನಿಯಾಗಿದ್ದರೆ ದಿನಕ್ಕೆ ಒಂದು ಮದ್ಯದ ಬಾಟಲಿ, ಉಳಿದವರಿಗೆ ಇತರ ಉಚಿತ ವಸ್ತುಗಳು, ಸಿರ್ಸಾದ್‌ನಿಂದ ದೆಹಲಿಗೆ ಮೆಟ್ರೋ ಮಾರ್ಗ ಮತ್ತು ವಿಮಾನ ನಿಲ್ದಾಣಗಳನ್ನು ಹೊರತುಪಡಿಸಿ ಹಳ್ಳಿಯಿಂದ ಗೊಹಾನಾಗೆ ಪ್ರತಿ 5 ನಿಮಿಷಕ್ಕೆ ಹೆಲಿಕಾಪ್ಟರ್ ಸೇವೆಯನ್ನು ಒದಗಿಸುವುದಾಗಿ ತಿಳಿಸಿದ್ದಾರೆ.
ಲಾಥ್ವಾಲ್ ಅವರ ಭರವಸೆಗಳಿಂದ ಅವರು ಪಂಚಾಯತ್ ಚುನಾವಣೆಯಲ್ಲಿ ಗೆಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಪೋಸ್ಟರ್ ಇದೀಗ ಟ್ವಿಟ್ಟರ್‌ನಲ್ಲಿ ಭಾರೀ ವೈರಲ್ ಆಗುತ್ತಿದ್ದು, ನಗೆಪಾಟಲಿಗೀಡಾಗುತ್ತಿದೆ. ಇದನ್ನೂ ಓದಿ: ಪ್ರಯಾಣಿಕ ಖರೀದಿಸಿದ್ದ ಸಮೋಸಾದಲ್ಲಿ ಯೆಲ್ಲೋ ಕಲರ್ ಪೇಪರ್ – IRCTC ಹೇಳೋದೇನು?