ಬಾಗಲಕೋಟೆ: ಲಿಂಗಾಯತ ಪಂಚಮಸಾಲಿ ಸಮಾಜದಲ್ಲಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದ್ದು, ಮೂರನೇ ಪೀಠಕ್ಕಾಗಿ ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಚಾರಿಟೇಬಲ್ ಟ್ರಸ್ಟ್ ನೋಂದಣಿಗೆ ಮುಂದಾಗಿದ್ದಾರೆ.
Advertisement
ಬಾಗಲಕೋಟೆ ಜಿಲ್ಲೆ ಜಮಖಂಡಿ ಉಪನೊಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಗಾಗಿ ಪರ್ಯಾಯ ಒಕ್ಕೂಟದ ಸ್ವಾಮೀಜಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಟ್ರಸ್ಟ್ ಅಧ್ಯಕ್ಷರಾಗಿ ಬಬಲೇಶ್ವರ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಉಪಾಧ್ಯಕ್ಷ ರೇವಣ ಸಿದ್ದ ಸ್ವಾಮೀಜಿ ಬೆಂಡವಾಡ, ಕಾರ್ಯದರ್ಶಿ ಸಂಗನ ಬಸವ ಸ್ವಾಮೀಜಿ, ಮನಗೂಳಿ ಹಿರೇಮಠ ಜೊತೆಗೆ 25 ಜನ ಸ್ವಾಮೀಜಿಗಳನ್ನೊಳಗೊಂಡ ಟ್ರಸ್ಟ್ ನೊಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ
Advertisement
Advertisement
ಕೆಲವೇ ದಿನದಲ್ಲಿ ಜಮಖಂಡಿ ಸಮೀಪದ ಆಲಗೂರು ರಸ್ತೆ ಬಳಿ ಮೂರನೇ ಪೀಠಕ್ಕೆ ಜಾಗ ಖರೀದಿಸುವ ಸಾಧ್ಯತೆಯಿದ್ದು, ಈಗಾಗಲೇ ಪಂಚಮಸಾಲಿ ಸಮುದಾಯದಲ್ಲಿ ಎರಡು ಪೀಠಗಳಿವೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಲಿಂಗಾಯತ ಪೀಠವಿದೆ. ಜೊತೆಗೆ ದಾವಣಗೆರೆ ಜಿಲ್ಲೆ ಹರಿಹರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠವಿದೆ. ಈ ಎರಡು ಪೀಠಗಳಿಗೆ ಪರ್ಯಾಯವಾಗಿ ಮೂರನೇ ಪೀಠಕ್ಕೆ ಪ್ರಕ್ರಿಯೆ ಚುರುಕುಗೊಂಡಿದೆ.
Advertisement
ಕೂಡಲಸಂಗಮ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಕೊಡಬೇಕು ಎನ್ನುವ ಹೋರಾಟ ನಡೆದಿದೆ. ಪಾದಯಾತ್ರೆ ಹೋರಾಟದ ಹಿಂಪಡೆಯುವ ಹೇಳಿಕೆಯಿಂದಾಗಿ ಸಚಿವ ಮುರುಗೇಶ್ ನಿರಾಣಿ ಇರಿಸು ಮುರಿಸು ಅನುಭವಿಸುವಂತಾಗಿತ್ತು. ಈಗ ಸದ್ದಿಲ್ಲದೆ ಪರ್ಯಾಯ ಮೂರನೇ ಒಕ್ಕೂಟ ರಚನೆ ಕಸರತ್ತು ನಡೆದಿದೆ. ಮೂರನೇ ಒಕ್ಕೂಟದ ಸ್ವಾಮೀಜಿಗಳಿಗೆ ಮುರುಗೇಶ್ ನಿರಾಣಿ ಅವರ ಬೆಂಬಲವಿದೆ ಎನ್ನಲಾಗುತ್ತಿದೆ. ಕೂಡಲಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧವೇ ಈ ಒಕ್ಕೂಟ ರಚನೆಯಾಗುತ್ತಿದೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಇದನ್ನೂ ಓದಿ: ನಾಳೆ ಪುನೀತ್ 11ನೇ ದಿನದ ಪುಣ್ಯಾರಾಧನೆ – ಅಪ್ಪು ಕುಟುಂಬಸ್ಥರಿಂದ ಭಾರೀ ಸಿದ್ಧತೆ