ಒಂದೇ ಓವರ್‌ನಲ್ಲಿ 31 ರನ್‌ – ಸಚಿನ್‌ ತೆಂಡೂಲ್ಕರ್‌ ಪುತ್ರನ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್‌

Public TV
2 Min Read
Arjun Tendulkar 1

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) 13 ರನ್‌ಗಳಿಂದ ವಿರೋಚಿತ ಸೋಲನುಭವಿಸಿತು.

ಸಿಕ್ಸರ್‌ ಬೌಂಡರಿಗಳ ಆಟದಲ್ಲಿ ಬರೋಬ್ಬರಿ 25 ಸಿಕ್ಸರ್‌ ಹಾಗೂ 33 ಬೌಂಡರಿಗಳು ಸಿಡಿದವು. ಪಂಜಾಬ್‌ ಕಿಂಗ್ಸ್‌ ಪರ 14 ಸಿಕ್ಸರ್‌, 16 ಬೌಂಡರಿ ಹಾಗೂ ಮುಂಬೈ ಇಂಡಿಯನ್ಸ್‌ ಪರ 11 ಸಿಕ್ಸರ್‌, 17 ಬೌಂಡರಿಗಳು ದಾಖಲಾದವು. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 31 ರನ್‌ ಕೊಟ್ಟ ಅರ್ಜುನ್‌ ತೆಂಡೂಲ್ಕರ್‌; ಹರ್ಷ ತಂದ ಅರ್ಷ್‌ದೀಪ್‌ – ಪಂಜಾಬ್‌ಗೆ 13 ರನ್‌ಗಳ ಜಯ

Arjun Tendulkar

ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಕೊನೆಯ 6 ಓವರ್‌ಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಿಕೊಂಡಿತು. ಮೊದಲ 14 ಓವರ್‌ಗಳ ಅಂತ್ಯಕ್ಕೆ 105 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಪಂಜಾಬ್‌, ಮುಂಬೈಗೆ ಸುಲಭ ಗುರಿಗೆ ತುತ್ತಾಗಲಿದೆ ಎಂದೇ ಭಾವಿಸಲಾಗಿತ್ತು. ಆದ್ರೆ ಅರ್ಜುನ್‌ ತೆಂಡೂಲ್ಕರ್‌ (Arjun Tendulkar) ಎಸೆದ 16ನೇ ಓವರ್‌ನಲ್ಲಿ ಸ್ಯಾಮ್‌ ಕರ್ರನ್‌ ಹಾಗೂ ಹರ್ಪ್ರೀತ್‌ ಸಿಂಗ್‌ ಜೋಡಿ ಬರೋಬ್ಬರಿ 31 ರನ್‌ (6,1,4,1,4,6,5,4) ಸಿಡಿಸಿತ್ತು. ಈ ಬೆನ್ನಲ್ಲೇ ಕ್ಯಾಮರೂನ್ ಗ್ರೀನ್ ಎಸೆದ 18ನೇ ಓವರ್‌ನಲ್ಲಿ ಜಿತೇಶ್‌ ಶರ್ಮಾ ಸ್ಫೋಟಕ 25 ರನ್ ಚಚ್ಚಿದರು. ಇದು ಪಂಜಾಬ್‌ ಗೆಲುವಿಗೆ ಪ್ರಮುಖ ತಿರುವು ಪಡೆದುಕೊಂಡಿತು.

MIvsPBKS 3

ಅರ್ಜುನ್‌ ತೆಂಡೂಲ್ಕರ್‌ ಒಂದೇ ಓವರ್‌ನಲ್ಲಿ 31 ರನ್‌ ನೀಡಿರುವ ಬಗ್ಗೆ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಕೆಲವರು ʻಇದು ಪಕ್ಕಾ ನೆಪೊಟಿಸಮ್‌ ಪ್ರಾಡಕ್ಟ್‌ʼ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: 7 ಸಾವಿರ ರನ್‌ ಪೂರೈಸಿದ ರಾಹುಲ್‌ – ಕೊಹ್ಲಿ, ರೋಹಿತ್‌ ಸೇರಿ ಹಲವರ ದಾಖಲೆ ಉಡೀಸ್‌

MIvsPBKS

ಹಿಟ್‌ ಮ್ಯಾನ್‌ ಬೆಂಬಲ: ಸದ್ಯ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ ಪಂದ್ಯ ಸೋತ ಹೊರತಾಗಿಯೂ ಅರ್ಜುನ್‌ ತೆಂಡೂಲ್ಕರ್‌ನನ್ನ ಬೆಂಬಲಿಸಿದ್ದಾರೆ. ಬಹುಶಃ ಅರ್ಜುನ್‌ ಒತ್ತಡದಲ್ಲಿದ್ದರು ಅನ್ನಿಸುತ್ತೆ. ಆದರೆ ಇದೇ ಅಂತ್ಯವಲ್ಲ ಈ ಬೆಳವಣಿಗೆಯಿಂದ ಇನ್ನಷ್ಟು ಕಲಿಯುತ್ತಾರೆ. ಅರ್ಜುನ್‌ ಆಶಾದಾಯಕ ಬೆಳವಣಿಗೆ ಹೊಂದಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಕಂಬ್ಯಾಕ್‌  ಮಾಡಲಿದ್ದಾರೆ. ಅವರಿಗೆ ನಮ್ಮ ತಂಡದ ಆಟಗಾರರ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.

Share This Article