ಗದಗ: ಪಂಚಮಸಾಲಿ ಮೀಸಲಾತಿ (Panchamasali Reservation) ಹೋರಾಟ ವಿಚಾರಕ್ಕೆ ಬೇಸತ್ತ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ರಾಜಕೀಯಕ್ಕೆ ಧುಮುಕುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೀಸಲಾತಿ ಹೋರಾಟ 4 ವರ್ಷದಿಂದ ಶಾಂತಿಯುತವಾಗಿ ನಡೆಯಿತು. ಬೆಳಗಾವಿಯಲ್ಲಿ (Belagavi) ಗಾಯಗೊಂಡ ಸಮಾಜದ ಜನರ ಮನೆಗೆ ಭೇಟಿನೀಡಿ ಸಾಂತ್ವನ ಹೇಳಲಿದ್ದೇವೆ. ಪ್ರತಿಜ್ಞಾ ಕ್ರಾಂತಿ ಅಭಿಯಾನ ಮೂಲಕ ಸಮಾಜದ ಜನರ ಪರಿವರ್ತನೆ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ದರ್ಶನ್ ಜಾಮೀನು ರದ್ದುಗೊಳಿಸಿ – ಸುಪ್ರೀಂಗೆ 1492 ಪುಟಗಳ ದಾಖಲೆ ಸಲ್ಲಿಸಿದ ಪೊಲೀಸರು
Advertisement
Advertisement
Advertisement
8ನೇ ಹಂತದ ಹೋರಾಟ ಕೂಡಲಸಂಗಮದಿಂದ ಆರಂಭವಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರದ ಪಂಚಮಸಾಲಿ ಸಮಾಜದವರ ಮನೆಗೆ ಭೇಟಿ ನೀಡುತ್ತೇವೆ. ಸರ್ಕಾರಗಳಿಂದಾದ ದೌರ್ಜನ್ಯ, ಮಾರಣಾಂತಿಕ ಹಲ್ಲೆ ವಿಷಯ ಜನರಿಗೆ ತಿಳಿಸುತ್ತೇವೆ. ಜನರ ಅಭಿಪ್ರಾಯ ಕ್ರೋಢಿಕರಣ ಮಾಡುತ್ತೇವೆ. ನಮಗೆ ಮೀಸಲಾತಿ ನೀಡದವರಿಗೆ ಯಾವ ರೀತಿ ಅಸಹಕಾರ ಕೊಡಬೇಕು. ಗೆದ್ದು ನಮಗೆ ಮೀಸಲಾತಿ ಕೊಡುವವರಿಗೆ ಯಾವ ರೀತಿ ಸಹಕಾರ ಕೊಡಬೇಕು. ಪ್ರತಿ ಹಳ್ಳಿಯಲ್ಲೂ ಪ್ರತಿಜ್ಞಾ ಕ್ರಾಂತಿ ಅಭಿಯಾನ ಹೆಸರಲ್ಲಿ ಹೋರಾಟ ಮಾಡುತ್ತೇವೆ. ರಾಜ್ಯದ 200 ವಿಧಾನಸಭೆ ಕ್ಷೇತ್ರಕ್ಕೂ ಭೇಟಿ ನೀಡಲಿದ್ದೇವೆ. ಸಂಕ್ರಾಂತಿ ದಿನದಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಮದುವೆಯಾಗಿ 2 ವರ್ಷಕ್ಕೆ ಡಿವೋರ್ಸ್ ಘೋಷಿಸಿದ ನಟಿ ಅಪರ್ಣಾ ವಿನೋದ್
Advertisement
ಎಲ್ಲಾ ಹಳ್ಳಿಗಳಿಗೂ ಹೊಗುವಾಗ ರಾಜಕೀಯ ಧ್ರುವೀಕರಣ ಆಗುತ್ತದೆ. ಆಗ ಯಾರು ಪ್ರಾಮಾಣಿಕವಾಗಿ ಮುಂದೆ ಬರುತ್ತಾರೆ ಅವರಿಗೆ ಜನ ಆಶಿರ್ವಾದ ಮಾಡುತ್ತಾರೆ. ನಿಮ್ಮ ಮತ ಹೊಡೆದವರಿಗಾ? ಪ್ರೀತಿ ಮಾಡಿದವರಿಗಾ ಎಂದು ಪ್ರಶ್ನಿಸುತ್ತೇವೆ. ರಾಜ್ಯದ 200 ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಿ ನಂತರ ನನ್ನ ಅಂತಿಮ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದರು.
ಸದ್ಯ ಪರ್ಯಾಯ ರಾಜಕಾರಣ ಬಗ್ಗೆ ಮಾಹಿತಿ ನೀಡುವುದಿಲ್ಲ. ಚುನಾವಣೆ ಹತ್ತಿರ ಬಂದಾಗ ಜನರೇ ಮಾನಸಿಕವಾಗಿ ಯೋಚನೆ ಮಾಡುತ್ತಾರೆ. ಹೊಡೆದಿರುವ ಗಾಯಗಳು ಮಾಯಬಹುದು, ಮನಸ್ಸಿಗೆ ಆದ ಗಾಯ ಮಾಯವಾಗುವುದಿಲ್ಲ. ಅದಕ್ಕೆ ಜನರು ಹೇಗೆ ಪ್ರತೀಕಾರ ತೀರಿಸಬೇಕು, ಹಾಗೆ ತೀರಿಸುತ್ತಾರೆ. ಆ ಬಗ್ಗೆ ಜನರಿಗೆ ಹೇಳುತ್ತಾ ಹೋಗುತ್ತೇನೆ. ಅಷ್ಟರಲ್ಲಿ ಯಾವ ಪುಣ್ಯಾತ್ಮ ಬಂದು ಮೀಸಲಾತಿ ಕೊಟ್ಟರೆ ಅದಕ್ಕೆ ಒಪ್ಪಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ರೌಡಿಶೀಟರ್ ಹತ್ಯೆ; ಬೆಂಗಳೂರಲ್ಲಿ ಕೊಲೆ ಮಾಡಿ ತಮಿಳುನಾಡಿನಲ್ಲಿ ಸುಟ್ಟುಹಾಕಿದ್ದ ಹಂತಕ