ಭಾರತದೊಂದಿಗಿನ ಯುದ್ಧದಲ್ಲಿ ನಮಗೆ ಉಳಿಗಾಲವಿಲ್ಲ: ಪಾಕ್ ನಿವೃತ್ತ ಏರ್ ಮಾರ್ಷಲ್

Public TV
2 Min Read
Pakistans former Air Marshal Masood Akhtar

ಇಸ್ಲಮಾಬಾದ್: ಇದೀಗ ಪಾಕಿಸ್ತಾನ(Pakistan) ಮತ್ತು ಭಾರತದ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದ್ದು, ಭಾರತದೊಂದಿಗಿನ ಯುದ್ಧದಲ್ಲಿ ನಾವು ಉಳಿಯುವುದಿಲ್ಲ ಎಂದು ಪಾಕ್ ನಿವೃತ್ತ ಏರ್ ಮಾರ್ಷಲ್ ಮಸೂದ್ ಅಖ್ತರ್(Masood Akhtar) ಅಲ್ಲಿನ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ.

ಭಾರತದ ಪ್ರತಿದಾಳಿಗೆ ಇಡೀ ಪಾಕಿಸ್ತಾನವೇ ನಡುಗಿ ಹೋಗಿದೆ. ಇದರ ಬೆನ್ನಲ್ಲೇ ಪಾಕ್ ಮಾಜಿ ಏರ್ ಮಾರ್ಷಲ್ ಮಸೂದ್ ಅಖ್ತರ್ ಭಾರತದೊಂದಿಗೆ ಯುದ್ಧ ಮಾಡಿದರೆ ನಮಗೆ ಉಳಿಗಾಲವಿಲ್ಲ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ವಾಯುನೆಲೆಗೆ ಯಾವುದೇ ಹಾನಿಯಾಗಿಲ್ಲ, ಗಡಿಯಲ್ಲಿ ಸೇನೆಯನ್ನು ನಿಯೋಜಿಸುತ್ತಿದೆ ಪಾಕ್‌ : ಭಾರತ

ಮಾಧ್ಯಮದ ಜೊತೆ ಮಾತನಾಡಿದ ಅವರು, ಭಾರತದಲ್ಲಿ 16 ಲಕ್ಷ ಸೈನಿಕರಿದ್ದಾರೆ. ಆದರೆ ನಮ್ಮಲ್ಲಿ ಬರೀ 6 ಲಕ್ಷವಷ್ಟೇ ಸೈನಿಕರಿದ್ದಾರೆ. ಹಾಗಾಗಿ ಭಾರತದೊಂದಿಗಿನ ಯಾವುದೇ ಯುದ್ಧವು ನಮ್ಮನ್ನು ಉಳಿಸುವುದಿಲ್ಲ ಎಂದು ಭೀತಿಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಸಿಮ್ ಮುನೀರ್‌ನಿಂದ ದೇಶ ನಾಶ – ರೊಚ್ಚಿಗೆದ್ದ ಪಾಕ್‌ ಜನ

ಈಗಿನ ದೇಶದ ಪರಿಸ್ಥತಿಯನ್ನು ನೋಡಿದರೆ ಚಿಂತಾಜನಕವಾಗಿವೆ. ಅದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ನಮ್ಮಲ್ಲಿ ದಿನೇದಿನೇ ಪರಿಸ್ಥಿತಿ ಹದಗೆಡುತ್ತಿದೆ. ಅಮೆರಿಕ ಒತ್ತಡ ಹೇರುವವರೆಗೆ ಉದ್ವಿಗ್ನತೆ ಕಡಿಮೆಯಾಗುವುದಿಲ್ಲ. ನಾಲ್ಕು ಸಂದರ್ಭಗಳಲ್ಲಿ, ಭಾರತ ಬೃಹತ್ ದಾಳಿಗಳನ್ನು ನಡೆಸಲು ಯೋಜಿಸಿತ್ತು. ನಾವು ನಿಜವಾಗಿಯೂ ಏನು ಮಾಡಬೇಕೆಂದು ಯೋಚಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ಹೇಳಿದ್ದಾರೆ. ಮಸೂದ್ ಅಖ್ತರ್ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಪಾಕ್‌ ತತ್ತರ – ಇಸ್ಲಾಮಾಬಾದ್‌ನಲ್ಲಿ 48 ಗಂಟೆಗಳವರೆಗೆ ಪೆಟ್ರೋಲ್ ಪಂಪ್‌ಗಳು ಬಂದ್‌

ಏ.33ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ(Pahalgam Terror Attack) ಮಾಡಿ 26 ಮಂದಿ ಅಮಾಯಕರ ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ(Operation Sindoor) ಎಂಬ ಹೆಸರಿನಡಿ ಪಾಕ್‌ನ 9 ಸ್ಥಳಗಳಲ್ಲಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿತ್ತು. ಇದರಿಂದ ವಿಚಲಿತಗೊಂಡ ಪಾಕ್ ಭಾರತದ ಮೇಲೆ ಡ್ರೋನ್, ಶೆಲ್ ದಾಳಿಗೆ ಯತ್ನಿಸಿತ್ತು. ಆದರೆ ಭಾರತೀಯ ಸೇನೆ ಪಾಕ್‌ನ ಎಲ್ಲಾ ಡ್ರೋನ್ ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸುವ ಮೂಲಕ ತಕ್ಕ ಉತ್ತರ ನೀಡಿದೆ.

Share This Article