ನವದೆಹಲಿ: ಪುಲ್ವಾಮಾ ದಾಳಿಯ ಪ್ರತ್ಯುತ್ತರವಾಗಿ ಭಾರತೀಯ ವಾಯು ಪಡೆ (ಐಎಎಫ್) ಮಂಗಳವಾರ ನಡೆಸಿದ ಸರ್ಜಿಕಲ್ ಸ್ಟ್ರೈಕ್ 2 ಟ್ವಿಟ್ಟರ್ ನಲ್ಲಿ ವಿಶ್ವದ ನಂಬರ್ ಒನ್ ಟ್ರೆಂಡಿಂಗ್‍ನಲ್ಲಿತ್ತು. ಗೂಗಲ್ ಟ್ರೆಂಡ್ ನಲ್ಲೂ ಪಾಕಿಸ್ತಾನ ವಾಯು ಪಡೆ (ಪಿಎಎಫ್)ಗಿಂತಲೂ ಐಎಎಫ್ ನಂಬರ್ ಒನ್ ಸ್ಥಾನ ಪಡೆದಿದೆ.
ಪಾಕಿಸ್ತಾನದ ಹೆಚ್ಚಿನ ಜನರು ಗೂಗಲ್‍ನಲ್ಲಿ ಪಿಎಎಫ್, ಐಎಎಫ್, ಬಾಲಕೋಟ್, ಸರ್ಜಿಕಲ್ ಸ್ಟ್ರೈಕ್ ಹಾಗೂ ಎಲ್‍ಓಸಿ ಕುರಿತಾಗಿ ಸರ್ಚ್ ಮಾಡಿದ್ದಾರೆ. ತಮ್ಮ ದೇಶದ ವಾಯು ಪಡೆಗಿಂತ ಹೆಚ್ಚಾಗಿ ಐಎಎಫ್ ಬಗ್ಗೆ ಹೆಚ್ಚಿನ ಜನರು ಸರ್ಚ್ ಮಾಡಿದ್ದಾರೆ. ಈ ಮೂಲಕ ಪಾಕಿಸ್ತಾನದಲ್ಲಿಯೂ ಐಎಎಫ್ ಟ್ರೆಂಡಿಂಗ್‍ನಲ್ಲಿತ್ತು.
ಫೆಬ್ರವರಿ 25ರಂದು ಸಂಜೆ 5.30ರಿಂದ ಫೆ.26ರ ಸಂಜೆ 5.30 ರವರೆಗೂ ಗೂಗಲ್‍ನಲ್ಲಿ ಪಾಕಿಸ್ತಾನದ ಜನರು ಹೆಚ್ಚಾಗಿ ಬಾಲಕೋಟ್ ದಾಳಿಯ ಬಗ್ಗೆ ಸರ್ಚ್ ಮಾಡಿದ್ದಾರೆ. ಅದರ ನಂತರದ ಸ್ಥಾನದಲ್ಲಿ ಎಲ್‍ಓಸಿ, ಐಎಎಫ್ ಟ್ರೆಂಡಿಂಗ್‍ನಲ್ಲಿತ್ತು
ಭಾರತೀಯರು ಸರ್ಜಿಕಲ್ ಸ್ಟ್ರೈಕ್ ಕುರಿತು ಹೆಚ್ಚಾಗಿ ಹುಡುಕಾಡಿದ್ದಾರೆ. ಅದರ ನಂತರ ಟ್ರೆಂಡಿಂಗ್‍ನಲ್ಲಿರುವುದು, ಐಎಎಫ್ ಹಾಗೂ ಬಾಲಕೋಟ್. ಭಾರತೀಯರು ಪಾಕಿಸ್ತಾನದ ವಾಯು ಪಡೆಯನ್ನು ಕಡೆಗಣಿಸಿದ್ದಾರೆ. ಏಕೆಂದರೆ ಅದು ಎಲ್‍ಓಸಿಗಿಂತ ಕಡಿಮೆ ಪ್ರಮಾಣದಲ್ಲಿ ಸರ್ಚ್ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv