ಮೈಸೂರು: ಜನರಿಗೆ ನೀಡಬೇಕಿದ್ದ ಸ್ವಚ್ಛಭಾರತ್ ಮಿಷನ್ ಯೋಜನೆಯ ಹಣವನ್ನು ಡಾಟಾ ಎಂಟ್ರಿ ಆಪರೇಟರ್, ತನ್ನ ತಂದೆ ಹಾಗೂ ಸಹೋದರನ ಖಾತೆಗೆ ಜಮಾ ಮಾಡಿರುವ ಪ್ರಕರಣ ಮೈಸೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ನಂಜನಗೂಡು ತಾಲೂಕಿನ ವರುಣಾ ಕ್ಷೇತ್ರ ವ್ಯಾಪ್ತಿಯ ಹೊರಳವಾಡಿ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ನಡೆದಿದೆ. ಗ್ರಾಮ ಪಂಚಾಯಿತಿಯ ಡಾಟಾ ಎಂಟ್ರಿ ಆಪರೇಟರ್ ಚಾಂದಿನಿ, ಫಲಾನುಭವಿಗಳಿಗೆ ತಲುಪಬೇಕಾದ ಪ್ರೋತ್ಸಾಹ ಧನವನ್ನು ತನ್ನ ತಂದೆ ಹಾಗೂ ಸಹೋದರನ ಖಾತೆಗೆ ವರ್ಗಾಯಿಸಿದ್ದಾರೆ. ಚಾಂದಿನಿ ಇದುವರೆಗೂ ತನ್ನ ತಂದೆ ಖಾತೆಗೆ 27 ಸಾವಿರ ಹಾಗೂ ಸಹೋದರನ ಖಾತೆಗೆ 36 ಸಾವಿರ ಹಣ ವರ್ಗಾವಣೆ ಮಾಡಿದ್ದಾರೆ.
Advertisement
ಈ ಸಂಬಂಧ ಡಾಟಾ ಆಪರೇಟರ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಟ್ಟು 63 ಸಾವಿರ ಹಣ ದುರುಪಯೋಗ ಆಗಿರುವುದು ಬೆಳಕಿಗೆ ಬಂದಿದೆ.