ನವದೆಹಲಿ: ಇಂಗ್ಲೆಂಡ್ ರಾಣಿ ಎಲಿಜಬೆತ್‍ರನ್ನು ಭೇಟಿ ಮಾಡಲು ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.
2019ರ ವಿಶ್ವಕಪ್‍ಗೆಂದು ಇಂಗ್ಲೆಂಡ್‍ಗೆ ತೆರಳಿರುವ 10 ತಂಡಗಳ ನಾಯಕರನ್ನು ಬ್ರಿಟನ್ ರಾಣಿ ಎಲಿಜಬೆತ್ ಮತ್ತು ಯುವರಾಜ ಹ್ಯಾರಿ ಅವರು ಭೇಟಿ ಮಾಡಿ ಶುಭಕೋರಿದ್ದಾರೆ. ಈ ಸಮಾರಂಭದಲ್ಲಿ ಇಂಗ್ಲೆಂಡ್‍ನ ಹಲವು ರಾಜ ಮನೆತನದವರು ನಾಯಕರನ್ನು ಭೇಟಿಯಾಗಿ ಶುಭಕೋರಿದ್ದಾರೆ.
Advertisement
Advertisement
ಈ ಸಮಾರಂಭಕ್ಕೆ ಎಲ್ಲಾ ತಂಡದ ನಾಯಕರುಗಳು ಸೂಟ್‍ಗಳನ್ನು ಧರಿಸಿ ರಾಣಿಯನ್ನು ಭೇಟಿಯಾದರೆ ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಅವರು ಮಾತ್ರ ಸಾಂಪ್ರದಾಯಿಕ ಉಡುಪು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಈ ಸಮಾರಂಭದಲ್ಲಿ ಸರ್ಫರಾಜ್ ಅವರು ತಮ್ಮ ದೇಶದ ಸಾಂಪ್ರದಾಯಿಕ ಉಡುಪಾದ ಬಿಳಿ ಬಣ್ಣದ ಸಲ್ವಾರ್ ಕಮೀಜ್‍ನ್ನು ಧರಿಸಿ ಅದರ ಮೇಲೆ ತಮ್ಮ ತಂಡದ ಹಸಿರು ಬಣ್ಣದ ಕೋಟನ್ನು ಧರಿಸಿ ಸಮಾರಂಭಕ್ಕೆ ಬಂದಿದ್ದಾರೆ.
Advertisement
Every other captain, Afghanistan, Australia, Bangladesh, England, India, SouthAfrica, NewZealand, West Indies & Zimbabwe is smartly turned out in jacket & tie, but no, not the Pakistani. No sir, not him. I’m surprised he didn’t come in his Lungi-Banyan-Topi costume. How does …?
— Tarek Fatah (@TarekFatah) May 30, 2019
Advertisement
ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗುತ್ತಿದ್ದು ಸರ್ಫರಾಜ್ ಅಹ್ಮದ್‍ರನ್ನು ಟೀಕಿಸಿ ಟ್ವೀಟ್ ಮಾಡಿರುವ ಪಾಕಿಸ್ತಾನ ಮೂಲದ ಕೆನೆಡಿಯಾನ್ ಬರಹಗಾರ ಟರೆಕ್ ಫತಾಹ್ ಪೈಜಾಮಾ ಧರಿಸಿ ಬಂದಿದ್ದಾರೆ. ಸದ್ಯ ಅವರು ಲುಂಗಿ, ಬನ್ಯನ್, ಟೋಪಿ ಧರಿಸಿ ಬಂದಿಲ್ಲ ಎಂದು ಅಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಸರ್ಫರಾಜ್ ಅಹ್ಮದ್ ನಾಯಕನಾಗಿರುವ ಪಾಕಿಸ್ತಾನ ತಂಡ ವಿಶ್ವಕಪ್‍ನ ಮೊದಲ ಪಂದ್ಯವನ್ನು ಇಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.