ಬಾಲಿವುಡ್ (Bollywood) ನಿರ್ಮಾಪಕ- ನಿರ್ದೇಶಕ ದಿವಂಗತ ಯಶ್ ಚೋಪ್ರಾ (Yash Chopra) ಮಡದಿ ಪಮೇಲಾ ಚೋಪ್ರಾ (Pamela Chopra) ಅವರು ನಿಧನರಾಗಿದ್ದಾರೆ. ಚಿತ್ರರಂಗದಲ್ಲಿ ಗಾಯಕಿಯಾಗಿ ಪಮೇಲಾ ಚೋಪ್ರಾ ಗುರುತಿಸಿಕೊಂಡಿದ್ದರು. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಾಗಿ ಕಳೆದ 15 ದಿನಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು (ಏಪ್ರಿಲ್ 20) ಬೆಳಗ್ಗೆ ಪಮೇಲಾ ಅವರು ನಿಧನರಾಗಿದ್ದಾರೆ. ಇದನ್ನೂ ಓದಿ:ಲಿಫ್ಟ್‌ನಲ್ಲಿ ಪತಿ ನಿಕ್ ಜೋನಸ್ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾನ್ಸ್
1970ರಲ್ಲಿ ಯಶ್ ಚೋಪ್ರಾ ಜೊತೆ ಪಮೇಲಾ ಚೋಪ್ರಾ ಮದುವೆ ನಡೆದಿತ್ತು. ಈ ದಂಪತಿಗೆ ಆದಿತ್ಯ- ಉದಯ್ ಇಬ್ಬರು ಮಕ್ಕಳಿದ್ದಾರೆ. ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಗಾಯಕಿಯಾಗಿದ್ದ ಪಮೇಲಾ ಪತಿ ಯಶ್ ಚೋಪ್ರಾ ಸಿನಿಮಾಗಳಿಗೆ ಹಾಡಿದ್ದರು. ‘ಕಬಿ ಕಬೀ’ ಚಿತ್ರದಿಂದ ‘ಮುಜ್‌ಸೇ ದೋಸ್ತಿ ಕರೊಗೆ’ ಚಿತ್ರಗಳವರೆಗೆ ಪಮೇಲಾ ಹಾಡಿದ್ದರು.
ಇದೀಗ ಮುಂಬೈನ ಪಮೇಲಾ ನಿವಾಸದಲ್ಲಿ ಪಮೇಲಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಚಿತ್ರರಂಗದ ಸ್ನೇಹಿತರು, ಆಪ್ತರು ಗಾಯಕಿ ಪಮೇಲಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರ ಅಂತ್ಯಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ.