Connect with us

International

ಸಾವು ಬದುಕಿನ ಮಧ್ಯೆ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಹೋರಾಟ

Published

on

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.

69 ವರ್ಷದ ನವಾಜ್ ಷರೀಫ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಅಡ್ನಾನ್ ಖಾನ್ ಸರಣಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ‘ಮಾಜಿ ಪ್ರಧಾನಿ ಗಂಭೀರವಾಗಿ ಅಸ್ವಸ್ಥರಾಗಿದ್ದು, ಆರೋಗ್ಯ ಮತ್ತು ಜೀವನಕ್ಕಾಗಿ ಹೋರಾಡುತ್ತಿದ್ದಾರೆ. ಮೂತ್ರಪಿಂಡದ ಕಾರ್ಯ ಕ್ಷೀಣಿಸುವ ಮೂಲಕ ಥ್ರಂಬೋಸೈಟೋಪೆನಿಯಾ ಮತ್ತು ಎನ್‍ಎಸ್‍ಟಿಇಎಂಐ ಮತ್ತಷ್ಟು ಜಟಿಲವಾಗಿದೆ. ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಸಿಗುತ್ತಿಲ್ಲ’ ಎಂದು ಡಾ.ಅಡ್ನಾನ್ ಖಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿಯೊಂದಿಗೆ ಕೊನೆಯದಾಗಿ ಮಾತನಾಡಿದ ನವಾಜ್ ಶರೀಫ್- ಭಾವನಾತ್ಮಕ ವಿಡಿಯೋ ವೈರಲ್

ಸ್ಟೀಲ್ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್ ಅವರಿಗೆ 2018ರ ಡಿಸೆಂಬರ್ ನಲ್ಲಿ ನ್ಯಾಯಾಲಯವು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಚೌಧರಿ ಶುಗರ್ ಮಿಲ್ಸ್ ಪ್ರಕರಣದಲ್ಲಿ ನವಾಜ್ ಷರೀಫ್ ಹಾಗೂ ಅವರ ಕುಟುಂಬದವರನ್ನು ರಾಷ್ಟ್ರೀಯ ತನಿಖಾ ದಳವು ವಿಚಾರಣೆ ಮಾಡುತ್ತಿದೆ. ಆದರೆ ಮೂರು ದಿನಗಳ ಹಿಂದಷ್ಟೇ ಮಾಜಿ ಪ್ರಧಾನಿಯ ಅನಾರೋಗ್ಯ ಕಾರಣದಿಂದ ಜಾಮೀನು ನೀಡಲಾಗಿತ್ತು.

ನವಾಜ್ ಷರೀಫ್ ರಕ್ತದಲ್ಲಿನ ಬಿಳಿರಕ್ತಕಣಗಳ (ಪ್ಲೇಟ್‍ಲೇಟ್) ಸಂಖ್ಯೆಯು ನಿರಂತರವಾಗಿ ಕುಸಿಯುತ್ತಿದೆ. ಭಾನುವಾರ ಒಂದೇ ದಿನ ಅವರ ಪ್ಲೇಟ್‍ಲೇಟ್ ಸಂಖ್ಯೆಯು 45 ಸಾವಿರದಿಂದ 25 ಸಾವಿರಕ್ಕೆ ಇಳಿದಿತ್ತು. ಹೀಗಾಗಿ ಅವರಿಗೆ ನೀಡಲಾಗುತ್ತಿದ್ದ ಹೃದಯ ಸಂಬಂಧಿ ಚಿಕಿತ್ಸೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Click to comment

Leave a Reply

Your email address will not be published. Required fields are marked *