ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ದುಬಾರೆ ಆನೆ ಕ್ಯಾಂಪ್ ಸಂಪೂರ್ಣ ಮುಳುಗಡೆಯಾಗಿದೆ.
ಕೊಡಗಿನಲ್ಲಿ ದಾಖಲೆಯ ಮಳೆ ಸುರಿದಿದೆ. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಕ್ಯಾಂಪ್ ಸಂಪರ್ಕ ಕಡಿತಗೊಂಡಿದ್ದು, ಆನೆಗಳಿಗೆ ಆಹಾರ ಸಾಗಿಸಲು ಆಗುತ್ತಿಲ್ಲ. ಪ್ರತಿನಿತ್ಯ ಆನೆಗಳಿಗೆ ಐದು ಲಾರಿಗಳು ಆಹಾರ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದರೆ ಈಗ ದುಬಾರೆ ಸಂಪೂರ್ಣ ಜಲಾವೃತವಾಗಿರುವ ಕಾರಣ ಲಾರಿ ಹೋಗಲು ಸಾಧ್ಯವಾಗುತ್ತಿಲ್ಲ.
Advertisement
Advertisement
ಇತ್ತ ಮಡಿಕೇರಿ ತಾಲೂಕಿನ ಬಲಮುರಿಯಲ್ಲಿ ಮನೆ ಸಂಪೂರ್ಣ ಜಲಾವೃತವಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ ಹತ್ತು ಜನರ ರಕ್ಷಣೆ ಮಾಡಲಾಗಿದೆ. ಇಬ್ಬರು ವೃದ್ಧರು, ಮೂವರು ಮಹಿಳೆಯರು, ಮೂವರು ಬಾಲಕಿಯರು ಸೇರಿದಂತೆ ಹತ್ತು ಜನರನ್ನು ರಕ್ಷಿಸಲಾಗಿದೆ. ಜಿಲ್ಲಾಡಳಿತ ಎನ್‌ಡಿಆರ್‌ಎಫ್ ತಂಡ ಮತ್ತು ಸ್ಥಳೀಯ ಪೊಲೀಸರ ಜೊತೆ ಬೋಟ್ ಮೂಲಕ ತೆರಳಿ ಜನರ ರಕ್ಷಣೆ ಮಾಡಿದೆ.
Advertisement
Advertisement
ಮಡಿಕೇರಿಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಗೋಣಿಕೊಪ್ಪ ಪಟ್ಟಣ ಅರ್ಧ ಮುಳುಗಡೆ ಆಗಿದೆ. ಪಾಲಿಬೆಟ್ಟ – ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಗೋಣಿಕೊಪ್ಪೆಯೂ ರಸ್ತೆ ಬಂದ್ ಮಾಡಲಾಗಿದೆ. ಸೆಕೆಂಡ್ ಬ್ಲಾಕ್ ಬಡಾವಣೆಯಲ್ಲಿ ಮನೆಗಳ ಮುಳುಗಡೆಯಾಗಿದ್ದು, ಕೊಡಗು ಜಿಲ್ಲಾಡಳಿತ ಗೋಣಿಕೊಪ್ಪ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆದಿದಾರೆ. ಕ್ಷಣ ಕ್ಷಣಕ್ಕೂ ಮಳೆಯ ಆರ್ಭಟ ಹೆಚ್ಚಾಗುತ್ತಿದ್ದು, ರಸ್ತೆ ದಾಟಲು ಸಾರ್ವಜನಿಕರು ಪರದಾಡುತ್ತಿದ್ದಾರೆ.