ನವದೆಹಲಿ: ಇನ್ನು ಮುಂದೆ ವಿದೇಶಗಳಿಗೆ ಹಣ ಕಳುಹಿಸಬೇಕಾದರೆ ಪಾನ್ ಕಾರ್ಡ್ ನಂಬರನ್ನು ಕಡ್ಡಾಯವಾಗಿ ನಮೂದಿಸಬೇಕು.
ಮಕ್ಕಳ ಶಿಕ್ಷಣ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇರು ಕೊಳ್ಳಲು ಹೊರ ದೇಶಗಳಿಗೆ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಪಾನ್ ಕಾರ್ಡ್ ನಂಬರನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಆರ್ ಬಿ ಐ ಹೇಳಿದೆ.
Advertisement
ರಿಸರ್ವ್ ಬ್ಯಾಂಕ್ ಉದಾರ ಪಾವತಿ ಯೋಜನೆ(ಎಲ್‍ಆರ್‍ಎಸ್) ನಿಯಮದ ಅಡಿ ಇಲ್ಲಿಯವರೆಗೆ 25 ಸಾವಿರ ಡಾಲರ್(ಅಂದಾಜು 16.75 ಲಕ್ಷ ರೂ.) ವರೆಗಿನ ಹಂಣವನ್ನು ಕಳುಹಿಸಲು ಯಾವುದೇ ದಾಖಲೆಗಳ ಅಗತ್ಯವಿರಲ್ಲ. ಆದರೆ ಈ ಹಣವನ್ನು ಕಳುಹಿಸುವ ಮೂಲಕ ಅಕ್ರಮಗಳು ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಆರ್ ಬಿ ಐ ಈಗ ನಿಯಮವನ್ನು ಬಿಗಿಗೊಳಿಸಿದೆ.
Advertisement
ಈ ಹೊಸ ನಿಯಮದಿಂದಾಗಿ ದೇಶದಿಂದ ಹೊರ ಹೋಗುತ್ತಿದ್ದ ಅನಧಿಕೃತ ಹಣಕ್ಕೆ ಬ್ರೇಕ್ ಬೀಳಲಿದೆ. ಅಲ್ಲದೇ ತೆರಿಗೆ ರೂಪದಲ್ಲಿ ಸರಕಾರದ ಬೊಕ್ಕಸ ತುಂಬಲಿದೆ. ವ್ಯವಸ್ಥೆಯಲ್ಲಿ ಪಾನ್ ಕಾರ್ಡ್ ಕಡ್ಡಾಯವಾದ್ದರಿಂದ ಹಣ ಸಂದಾಯ ಮಾಡುವವರ ಖಾತೆಗಳ ಮೇಲೆ ನಿಗಾವಹಿಸಲು ಸಾಧ್ಯವಾಗುತ್ತದೆ ಎಂದು ಆರ್ ಬಿ ಐ ತಿಳಿಸಿದೆ.
Advertisement
ಹೊರದೇಶಗಳಿಗೆ ತಮ್ಮ ಮಕ್ಕಳ ಶಿಕ್ಷಣ, ವಿದೇಶಿ ಸ್ಟಾಕ್ ಮಾರುಕಟ್ಟೆಗಳಲ್ಲಿ ಹಣ ಹೂಡಬಯಸುವ ಹಾಗೂ ವಿದೇಶಗಳಲ್ಲಿ ಆಸ್ತಿ ಖರೀದಿಸಬಯಸುವ ಭಾರತೀಯರಿಗೆ ಈ ನಿಯಮ ಅನ್ವಯವಾಗಲಿದೆ.