ಮುಂಬೈ: ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಹಾಗೂ ಸಂಗೀತ ನಿರ್ದೇಶಕ ಪಾಲಶ್ ಮುಚ್ಚಲ್ (Palash Muchhal) ಮದುವೆ ಮುಂದೂಡಿಕೆಯಾಗ್ತಿದ್ದಂತೆ ಪಲಾಶ್, ಮಂಧಾನಗೆ ಮೋಸ ಮಾಡಿದ್ರಾ ಅನ್ನೋ ವದಂತಿ ಹಬ್ಬಿದೆ. ಹೀಗಿರುವಾಗಲೇ ಎಕ್ಸ್ ಗರ್ಲ್‌ಫ್ರೆಂಡ್‌ಗೆ ಪ್ರಪೋಸ್ ಮಾಡಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
Btw She is Palash Muchhal’s ex.👀 https://t.co/bkjHpqz07I pic.twitter.com/DnFusW59qY
— Mention Cricket (@MentionCricket) November 25, 2025
ಹೌದು. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ನ.23ರಂದು ಸ್ಮೃತಿ-ಪಾಲಶ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದರು. ಆದ್ರೆ ಅಲ್ಲಿ ಆಗಿದ್ದೇ ಬೇರೆ. ಮದುವೆಗೆ ಕೆಲ ಗಂಟೆಗಳು ಬಾಕಿಯಿರುವಾಗಲೇ ಮಂಧಾನ ತಂದೆಗೆ ಲಘು ಹೃದಯಾಘಾತವಾಗಿತ್ತು. ಅವರು ಸಂಪೂರ್ಣ ಗುಣಮುಖರಾಗುವವರೆಗೆ ಮದುವೆ ಸಮಾರಂಭ ಮುಂದೂಡಲು ಸ್ಮೃತಿ ನಿರ್ಧರಿಸಿದ್ದರು. ಈ ಬೆನ್ನಲ್ಲೇ ಸ್ಮೃತಿ ಮಂಧಾನ ತನ್ನ ಇನ್‌ಸ್ಟಾಗ್ರಾಂ ಖಾತೆಯಿಂದ ಪಾಲಶ್ ಹಾಗೂ ವಿವಾಹಕ್ಕೆ ಸಂಬಂಧಿಸಿದ ಎಲ್ಲಾ ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ.
ಇದರ ಮಧ್ಯೆ ಸ್ಮೃತಿ ಜೊತೆ ಮದುವೆ ನಿಶ್ಚಯವಾಗಿದ್ದರೂ ಪಾಲಶ್ ಮುಚ್ಚಲ್ ಬೇರೊಬ್ಬ ಯುವತಿ ಜೊತೆ ಚಾಟ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಪಾಲಶ್ ತನ್ನ ಎಕ್ಸ್ ಗರ್ಲ್‌ಫ್ರೆಂಡ್ ಪ್ಲಾಸ್ಟಿಕ್ ಸರ್ಜನ್ ಬಿರ್ವಾ ಶಾ ಅವರಿಗೆ ಪ್ರಪೋಸ್ ಮಾಡಿದ್ದ ಫೋಟೋಗಳು ಹಾಗೂ ಆಕೆಯೊಂದಿಗೆ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇದೆಲ್ಲವು 2017ರಲ್ಲಿ ತೆಗೆಸಿದ ಫೋಟೋಗಳು ಎನ್ನಲಾಗಿದೆ. ಒಂದು ಫೋಟೋದಲ್ಲಿ ಸ್ಮೃತಿ ಮಂಧಾನಗೆ ಪ್ರಪೋಸ್ ಮಾಡಿದ ರೀತಿಯಲ್ಲೇ ಪ್ರಪೋಸ್ ಮಾಡಿದ್ರೆ, ಆದ್ರೆ ಅಪಾರ್ಟ್‌ಮೆಂಟ್‌ನಲ್ಲಿರಬಹುದು. ಮತ್ತೊಂದು ಫೋಟೋದಲ್ಲಿ ಬೆನ್ನಮೇಲೆ ಹೊತ್ತುಕೊಂಡಿದ್ದಾರೆ.
2019ರಿಂದ ಪ್ರೀತಿಯಲ್ಲಿರುವ ಮಂಧಾನ ಮತ್ತು ಪಾಲಶ್ ಮುಚ್ಚಲ್ 2024ರಲ್ಲಿ ತಮ್ಮ ಪ್ರೀತಿಯನ್ನ ಬಹಿರಂಗಪಡಿಸಿದ್ದರು. ಇತ್ತೀಚಿಗೆ ಮುಂಬೈ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪಾಲಶ್ ಸ್ಮೃತಿಗೆ ಪ್ರಪೋಸ್ ಕೂಡ ಮಾಡಿದ್ದರು. ಸದ್ಯ ಸ್ಮೃತಿ ಮಂಧಾನಗೆ ಪಾಲಶ್ ಮೋಸ ಮಾಡಿದ್ದಾರಾ? ಇದೇ ವಿಷಯಕ್ಕೆ ಮದುವೆ ಮನೆಯಲ್ಲಿ ರಾದ್ಧಾಂತವಾಗಿರಬಹುದಾ? ಎಂಬ ಚರ್ಚೆ ಜೋರಾಗಿದೆ. ಇನ್ನೂ ವೈರಲ್ ಫೋಟೋಗಳ ಬಗ್ಗೆ ಸ್ಮೃತಿ ಹಾಗೂ ಪಾಲಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

