ಉಡುಪಿ: ಕೊಡವರ ಕಷ್ಟಕ್ಕೆ ಕರುನಾಡು ಮಿಡಿಯುತ್ತಿದ್ದು ಉಡುಪಿಯ ಪಲಿಮಾರು ಮಠಾಧೀಶರು ಸಹಾಯಕ್ಕೆ ಮುಂದಾಗಿದ್ದಾರೆ.
ಕೊಡಗಿನ ನೆರೆ ಪೀಡಿತ ಒಂದು ಗ್ರಾಮ ದತ್ತು ಸ್ವೀಕಾರ ಮಾಡುತ್ತೇವೆ ಎಂದು ಉಡುಪಿ ಪಲಿಮಾರು ವಿದ್ಯಾಧೀಶ ತೀರ್ಥ ಶ್ರೀ ನಿರ್ಧಾರ ಮಾಡಿದ್ದಾರೆ. ಉಡುಪಿ ಕೃಷ್ಣ ಮಠದ ಪರ್ಯಾಯ ಸ್ವಾಮೀಜಿಯಾಗಿರುವ ವಿದ್ಯಾಧೀಶರು ಈ ಮೂಲಕ ಮಾನವೀಯತೆ ತೀರ್ಮಾನ ಕೈಗೊಂಡಿದ್ದಾರೆ.
Advertisement
ಕೃಷ್ಣಮಠ, ಪಲಿಮಾರು ಮಠ ಮತ್ತು ಸಾರ್ವಜನಿಕರ ನೆರೆವಿನಿಂದ ಒಂದು ಗ್ರಾಮದ ನಿರ್ಮಾಣ ಮಾಡುತ್ತೇವೆ ಅಂತ ಹೇಳಿಕೊಂಡಿದ್ದಾರೆ. ಮೊದಲು ಯಾವ ಗ್ರಾಮ ಎನ್ನುವುದು ಗೊತ್ತು ಮಾಡಬೇಕು. ಸಂಬಂಧಪಟ್ಟವರ ಬಳಿ ಈ ಬಗ್ಗೆ ಚರ್ಚೆ ಮಾಡಲಾಗುವುದು. ಅಲ್ಲಿಗೆ ಏನು ಅಗತ್ಯ ಎನ್ನುವುದನ್ನು ಪರಿಶೀಲಿಸಿ ಸೂಕ್ತ ಸೂಕ್ತ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಕೋಟ್ಯಾಧಿಪತಿಯಾಗಿದ್ದ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟ ಮಗಳು!
Advertisement
ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮದ ಮೂಲಕ ಕೊಡಗು ಮತ್ತು ಕೇರಳದ ಪರಿಸ್ಥಿತಿ ತಿಳಿದುಕೊಂಡಿದ್ದೇನೆ. ನಾವು ಊಹಿಸಲೂ ಕಷ್ಟವಾಗಿದೆ. ಅಲ್ಲಿನ ಜನರ ಜೀವನ ಪರಿಸ್ಥಿತಿ ಯಾರಿಗೂ ಬಾರದಿರಲಿ. ಭಗವಂತ ಕಷ್ಟದಿಂದ ಹೊರ ಬರುವ ಶಕ್ತಿ ಕೊಡಲಿ. ನಮ್ಮ ಕೈಲಾದ ಸಹಾಯ ಮಾಡೋಣ, ಸಣ್ಣ ಸಹಾಯ ಕಷ್ಟದಲ್ಲಿರುವವರಿಗೆ ದೊಡ್ಡ ಸಹಾಯವಾಗುತ್ತದೆ. ಕೊಡಗನ್ನು ಕರುನಾಡು ಸೇರಿ ಕಟ್ಟುವ ಕೆಲಸವಾಗಬೇಕು ಅಂತ ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಹೇಳಿದರು. ಇದನ್ನೂ ಓದಿ: 20 ದಿನದ ಹಸುಗೂಸಿಗಾಗಿ ಮಳೆಯಲ್ಲೇ ಓಡಿ, ಬದುಕಿಸಿಕೊಳ್ಳಲಾಗದೇ ನರಳಾಡುತ್ತಿರುವ ತಾಯಿ!
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Advertisement