ಥಾಣೆ: ಪತಿಯ ಇಬ್ಬರು ಸ್ನೇಹಿತರು ಸೇರಿ ಗ್ಯಾಂಗ್ರೇಪ್ ಮಾಡಿರುವ ಬಗ್ಗೆ 36 ವರ್ಷದ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ಪತಿ ಜೈಲಿನಲ್ಲಿದ್ದು, ಈ ಸಂದರ್ಭವನ್ನು ಉಪಯೋಗಿಸಿಕೊಂಡ ಆರೋಪಿಗಳು ಸಂತ್ರಸ್ತೆಗೆ ನಿನ್ನ ಗಂಡನನ್ನು ಜೈಲಿನಿಂದ ಬಿಡಿಸಲು ನಾವು ಸಹಾಯ ಮಾಡುತ್ತೇವೆ ಎಂದು ಹೇಳಿ ಅತ್ಯಾಚಾರ ಎಸಗಿದ್ದಾರೆ ಎಂದು ತುಲಿಂಜ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
Advertisement
sಶುಕ್ರವಾರ ಜಿಲ್ಲೆಯ ನಲ್ಲ ಸೋಪಾರ ಪ್ರದೇಶದ ಚಾವಲ್ನಲ್ಲಿರುವ ಸಂತ್ರಸ್ತೆಯ ಮನೆಗೆ ಬಂದ ಇಬ್ಬರು ಆರೋಪಿಗಳು ಅತ್ಯಾಚಾರ ಮಾಡಿ ಮಹಿಳೆಗೆ ಬೆದರಿಕೆ ಹಾಕಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
Advertisement
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376ಡಿ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ಕಾಐ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.
Advertisement
ಪ್ರಧಾನಿ ಮೊರೆ ಹೋದ ಗ್ಯಾಂಗ್ರೇಪ್ ಅಪ್ರಾಪ್ತೆ https://t.co/aN4vx0pjXo#Gangrape #Modi #Help pic.twitter.com/Yy1EsIQkCS
— PublicTV (@publictvnews) September 24, 2017