ಬೆಂಗಳೂರು: ನಿರ್ದೇಶಕ ಯೋಗರಾಜ ಭಟ್ ಈಗ ಪಂಚತಂತ್ರ ಚಿತ್ರವನ್ನ ಬೇಗನೆ ಮುಗಿಸಿಕೊಳ್ಳೋದರತ್ತ ಗಮನ ನೆಟ್ಟಿದ್ದಾರೆ. ತಮ್ಮ ತಂಡದೊಂದಿಗೆ ಊರು ತುಂಬಾ ಸುತ್ತುತ್ತಾ ಬಿಡುವಿರದೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಯೋಗರಾಜ್ ಭಟ್ ಇದೀಗ ಗೋವಾದತ್ತ ತೆರಳಿದ್ದಾರೆ.
ಆರಂಭದಿಂದ ಇದುವರೆಗೂ ಅವ್ಯಾಹತವಾಗಿ ಚಿತ್ರೀಕರಣ ನಡೆಸುತ್ತಿರೋ ಭಟ್ಟರೀಗ ಪಂಚತಂತ್ರವನ್ನು ಅಂತಿಮ ಘಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. ಈಗ ಉಳಿದುಕೊಂಡಿರೋದು ಒಂದು ಹಾಡು ಮಾತ್ರ. ಇದಕ್ಕಾಗಿ ಒಂದೊಳ್ಳೆ ಲೊಕೇಷನ್ ಆಯ್ಕೆ ಮಾಡಿಕೊಂಡು ಗೋವಾಗೆ ತೆರಳಿದ್ದಾರೆ. ಅಲ್ಲಿ ಲವ್ ಡಿಸೆಪಾಯಿಂಟಾಗಿ ಕಂಗಾಲಾದ ನಾಯಕನನ್ನು ಸಮಾಧಾನಿಸುವ, ಕಿಚಾಯಿಸುವ ಗೆಳೆಯರ ಹಾಡೊಂದು ಚಿತ್ರೀಕರಿಸಲ್ಪಡಲಿದೆ.
ಈ ವಿಶೇಷವಾದ ಹಾಡಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಟೀಸರ್ ಮೂಲಕವೂ ಭಾರೀ ಸದ್ದು ಮಾಡಿರೋ ಈ ಚಿತ್ರವನ್ನು ನವೆಂಬರ್ ಮಧ್ಯ ಭಾಗದಲ್ಲಿ ತೆರೆಗಾಣಿಸಲು ಯೋಗರಾಜ ಭಟ್ಟರು ನಿರ್ಧರಿಸಿದ್ದಾರಂತೆ. ಈಗ ಗೋವಾದಲ್ಲಿ ಚಿತ್ರೀಕರಣ ನಡೆಸುತ್ತಿರೋ ಈ ಹಾಡೂ ಇಡೀ ಚಿತ್ರದ ಮುಖ್ಯ ಆಕರ್ಷಣೆಯಾಗಿರಲಿದೆಯಂತೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv