Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪಾಕ್‌ ಮಧ್ಯಸ್ಥಿಕೆ|ಭಾರತದ ರಾಜತಾಂತ್ರಿಕತೆಗೆ ದೊಡ್ಡ ಹಿನ್ನಡೆ: ಜೈರಾಮ್‌ ರಮೇಶ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಪಾಕ್‌ ಮಧ್ಯಸ್ಥಿಕೆ|ಭಾರತದ ರಾಜತಾಂತ್ರಿಕತೆಗೆ ದೊಡ್ಡ ಹಿನ್ನಡೆ: ಜೈರಾಮ್‌ ರಮೇಶ್‌

Latest

ಪಾಕ್‌ ಮಧ್ಯಸ್ಥಿಕೆ|ಭಾರತದ ರಾಜತಾಂತ್ರಿಕತೆಗೆ ದೊಡ್ಡ ಹಿನ್ನಡೆ: ಜೈರಾಮ್‌ ರಮೇಶ್‌

Public TV
Last updated: April 8, 2026 1:32 pm
Public TV
Share
2 Min Read
Jairam Ramesh
SHARE

ನವದೆಹಲಿ: ಅಮೆರಿಕ-ಇರಾನ್‌ (US-Iran) ನಡುವೆ ಕದನ ವಿರಾಮಕ್ಕೆ (Ceasefire) ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿದ್ದು ಭಾರತದ ರಾಜತಾಂತ್ರಿಕತೆಗೆ ಆಗಿರುವ ದೊಡ್ಡ ಹಿನ್ನಡೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್‌(Jairam Ramesh) ಟೀಕಿಸಿದ್ದಾರೆ.

ಮೋದಿ ಸರ್ಕಾರದ (Narendra Modi) ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿದ ಅವರು, 2008ರ ಮುಂಬೈ ದಾಳಿಯ ನಂತರ ಡಾ. ಮನಮೋಹನ್‌ ಸಿಂಗ್‌ ಸರ್ಕಾರವು ಪಾಕಿಸ್ತಾನದ(Pakistan) ದುಷ್ಕೃತ್ಯಗಳನ್ನು ಜಗತ್ತಿಗೆ ಮನವರಿಕೆ ಮಾಡಿಕೊಡುವ ಮೂಲಕ ಆ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಒಂಟಿಯಾಗಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಮೋದಿ ಸರ್ಕಾರವು ಪಾಕಿಸ್ತಾನವನ್ನು ಒಂಟಿಯಾಗಿಸುವ ಬದಲು, ಆ ದೇಶವು ಈಗ ಅಮೆರಿಕ-ಇರಾನ್ ನಡುವೆ ಸಂಧಾನಕಾರನಾಗಿ ಹೊರಹೊಮ್ಮುವಂತೆ ಮಾಡಿದೆ ಎಂದು ದೂರಿದ್ದಾರೆ.

ಪಶ್ಚಿಮ ಏಷ್ಯಾದ ಸಂಘರ್ಷದಲ್ಲಿ ಪಾಕಿಸ್ತಾನವು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿರುವುದು ಭಾರತದ ರಾಜತಾಂತ್ರಿಕತೆಗೆ ಆಗಿರುವ ದೊಡ್ಡ ಹಿನ್ನಡೆ. ಪಾಕಿಸ್ತಾನವನ್ನು ಜಾಗತಿಕವಾಗಿ ಒಂಟಿಯಾಗಿಸುವ ಭಾರತದ ಪ್ರಯತ್ನ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

The entire world will cautiously welcome the two-week ceasefire in the West Asia conflict between the US and Israel on the one side and Iran on the other.

The conflict had begun on Feb 28th with the targeted assassinations of the topmost echelons of the regime in Iran. These…

— Jairam Ramesh (@Jairam_Ramesh) April 8, 2026

ಪ್ರಧಾನಿ ಮೋದಿ ಅವರು ತಮ್ಮನ್ನು ತಾವು ‘ವಿಶ್ವಗುರು’ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಪಾಕಿಸ್ತಾನದಂತಹ ದೇಶವು ಜಾಗತಿಕ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಮೋದಿ ಅವರ “ವ್ಯಕ್ತಿತ್ವ ಆಧಾರಿತ ವಿದೇಶಾಂಗ ನೀತಿ”ಯ ವೈಫಲ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಕದನ ವಿರಾಮ ಘೋಷಣೆಯಲ್ಲೂ ಎಡವಟ್ಟು – ಈಗ ಪಾಕ್‌ ಪ್ರಧಾನಿ ಫುಲ್‌ ಟ್ರೋಲ್‌

ಆಪರೇಷನ್ ಸಿಂಧೂರವನ್ನು ಮೇ 10, 2025 ರಂದು ಇದ್ದಕ್ಕಿದ್ದಂತೆ ಯಾಕೆ ನಿಲ್ಲಿಸಲಾಯಿತು ಎಂಬುದಕ್ಕೆ ಪ್ರಧಾನಿ ಮೋದಿ ಇನ್ನೂ ಉತ್ತರ ನೀಡಿಲ್ಲ. ಇದರ ಮೊದಲ ಘೋಷಣೆಯನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಿಂದ ಬಂದಿತ್ತು ಮತ್ತು ಅಂದಿನಿಂದ ಅಮೆರಿಕದ ಅಧ್ಯಕ್ಷರು ಸುಮಾರು ನೂರು ಬಾರಿ ಹೇಳಿಕೆ ನೀಡಿದ್ದಾರೆ ಎಂದು ಸಿಟ್ಟು ಹೊರಹಾಕಿದ್ದಾರೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ತಾನವನ್ನು ದಲಾಲ್ (ದಲ್ಲಾಳಿ) ಎಂದು ಕರೆದಿದ್ದರು. ಆದರೆ ಈಗ ಅದೇ ದೇಶವು ಶಾಂತಿ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಕೇಂದ್ರ ಸರ್ಕಾರದ ಗೊಂದಲವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಸ್ವಯಂ ಘೋಷಿತ ವಿಶ್ವಗುರುವಿನ 56 ಇಂಚಿನ ಎದೆ ಕುಗ್ಗಿದೆ. ಇಸ್ರೇಲ್‌ನ ಯುದ್ಧೋನ್ಮಾದದ ​​ಬಗ್ಗೆ ಮಾತ್ರವಲ್ಲದೆ, ಶ್ವೇತಭವನದಲ್ಲಿ ಅವರ ಉತ್ತಮ ಸ್ನೇಹಿತ ಬಳಸುತ್ತಿರುವ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ಅವಮಾನಕರ ಭಾಷೆಯ ಬಗ್ಗೆ ಮೋದಿಯ ಮೌನ ಅವರ ಹೇಡಿತನವನ್ನು ಪ್ರದರ್ಶಿಸುತ್ತದೆ ಎಂದು ಕಿಡಿಕಾರಿದ್ದಾರೆ.

TAGGED:iranJairam Rameshnarendra modipakistanಇರಾನ್ಜೈರಾಮ್ ರಮೇಶ್ನರೇಂದ್ರ ಮೋದಿಪಾಕಿಸ್ತಾನ
Share This Article
Facebook Whatsapp Whatsapp Telegram

Cinema news

rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories
trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema

You Might Also Like

Love
Latest

ಪ್ರೀತಿ ಕೈಬೀಸಿ ಕರೆಯುವಾಗ ಎಲ್ಲವನ್ನೂ ಬಿಟ್ಬಿಡ್ಬೇಕಂತೆ..!

Public TV
By Public TV
7 minutes ago
Nikhil Kumaraswamy
Bengaluru City

ನಾಳೆ ʻಜೆಡಿಎಸ್ ಬೆಳ್ಳಿ ಹಬ್ಬʼ ಸಮಾವೇಶ – 1 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ

Public TV
By Public TV
22 minutes ago
West Bengala Election bjp manifesto Rs 3000 aid for women unemployed youth Uniform Civil Code in 6 months crackdown on infiltration Amit Shah Sankalp Patra 7th Pay Commission
Latest

ಮಹಿಳೆಯರಿಗೆ, ನಿರೋದ್ಯೋಗಿ ಯುವಕರಿಗೆ ತಿಂಗಳಿಗೆ 3 ಸಾವಿರ – ಬಂಗಾಳ ಗೆಲ್ಲಲು ಬಿಜೆಪಿಯಿಂದ 15 ಭರವಸೆ

Public TV
By Public TV
1 hour ago
Srinanda
Chikkamagaluru

ದತ್ತಪೀಠದ ತಪ್ಪಲಿನಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶವವಾಗಿ ಪತ್ತೆ

Public TV
By Public TV
1 hour ago
Red Corner Notice Mangaluru
Crime

ವಿದೇಶದಲ್ಲಿ ತಲೆಮರೆಸಿಕೊಂಡ ಇಬ್ಬರು ಆರೋಪಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ

Public TV
By Public TV
1 hour ago
Siddaramaiah HD Kumaraswamy
Latest

ಹಣ ವಸೂಲಿಗಾಗಿ ಸಿದ್ದರಾಮಯ್ಯ ತಮ್ಮ ಮಗನನ್ನು ನೇಮಕ ಮಾಡಿಕೊಂಡಿದ್ದಾರೆ: ಹೆಚ್‌ಡಿಕೆ ವಾಗ್ದಾಳಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?