ಮಂಡ್ಯ: ಕಾವೇರಿ (Cauvery) ನೀರಿನ ವಿಚಾರದಲ್ಲಿ ಪದೇ ಪದೇ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರದ ಧೋರಣೆಯಿಂದ ಹಾಗೂ ಕೋರ್ಟ್‌ನ ಆದೇಶದಿಂದ ರೈತರು ಪಲ್ಟಿ ಹೊಡೆಯುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಇಂದು (ಶುಕ್ರವಾರ) ಮಂಡ್ಯದಲ್ಲಿ (Mandya) ಬಿಜೆಪಿ (BJP) ಕಾರ್ಯಕರ್ತರು ಪಲ್ಟಿ ಚಳವಳಿ (Palti Movement) ನಡೆಸಿದರು.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು 53ನೇ ದಿನದ ಕಾವೇರಿ ಹೋರಾಟದ ಪ್ರಯುಕ್ತ ಪಲ್ಟಿ ಚಳವಳಿ ಮಾಡುವ ಮೂಲಕ ಸರ್ಕಾರವನ್ನು ಗಮನ ಸೆಳೆಯಲು ಬಿಜೆಪಿ ಕಾರ್ಯಕರ್ತರು ಮುಂದಾದರು. ಸದ್ಯ ಕೆಆರ್‌ಎಸ್ ಅಣೆಕಟ್ಟಿನಲ್ಲಿ 100 ಅಡಿಗಿಂತ ಕಡಿಮೆ ನೀರು ಇದೆ. ಹೀಗಿದ್ದರೂ ಸಹ ತಮಿಳುನಾಡಿಗೆ ನೀರು ಬಿಡಲು ಸರ್ಕಾರ ಸಮ್ಮತಿ ನೀಡುತ್ತಾ ಇದೆ. ಇತ್ತ ಕೋರ್ಟ್ ತಮಿಳುನಾಡಿಗೆ ನೀರು ಬಿಡಿ ಎಂದು ಮಂಡ್ಯ ರೈತರನ್ನು ಪಲ್ಟಿ ಹೊಡೆಸುತ್ತಿದೆ. ಇದನ್ನೂ ಓದಿ: ಹುಲಿ ಉಗುರು ಕೇಸ್ – ಅರಣ್ಯ ಇಲಾಖೆ ಅಧಿಕಾರಿಗಳು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ: ಆರಗ ಕಿಡಿ
ಇದಕ್ಕೆ ವಿಡಂಬನೆ ಮಾಡಲು ಬಿಜೆಪಿ ಕಾರ್ಯಕರ್ತರು ಪಲ್ಟಿ ಹೊಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ನೀರು ನಿಲ್ಲಿಸಲು ಮನವಿ ಪತ್ರ ನೀಡಿದರು. ಇದನ್ನೂ ಓದಿ: 3 ದಿನ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿಷೇಧ
Web Stories