ಇಸ್ಲಾಮಾಬಾದ್: ಪಾಕಿಸ್ತಾನ ಭಾರತವನ್ನು ಕೆನಕಿ ಪದೇ ಪದೇ ಹಿನ್ನಡೆ ಅನುಭವಿಸುತ್ತಿದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಮುಜುಗುರಕ್ಕೆ ಒಳಗಾಗುತ್ತಿದೆ. ಭಾರತೀಯ ಪೈಲಟ್ ಎಂದು ತಿಳಿದು ತನ್ನ ದೇಶದ ಪೈಲಟ್‍ನನ್ನೇ ಪಾಕ್ ಪ್ರಜೆಗಳು ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಪಾಕಿಸ್ತಾನದ ಶಹಾಜ್-ಉದ್-ದಿನ್ ಹತ್ಯೆಯಾದ ಪಾಕ್ ವಾಯು ಪಡೆಯ ಪೈಲಟ್. ವಿಮಾನ ಪತನಗೊಂಡು ಕೆಳಗೆ ಬಿದ್ದಿದ್ದ ಶಹಾಜ್-ಉದ್-ದಿನ್ ಅನ್ನು ಭಾರತೀಯ ಪೈಲಟ್ ಎಂದು ತಿಳಿದು ಸ್ಥಳೀಯರೇ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಆಗಿದ್ದೇನು?:
ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ಮಿಗ್-21ನಿಂದ ಪಾಕಿಸ್ತಾನದ ಎಫ್ 16 ವಿಮಾನವೊಂದನ್ನು ಬುಧವಾರ ಬೆಳಗ್ಗೆ ಹೊಡೆದುರುಳಿಸಿದ್ದರು. ತಕ್ಷಣವೇ ಅಭಿನಂದನ್ ಹಾಗೂ ಪಾಕ್ ಪೈಲಟ್ ಶಹಾಜ್-ಉದ್-ದಿನ್ ಪ್ಯಾರಾಚೂಟ್ ಸಹಾಯದಿಂದ ಕೆಳಕ್ಕೆ ಹಾರಿ ಪ್ರಾಣ ಉಳಿಸಿಕೊಂಡಿದ್ದರು.
Advertisement
ಪಾಕ್ ಪೈಲಟ್ ಶಹಾಜ್-ಉದ್-ದಿನ್ ಪಾಕಿಸ್ತಾನದ ನೌಶೇರ್ ಪ್ರದೇಶದಲ್ಲಿ ಬಿದ್ದಿದ್ದ. ಈ ವೇಳೆ ಶಹಾಜ್ ಬಳಿಗೆ ಬಂದ ಸ್ಥಳೀಯರು ಆತ ಭಾರತೀಯ ಪೈಲಟ್ ಎಂದು ಭಾವಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಪಾಕ್ ಪೈಲಟ್‍ನನ್ನು ವಿಚಾರಿಸಿದೇ ಎಲ್ಲರೂ ಸೇರಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
Advertisement
ಪಾಕಿಸ್ತಾನ ಯೋಧರು ತಮ್ಮ ಪೈಲಟ್ ರಕ್ಷಣೆಗಾಗಿ ಓಡೋಡಿ ಸ್ಥಳಕ್ಕೆ ಬಂದಿದ್ದಾರೆ. ಆದರೆ ಸ್ಥಳೀಯರು ನಡೆಸಿ ಹಲ್ಲೆಯಿಂದ ಶಹಾಜ್-ಉದ್-ದಿನ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಹಾಜ್-ಉದ್-ದಿನ್ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಪೈಲಟ್ ಅಭಿನಂದ್ ಅವರ ತಂದೆ ನಿವೃತ್ತ ಭಾರತೀಯ ವಾಯು ಪಡೆಯ ಅಧಿಕಾರಿ. ಹೀಗೆ ಶಹಾಜ್-ಉದ್-ದಿನ್ ಕುಟುಂಬವು ಪಾಕ್ ವಾಯು ಪಡೆಯಲ್ಲಿ ಸೇವೆ ಸಲ್ಲಿಸಿದೆ. ಶಹಾಜ್-ಉದ್-ದಿನ್ ತಂದೆ ವಾಸೀಮ್-ಉದ್-ದಿನ್ ಕೂಡ ಪಾಕ್ ವಾಯು ಪಡೆಯ ಪೈಲಟ್.
ವಿಮಾನ ಪತನವಾದ ಕೆಲ ಸಮಯದ ಬಳಿಕ ಪಾಕ್ ಸೇನೆಯ ಅಧಿಕಾರಿ ತಮ್ಮ ಬಳಿ ಇಬ್ಬರು ಭಾರತೀಯ ಪೈಲಟ್‍ಗಳಿದ್ದಾರೆ ಎಂದು ಸುಳ್ಳು ಹೇಳಿತ್ತು. ಸ್ವಲ್ಪ ಸಮಯದ ಬಳಿಕ ಅಭಿನಂದನ್ ಅವರು ಮಾತ್ರ ನಮ್ಮ ಬಂಧನದಲ್ಲಿದ್ದಾರೆ ಎಂದು ಸತ್ಯ ಒಪ್ಪಿಕೊಂಡಿತ್ತು. ಎರಡು ದಿನಗಳ ಕಾಲ ಪಾಕ್ ಸರ್ಕಾರವು ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv