ಶ್ರೀನಗರ: ಜುಲೈ 28ರಂದು ಜಮ್ಮು ಕಾಶ್ಮೀರದಲ್ಲಿ ನಡೆದ ಆಪರೇಷನ್ ಮಹಾದೇವದಲ್ಲಿ (Operation Mahadev) ಮೃತಪಟ್ಟ ಮೂವರು ಉಗ್ರರು ಪಾಕಿಸ್ತಾನದವರು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಭದ್ರತಾ ಸಂಸ್ಥೆ ತಿಳಿಸಿದೆ.
ಭಾರತೀಯ ಭದ್ರತಾ ಏಜೆನ್ಸಿಗಳು ಕಲೆಹಾಕಿದ ಮಾಹಿತಿಗಳು ಸೇರಿದಂತೆ ಪಾಕಿಸ್ತಾನ ಸರ್ಕಾರ ನೀಡಿದ ದಾಖಲೆ ಮತ್ತು ಬಯೋಮೆಟ್ರಿಕ್ ದಾಖಲೆಗಳನ್ನು ತನಿಖೆ ನಡೆಸಿದ ವೇಳೆ ಪಹಲ್ಗಾಮ್‌ನಲ್ಲಿ ದಾಳಿ (Pahalgam Terrorists) ನಡೆಸಿದ್ದ ಈ ಮೂವರು ಪಾಕಿಸ್ತಾನದವರು ಎಂಬುದು ತಿಳಿದುಬಂದಿದೆ. ಉಗ್ರರನ್ನು ಎಲ್‌ಇಟಿ ಹಿರಿಯ ಕಾರ್ಯಕರ್ತರು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಸಾರಿಗೆ ಮುಷ್ಕರ ನಿಲ್ಲಿಸಲು KSRTC, BMTC ಕೊನೆಯ ಕಸರತ್ತು
ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿ ನಂತರ ಈ ಉಗ್ರರು ಡಚಿಗಮ್-ಹರ್ವಾನ್ ಅರಣ್ಯ ಪ್ರದೇಶದಲ್ಲಿ (Dachigam-Harwan Forest) ಅಡಗಿಕೊಂಡಿದ್ದರು. ಇದನ್ನೂ ಓದಿ: ಸಾರಿಗೆ ಮುಷ್ಕರ – ಸಿಎಂ ಸಭೆಯಲ್ಲಿ ಏನಾಯ್ತು? ಸಾರಿಗೆ ಮುಖಂಡರು ಸಂಧಾನ ತಿರಸ್ಕರಿಸಿದ್ದು ಯಾಕೆ?
ಪಾಕಿಸ್ತಾನದ ರಾಷ್ಟ್ರೀಯ ಮಾಹಿತಿ ಮತ್ತು ನೋಂದಣಿ ಪ್ರಾಧಿಕಾರದ ಬಯೋಮೆಟ್ರಿಕ್ ದಾಖಲು, ಮತದಾರರ ಗುರುತಿನ ಚೀಟಿಗಳು ಮತ್ತು ಡಿಜಿಟಲ್ ಸ್ಯಾಟಲೈಟ್ ಫೋನ್ ಮಾಹಿತಿ, ಲಾಗ್‌ಗಳು ಮತ್ತು ಜಿಪಿಎಸ್ ವೇ ಪಾಯಿಂಟ್‌ಗಳು ಸೇರಿದಂತೆ ಭದ್ರತಾ ಸಂಸ್ಥೆಗಳು ಸಂಗ್ರಹಿಸಿದ ಪ್ರಮುಖ ಪುರಾವೆಗಳಲ್ಲಿ ಮೂವರು ಭಯೋತ್ಪಾದಕರು ಪಾಕಿಸ್ತಾನದವರು ಎಂಬುದು ದೃಢಪಟ್ಟಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಪಾಕಿಸ್ತಾನ ಸರ್ಕಾರವೇ ನೀಡಿರುವ ದಾಖಲೆಗಳು ದೊರೆತಿದ್ದು, ಯಾವುದೇ ಸಂಶಯವಿಲ್ಲದೇ ಉಗ್ರರು ಪಾಕಿಸ್ತಾನಿಗಳು ಎಂಬುದು ಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಾಂಕೆ ಬಿಹಾರಿ ದೇವಾಲಯ ಕೇಸ್ – ಯುಪಿ ಸರ್ಕಾರಕ್ಕೆ ಸುಪ್ರೀಂ ತೀವ್ರ ತರಾಟೆ
ಸುಲೇಮಾನ್ ಶಾ ಅಲಿಯಾಸ್ ‘ಫೈಜಲ್ ಜತ್’ ಎ ಗ್ರೇಡ್ ಉಗ್ರನಾಗಿದ್ದು, ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದಾನೆ. ಈತನ ಆಪ್ತ ಅಬು ಹಮಾಜಿ ಅಲಿಯಾಸ್ ಅಫ್ಘಾನ್ ಕೂಡ ಎ ಗ್ರೇಡ್ ಕಮಾಂಡರ್ ಆಗಿದ್ದ. ಮತ್ತೋರ್ವ ಯಾಸಿರ್ ಅಲಿಯಾಸ್ ಜಿಬ್ರಾನ್ ಕೂಡ ಎ ಗ್ರೇಡ್ ಕಮಾಂಡರ್ ಆಗಿದ್ದು, ಮೂವರನ್ನು ಕೂಡ ಆಪರೇಷನ್ ಮಹಾದೇವ ಕಾರ್ಯಾಚರಣೆ ವೇಳೆ ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Dharmasthala | 13 ವರ್ಷದ ಹಿಂದಿನ ಕೇಸ್ ಬಗ್ಗೆ ಮತ್ತೊಂದು ದೂರು – ದೂರುದಾರ ಹೇಳಿದ್ದೇನು?