ಇಸ್ಲಾಮಾಬಾದ್: ನಗದು ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟನ್ನು (Pakistan economic crisis) ಎದುರಿಸಲು ಹೆಣಗಾಡುತ್ತಿರುವ ನಡುವೆಯೇ ಇದೀಗ ಅಲ್ಲಿನ ರಕ್ಷಣಾ ಸಚಿವರು (Defense Minister) ಪಾಕಿಸ್ತಾನ ದಿವಾಳಿ (Bankrupt) ರಾಷ್ಟ್ರವಾಗಿದೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.
ಶನಿವಾರ ಸಿಯಾಲ್‌ಕೋಟ್‌ನಲ್ಲಿ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif), ನಾವೀಗ ದಿವಾಳಿಯಾಗಿರುವ ದೇಶದಲ್ಲಿ ವಾಸಿಸುತ್ತಿದ್ದೇವೆ. ಈ ಸ್ಥಿತಿಗೆ ಪ್ರತಿಯೊಬ್ಬರೂ ಕಾರಣರು. ಪಾಕಿಸ್ತಾನದ ಸಮಸ್ಯೆಗೆ ಪಾಕಿಸ್ತಾನವೇ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ.
Advertisement
Advertisement
ಪಾಕಿಸ್ತಾನ ಈಗಾಗಲೇ ದಿವಾಳಿಯಾಗಿದೆ. ನಾವು ದಿವಾಳಿಯಾಗಿರುವ ದೇಶದಲ್ಲಿ ವಾಸಿಸುತ್ತಿದ್ದೇವೆ. ಪಾಕಿಸ್ತಾನದ ಸಮಸ್ಯೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಬಳಿ ಪರಿಹಾರವಿಲ್ಲ. ನಮ್ಮ ಸಮಸ್ಯೆಗಳಿಗೆ ನಮ್ಮ ದೇಶದೊಳಗೆಯೇ ಪರಿಹಾರವಿದೆ. ಪಾಕಿಸ್ತಾನದಲ್ಲಿ ಕಾನೂನು ಹಾಗೂ ಸಂವಿಧಾನವನ್ನು ಅನುಸರಿಸದಿರುವುದರಿಂದ ಆರ್ಥಿಕ ಅವ್ಯವಸ್ಥೆ ಉಂಟಾಗಿದೆ. ಈ ಪರಿಸ್ಥಿತಿಗೆ ಅಧಿಕಾರಶಾಹಿ ಹಾಗೂ ರಾಜಕಾರಣಿಗಳು ಸೇರಿದಂತೆ ಎಲ್ಲರೂ ಕಾರಣರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಜಪಾನ್ ಮೇಲೆ ಪರೀಕ್ಷಾರ್ಥ ಖಂಡಾಂತರ ಕ್ಷಿಪಣಿ ಹಾರಿಸಿದ ಉ. ಕೊರಿಯಾ – ಅಮೆರಿಕ, ದ. ಕೊರಿಯಾಗೆ ಎಚ್ಚರಿಕೆ
Advertisement
Advertisement
ತೀವ್ರ ಆರ್ಥಿಕ ಕುಸಿತ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಕಳೆದ ವಾರ ಹಣದುಬ್ಬರ ಶೇ.38.4 ಕ್ಕೆ ಏರಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದು ಮುಂದುವರಿಯುತ್ತಿರುವುದರಿಂದ ಒಂದೇ ವಾರದಲ್ಲಿ ಶೇ.38.4 ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಕಾರಿನಲ್ಲಿ ಹೋಗುತ್ತಿದ್ದಾಗ ತನ್ನ ಅಜ್ಜಿಗೆ ಗುಂಡು ಹಾರಿಸಿದ 6ರ ಬಾಲಕಿ – ವೃದ್ಧೆ ಸಾವು
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k