ಅ.21ರಂದು ಹುಕ್ಕೇರಿಯಲ್ಲಿ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶ

Public TV
3 Min Read
Panchamasali 3

ಬೆಳಗಾವಿ: ಪಂಚಮಸಾಲಿ(Panchamasali) ಸಮುದಾಯಕ್ಕೆ 2ಎ ಮೀಸಲಾತಿಗೆ(2A reservation)ಆಗ್ರಹಿಸಿ ಅಕ್ಟೋಬರ್ 21ರಂದು ಹುಕ್ಕೇರಿಯಲ್ಲಿ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶ ಮಾಡಲಾಗುತ್ತಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ(Jaya Mrtunjaya Swamiji) ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅ.21ರಂದು ನಡೆಯುವ ಸಮಾವೇಶದಲ್ಲಿ ಕಿತ್ತೂರು ಕರ್ನಾಟಕದ ಪ್ರಥಮ ರಾಷ್ಟ್ರಮಾತೆ ಚನ್ನಮ್ಮರವರ 244ನೇ ಜಯಂತಿ, 199ನೇ ವಿಜಯೋತ್ಸವ ಮಾಡಲಾಗುವುದು. ಅಕ್ಟೋಬರ್ 21ರೊಳಗೆ ಮೀಸಲಾತಿ ಘೋಷಿಸದಿದ್ದರೆ ಅಂತಿಮ ಹಂತದ ಹೋರಾಟದ ದಿನಾಂಕ ನಿಗದಿ ಮಾಡುತ್ತೇವೆ. 25 ಲಕ್ಷ ಜನ ಸೇರಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ದಿನಾಂಕ ನಿಗದಿ ಮಾಡುತ್ತೇವೆ ಎಂದರು‌.

ಮೀಸಲಾತಿ ಘೋಷಣೆ ವಿನಾಕಾರಣ ವಿಳಂಬ ಮಾಡಿ ಚುನಾವಣೆ ವೇಳೆ ನೀತಿ ಸಂಹಿತೆ ಜಾರಿಯಾದರೆ ನಮ್ಮ ಹೋರಾಟಕ್ಕೆ ಹಿನ್ನಡೆ ಆಗಬಾರದು. ಹೀಗಾಗಿ ಉಗ್ರವಾದ ಹೋರಾಟಕ್ಕೆ ನಾವು ತಯಾರಿ ಮಾಡಿದ್ದೇವೆ. ಅ. 21ರವರೆಗೆ ಹಿಂದುಳಿದ ವರ್ಗದ ಆಯೋಗದ ವರದಿ ಪಡೆಯಬೇಕು. ಅಂದು ವಿಧಾನಸೌಧಕ್ಕೆ 25 ಲಕ್ಷ ಜನ ಮುತ್ತಿಗೆ ಹಾಕುವ ಹೋರಾಟದ ದಿನಾಂಕ ನಿಗದಿ ಮಾಡಲಾಗುತ್ತದೆ‌. ನಮ್ಮ ಸಮಾಜದ ಇಬ್ಬರು ಸಚಿವರು, 20 ಶಾಸಕರು ಬೆಂಬಲ ಕೊಟ್ಟಿದ್ದಾರೆ. ಅಧಿವೇಶನದಲ್ಲಿ ಹೋರಾಟ ಮಾಡಿದಾಗ ಖಡಕ್ ಸಂದೇಶ ನೀಡಿದ್ದೆವು. ಬಸನಗೌಡ ಪಾಟೀಲ್ ಯತ್ನಾಳ್ ಹೋರಾಟ ನಡೆಸಿದಾಗ ಬೆಂಬಲ ನೀಡದಿದ್ದರೆ 2023ರ ಚುನಾವಣೆಯಲ್ಲಿ ನಮ್ಮ ಜನ ಅಸಮಾಧಾನಗೊಳ್ಳುತ್ತಾರೆ. ಹೀಗಾಗಿ ಮೊನ್ನೆ ನಡೆದ ಅಧಿವೇಶನದಲ್ಲಿ ಪಂಚಮಸಾಲಿ ಸಮುದಾಯದ ಶಾಸಕರು ಪಕ್ಷಬೇಧ ಮರೆತು ಸದನದಲ್ಲಿ ಹೋರಾಟ ಮಾಡಿದ್ದಾರೆ ಎಂದು ತಿಳಿಸಿದರು.

Panchamasali 1 1

ಕೆಲವರು ಯತ್ನಾಳ್‌ರ ಹಾಗೇ ಓಪನ್ ಆಗಿ ಬರಲು ಆಗದೇ ಇರಬಹುದು. ಕೆಲವರು ಹಿಂಭಾಗದಲ್ಲಿ ಇದ್ದು ಹೋರಾಟಕ್ಕೆ ಬೆಂಬಲ ಕೊಡುತ್ತಿದ್ದಾರೆ. ಸಚಿವರಾದ ಸಿ.ಸಿ.ಪಾಟೀಲ್, ಶಂಕರ್ ಪಾಟೀಲ್ ಮುನೇನಕೊಪ್ಪ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಒಳಗೆ ಇದ್ದು ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಅದರ ಬಗ್ಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ. ಸಿಎಂಗೆ ಒತ್ತಡ ಹಾಕುವ, ಸಮಾಜಕ್ಕೆ ಗೌರವ ತರುವಂತಹ ಕೆಲಸ ಮಾಡುತ್ತಿದ್ದಾರೆ ಅವರ ಸ್ನೇಹಿತರು ಸಿಎಂ ಆಗಿರುವುದರಿಂದ ಓಪನ್ ಆಗಿ ಬರಲು ಆಗದೇ ಇರಬಹುದು. ನಮ್ಮ ಸಮಾಜದ ಎಲ್ಲಾ ಶಾಸಕರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಚಿವ ಮುರುಗೇಶ್ ನಿರಾಣಿ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಅವರ ಬಗ್ಗೆ ಹೇಳುವುದಕ್ಕೆ ಹೋಗುವುದಿಲ್ಲ. ಅವರು ಏನು ಮಾಡ್ತಿದ್ದಾರೆ ಏನಿಲ್ಲ ನಿಮಗೆಲ್ಲಾ ಗೊತ್ತೆ ಇದೆ. ನಾನು ಅವರ ಬಗ್ಗೆ ಏನೂ ಹೇಳಲು ಹೋಗಲ್ಲ. ಅವರು ನಮ್ಮ ಸಮುದಾಯದವರು ಇರೋದ್ರಿಂದ ದೇವರು ಅವರಿಗೆ ಯಾವಾಗ ಬುದ್ದಿ ಕೊಡ್ತಾನೆ ಕೊಟ್ಟು ನಮ್ಮ ಹೋರಾಟಕ್ಕೆ ಬೆಂಬಲ ನೀಡುವ ಪ್ರಯತ್ನ ಆಗಬೇಕು. ಅವರ ಬಗ್ಗೆ ನಾನು ಏನೂ ಹೇಳಲ್ಲ, ಅವರೇನು ಮಾಡ್ತಿದ್ದಾರೆ ನಿಮಗೆಲ್ಲ ಗೊತ್ತಿದೆ. ನಮ್ಮ ಸಮಾಜದ ಇಬ್ಬರು ಸಚಿವರು, ಶಾಸಕರು ನಮ್ಮ ಹೋರಾಟಕ್ಕೆ ಪ್ರಾಮಾಣಿಕ ಬೆಂಬಲ ಕೊಡ್ತಿದ್ದಾರೆ. ವಿರೋಧ ಮಾಡ್ತಿದ್ದಾರೋ ಬೆಂಬಲ ನೀಡ್ತಿದ್ದಾರೋ ಹೇಳೋಕೆ ಹೋಗಲ್ಲ. ಸಚಿವ ನಿರಾಣಿ ಸಹ ಆರಂಭದಲ್ಲಿ ನಮ್ಮ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದರು. ಈಗ ಎಲ್ಲೋ ಒಂದು ಕಡೆ ಅವರು ತಟಸ್ಥರಿದ್ದಾರೆ ಎಂಬ ಕಾರಣಕ್ಕೆ ನಮ್ಮ ಮನಸ್ಸಿಗೆ ನೋವಾಗಿದೆ. ಮುಂದಿನ ದಿನಗಳಲ್ಲಿ ಬೆಂಬಲ ನೀಡಲಿ ಎಂದು ನಾನು ಆಶಿಸುತ್ತೇನೆ ಎಂದರು.

Panchamasali 2

 

ಯಾರಿಗೆ ನೋವಿರುತ್ತೋ, ಹಸಿವಿರುತ್ತೋ ಅವರಿಗೆ ಹಸಿವಿನ ಬೆಲೆ ಗೊತ್ತಿರುತ್ತದೆ. ಸುಖವಾಗಿ, ಅರಾಮವಾಗಿ ಇದ್ದವರಿಗೆ ಹತ್ತು ವರ್ಷ ಬಿಟ್ಟು ಕೊಟ್ಟರೂ ನಡೆಯುತ್ತದೆ. ಹೀಗಾಗಿ ನಮಗೆ ಹಸಿವಿದೆ. ನಮ್ಮ ಸಮಾಜದ ಕಟ್ಟಕಡೇ ಬಡವನಿಗೆ ಮೀಸಲಾತಿ ಹಸಿವಿದೆ. ಚುನಾವಣೆ ಇನ್ನೂ ಮೂರ್ನಾಲ್ಕು ವರ್ಷ ಇದ್ರೆ ನಾನು ಎಲ್ಲರ ಹಾಗೇ ಶಾಂತಿಯಾಗಿ ಇರಬಹುದಾಗಿತ್ತು. ಆದರೆ ಚುನಾವಣೆಗೆ ಕೇವಲ ಆರು ತಿಂಗಳು ಬಾಕಿ ಇದೆ. ಅಕ್ಟೋಬರ್ 21ರಂದು ಎಲ್ಲಾ ನಾಯಕರು ಮಾತನಾಡುತ್ತಾರೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *