– ಯಡಿಯೂರಪ್ಪ, ವಿಜಯೇಂದ್ರ ಭಾವಚಿತ್ರಕ್ಕೆ ಚಪ್ಪಲಿ ಏಟು
ಗದಗ: ಬಸನಗೌಡ ಪಾಟೀಲ್ ಯತ್ನಾಳ್‌ರನ್ನು (Basanagouda Patil Yatnal) ಬಿಜೆಪಿ ಪಕ್ಷದಿಂದ ಉಚ್ಚಾಟನೆ ಖಂಡಿಸಿ, ಪಂಚಮಸಾಲಿ ಸಮಾಜ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸರ್ಕಲ್ ಬಳಿ ಪ್ರತಿಭಟನೆ ಮಾಡಿದರು.
ಮಾಜಿ ಸಿಎಂ ಯಡಿಯೂರಪ್ಪ (Yediyurappa) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ವಿರುದ್ಧ ಧಿಕ್ಕಾರ ಕೂಗಿದರು. ಅಲ್ಲದೇ ಕುಟುಂಬ ರಾಜಕಾರಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಭಾವಚಿತ್ರಗಳಿಗೆ ಚಪ್ಪಲಿ ಏಟು ನೀಡಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಯತ್ನಾಳ್‍ರನ್ನು ನಾನೇ ಕಾಂಗ್ರೆಸ್‍ಗೆ ಕರೆದ್ಕೊಂಡು ಬರುತ್ತೇನೆ: ರಾಜು ಕಾಗೆ
ಭಾವಚಿತ್ರಕ್ಕೆ ಬೆಂಕಿ ಹಚ್ಚಲು ಮುಂದಾದ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಇದನ್ನೂ ಓದಿ: ಏ.10ರ ಒಳಗಡೆ ಯತ್ನಾಳ್ ಉಚ್ಚಾಟನೆ ಆದೇಶ ವಾಪಸ್ ಪಡೀರಿ : ಜಯಮೃತ್ಯುಂಜಯ ಸ್ವಾಮೀಜಿ ಡೆಡ್‌ಲೈನ್
ಯತ್ನಾಳ್‌ರ ಉಚ್ಚಾಟನೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಹಿಂದುತ್ವ ಪರ ಧೋರಣೆಗಳು ಮತ್ತು ಸಮಾಜದ ಹಿತಕ್ಕಾಗಿ ಹೋರಾಟ ಮಾಡಿದ್ದಕ್ಕಾಗಿ ಯತ್ನಾಳ್‌ರನ್ನು ಉಚ್ಚಾಟನೆ ಮಾಡಲಾಗಿದೆ. ಹಿಂದುತ್ವ ಪರ ನಿಲುವುಗಳನ್ನು ತಳ್ಳಿಹಾಕಲು ಅವರನ್ನು ರಾಜಕೀಯವಾಗಿ ತೊಡೆದು ಹಾಕಲಾಗಿದೆ ಎಂದು ಸಂಘಟನೆ ಮುಖಂಡರು ಆರೋಪಿಸಿದರು. ಇದನ್ನೂ ಓದಿ: ಯತ್ನಾಳ್ ಕೊಟ್ಟಿದ್ದ ಉತ್ತರ ಪತ್ರ ಬಹಿರಂಗ – ಯಡಿಯೂರಪ್ಪ, ವಿಜಯೇಂದ್ರ ಮೇಲೆ ಚಾರ್ಜ್‌ಶೀಟ್
ಕೂಡಲಸಂಗಮ ಶ್ರೀಗಳು ಕೊಟ್ಟ ಗಡುವಿನ ಒಳಗೆ ಆದೇಶ ಹಿಂಪಡೆಯದಿದ್ದರೆ, ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಪಂಚಮಸಾಲಿ ಸಮಾಜ ಜಿಲ್ಲಾಧ್ಯಕ್ಷ ಅಯ್ಯಪ್ಪ ಅಂಗಡಿ, ಸಂಘಟನಾಕಾರ ಬಸವರಾಜ, ವಸಂತ ಪಡಗದ, ಶಿವಕುಮಾರ್ ಮೂಲಿಮನಿ ಪಾಟೀಲ, ಶರಣಪ್ಪ, ಪ್ರದೀಪ್ ಸಚಿನ್, ಸಂಗಮೇಶ, ಪ್ರವೀಣ್ ಸೇರಿ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ: 2ನೇ ಬಾರಿ ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆ