ಇಸ್ಲಾಮಾಬಾದ್: ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫ್ಲಾಪ್ ಪ್ರದರ್ಶನ ನೀಡಿದ್ದ ಪಾಕ್ ತಂಡದ ಮಾಜಿ ನಾಯಕ ಬಾಬರ್ ಆಜಂ (Babar Azam)ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಭರ್ಜರಿ ಫಾರ್ಮ್ ಕಂಡುಕೊಂಡಿದ್ದಾರೆ.
ಈ ಲೀಗ್ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 10 ಸಾವಿರ ರನ್ ಪೂರೈಸಿದ ವಿಶೇಷ ಸಾಧನೆ ಮಾಡಿದ್ದಾರೆ. ಈ ಮೂಲಕ ಕ್ರಿಸ್ ಗೇಲ್ (Chris Gayle) ಹಾಗೂ ವಿರಾಟ್ ಕೊಹ್ಲಿ (Virat Kohli) ಅವರ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ICC Test Ranking: 14 ಸ್ಥಾನ ಜಿಗಿದು ಟಾಪ್-20ಯಲ್ಲಿ ಸ್ಥಾನ ಪಡೆದ ಯಶಸ್ವಿ!
Advertisement
Advertisement
ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಪೇಶಾವರ್ ಝಲ್ಮಿ ತಂಡದ ನಾಯಕ ಬಾಬರ್ ಆಜಂ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಟಿ20 ಸ್ವರೋಪದಲ್ಲಿ ಅತಿ ವೇಗವಾಗಿ 10 ಸಾವಿರ ರನ್ ಪೂರೈಸಿದ ದಾಖಲೆ ಮಾಡಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪೇಶಾವರ್ ಝಲ್ಮಿ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಬಾಬರ್ 6 ರನ್ ಗಳಿಸುತ್ತಿದ್ದಂತೆ 271 ಪಂದಗಳಲ್ಲೇ 10,000 ರನ್ ಪೂರ್ಣಗೊಳಿಸಿದ್ದಾರೆ.
Advertisement
Advertisement
2017ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆರಂಭಿಕ ಆಟಗಾರ ಕ್ರಿಸ್ ಗೇಲ್ ರಾಜ್ ಕೋಟ್ ಅಂಗಳದಲ್ಲಿ ಗುಜರಾತ್ ಲಯನ್ಸ್ ತಂಡದ ವಿರುದ್ಧ ತಮ್ಮ 285ನೇ ಟಿ20 ಇನಿಂಗ್ಸ್ ನಲ್ಲಿ ಅತಿ ವೇಗದ 10,000 ಚುಟುಕು ರನ್ ಪೂರೈಸಿ ಮಹತ್ತರ ದಾಖಲೆ ಸೃಷ್ಟಿಸಿದ್ದರು. ಈಗ ಆ ದಾಖಲೆ ಬಾಬರ್ ಹಿಂದಿಕ್ಕಿದ್ದಾರೆ. ಅಲ್ಲದೇ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ 3,000 ರನ್ ಪೂರೈಸಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯಕ್ಕೆ ಕೆ.ಎಲ್ ರಾಹುಲ್ ಕಂಬ್ಯಾಕ್ – ಸುಳಿವು ಕೊಟ್ಟ ರೋಹಿತ್
ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 10,000 ರನ್ ಪೂರೈಸಿದ ಸ್ಟಾರ್ಸ್:
* 271 ಪಂದ್ಯ- ಬಾಬರ್ ಆಜಂ- ಪಾಕಿಸ್ತಾನ
* 285 ಪಂದ್ಯ- ಕ್ರಿಸ್ ಗೇಲ್- ವೆಸ್ಟ್ ಇಂಡೀಸ್
* 299 ಪಂದ್ಯ- ವಿರಾಟ್ ಕೊಹ್ಲಿ- ಭಾರತ
* 303 ಪಂದ್ಯ- ಡೇವಿಡ್ ವಾರ್ನರ್- ಆಸ್ಟ್ರೇಲಿಯಾ
* 327 ಪಂದ್ಯ- ಆರನ್ ಫಿಂಚ್- ಆಸ್ಟ್ರೇಲಿಯಾ
* 350 ಪಂದ್ಯ- ಜೋಸ್ ಬಟ್ಲರ್- ಇಂಗ್ಲೆಂಡ್