ನವದೆಹಲಿ: ಶಪೂರ್ಜಿ ಪಲ್ಲೊಂಜಿ ಗ್ರೂಪ್ ಅಧ್ಯಕ್ಷ, ಪದ್ಮಭೂಷಣ ವಿಜೇತ, ಬಿಲಿಯನೇರ್ ಪಲ್ಲೊಂಜಿ ಮಿಸ್ತ್ರಿ (93) ಅವರು ವಯೋಸಹಜ ಕಾರಣಗಳಿಂದ ನಿಧರಾಗಿದ್ದಾರೆ.
ಪಲ್ಲೊಂಜಿ ಮಿಸ್ತ್ರಿ ಅವರು ಸೋಮವಾರ ತಡರಾತ್ರಿ ಮುಂಬೈನ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬ್ಲೂಮ್‍ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಮಿಸ್ತ್ರಿ ಅವರು ವಿಶ್ವದ ಅಗ್ರ 100 ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ. ಶಪೂರ್ಜಿ ಪಲ್ಲೊಂಜಿ ಗ್ರೂಪ್ ಮುಖ್ಯಸ್ಥರಾಗಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರಗ್ಸ್ ವಶ – ಆರೋಪಿಗಳ ಬಗ್ಗೆ ಸಿಕ್ಕಿಲ್ಲ ಸುಳಿವು
Advertisement
Advertisement
ರಿಯಲ್ ಎಸ್ಟೇಟ್, ಪವರ್, ಟೆಕ್ಸ್‌ಟೈಲ್ಸ್, ಪಬ್ಲಿಕೇಶನ್ಸ್, ಶಿಪ್ಪಿಂಗ್ ಮತ್ತು ಇತರ ಕ್ಷೇತ್ರದಲ್ಲಿ ಕೈಗಾರಿಕೋದ್ಯಮಿಯಾಗಿ ನೀಡಿದ ಕೊಡುಗೆಗಾಗಿ 2016 ರಲ್ಲಿ ಮಿಸ್ತ್ರಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು.
Advertisement
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಟ್ಟಡಗಳು, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಕಟ್ಟಡ, ತಾಜ್‍ಮಹಲ್ ಹೋಟೆಲ್‍ಗಳು, ಓಮನ್‍ನ ಸುಲ್ತಾನನ ಅರಮನೆ ಮತ್ತು ಇನ್ನೂ ಅನೇಕ ಐಕಾನಿಕ್ ರಚನೆಗಳ ನಿರ್ಮಾಣದ ಕೀರ್ತಿ ಪಲ್ಲೊಂಜಿ ಮಿಸ್ತ್ರಿ ಅವರಿಗೆ ಸಲ್ಲುತ್ತೆ. ಇದನ್ನೂ ಓದಿ: ರಾತ್ರಿ ಚಿನ್ನಾಭರಣ ಕಳವು ಮಾಡ್ದ, ಬೆಳಗ್ಗೆ ಕದ್ದ ಚಿನ್ನವನ್ನು ವಾಪಸ್ ತಂದಿಟ್ಟು ಹೋದ
Advertisement
ಪಲ್ಲೊಂಜಿ ಮಿಸ್ತ್ರಿ ಅವರ ಕಿರಿಯ ಪುತ್ರ ಸೈರಸ್ ಮಿಸ್ತ್ರಿ ಅವರು 2012-2016 ರವರೆಗೆ ಟಾಟಾ ಸನ್ಸ್‍ನ ಅಧ್ಯಕ್ಷರಾಗಿದ್ದರು. ಪಲ್ಲೊಂಜಿ ಮಿಸ್ತ್ರಿ ಅವರಿಗೆ ಆಲೂ ಮಿಸ್ತ್ರಿ ಮತ್ತು ಲೈಲಾ ಮಿಸ್ತ್ರಿ ಪುತ್ರಿಯರಿದ್ದಾರೆ.