– ಉಡುಪಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದು ತಪ್ಪಲ್ಲ
ರಾಯಚೂರು: ಮೈಸೂರಿನಲ್ಲಿ ಸಾಹಿತಿ ಭಗವಾನ್ ಮತ್ತಿತರರು ಗೋಮಾಂಸ ಸೇವಿಸಿರುವುದು ಮುಸ್ಲಿಂ ಸಮಾಜದ ಮೇಲಿನ ಪ್ರೀತಿಯಿಂದಲ್ಲ ಹಿಂದೂಗಳ ಮೇಲಿನ ದ್ವೇಷದಿಂದ ಅಂತಾ ಪಲಿಮಾರು ಮಠದ ಪೀಠಾಧಿಪತಿ ವಿದ್ಯಾಧೀಶ ತೀರ್ಥ ಶ್ರೀಗಳು ಕಿಡಿಕಾರಿದ್ದಾರೆ.
ಇದನ್ನೂಓದಿ: ಅನುಮತಿಯಿಲ್ಲದೇ ಸರ್ಕಾರಿ ಸಭಾಂಗಣದಲ್ಲಿ ಗೋಮಾಂಸ ಸೇವನೆ- ನೊಟೀಸ್ ಜಾರಿಗೆ ಡಿಸಿ ನಿರ್ಧಾರ
Advertisement
Advertisement
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಇದು ರಾಜಕೀಯ ಅಷ್ಟೇ. ಗೋಮಾಂಸ ಆದ್ರೇನೂ ಮನುಷ್ಯ ಮಾಂಸವಾದ್ರೇನೂ ಎರಡೂ ಕ್ರೌರ್ಯ ಎಂದಿದ್ದಾರೆ.
Advertisement
ಇದನ್ನೂಓದಿ: ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್
Advertisement
ಪೇಜಾವರ ಶ್ರೀಗಳು ಇಫ್ತಾರ್ ಕೂಟ ಆಯೋಜಿಸಿದ್ದನ್ನ ಸಮರ್ಥಿಸಿಕೊಂಡ ಶ್ರೀಗಳು, ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಕೂಟ ಆಯೋಜಿಸಿದ್ದಾರೆ ತಪ್ಪೇನಿಲ್ಲಾ ಅಂತಾ ತಿಳಿಸಿದ್ರು. ಈ ಕಾರಣಕ್ಕೆ ಪ್ರಮೋದ್ ಮುತಾಲಿಕ್ ಪೇಜಾವರ ಶ್ರೀಗಳ ವಿರುದ್ಧ ಹೋರಾಟ ನಡೆಸುವುದು ಸರಿಯಲ್ಲ ಎಂದರು. ಮುಂದೆ ತಮ್ಮ ಪರ್ಯಾಯ ಕಾರ್ಯಕ್ರಮದಲ್ಲಿ ಎಲ್ಲಾ ಜಾತಿ ಜನಾಂಗದವರು ಪಾಲ್ಗೊಳ್ಳಲಿದ್ದಾರೆ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: ಕೃಷ್ಣಮಠದಲ್ಲಿ ಇಫ್ತಾರ್ ಕೂಟದಿಂದ ಹಿಂದೂ ಸಮಾಜಕ್ಕೆ ಅವಮಾನವಾಗಿದೆ: ಮುತಾಲಿಕ್
ಇದನ್ನೂ ಓದಿ: ಗೋಹತ್ಯೆ ಪರ ಇರೋರಿಗೆ ಡೈಲಾಗ್ ನಲ್ಲೇ ಟಾಂಗ್ ಕೊಟ್ಟ ನಟ ಜಗ್ಗೇಶ್