ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಗಡಿಯ ಪೂಂಚ್ ಜಿಲ್ಲೆಯ ಬಟ್ಟಲ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯ (LoC) ಬಳಿ ನೆಲಬಾಂಬ್ ಸ್ಫೋಟದಿಂದ (Landmine blast) ಕನಿಷ್ಠ ಐವರು ಪಾಕ್ ಉಗ್ರರು (Pakistani Militants) ಸಾವನ್ನಪ್ಪಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ದಾಟುತ್ತಿದ್ದ ಉಗ್ರರಲ್ಲಿ ಓರ್ವ ಆಕಸ್ಮಿಕವಾಗಿ ಭಾರತದ ಕಡೆ ಹಾಕಲಾಗಿದ್ದ ನೆಲಬಾಂಬ್ ಮೇಲೆ ಹೆಜ್ಜೆ ಇಟ್ಟಿದ್ದಾನೆ. ಈ ಸಂದರ್ಭದಲ್ಲಿ ಬಾಂಬ್ ಸ್ಫೋಟಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Advertisement
Advertisement
ಹತ್ಯೆಯಾದ ಉಗ್ರರು ಐಇಡಿಯನ್ನು ಹೊತ್ತುಕೊಂಡು ಸಾಗುತ್ತಿದ್ದರು. ನೆಲಬಾಂಬ್ ಸ್ಫೋಟದೊಂದಿಗೆ ಐಇಡಿ ಸಹ ಸ್ಫೋಟಿಸಿದೆ. ಇದನ್ನೂ ಓದಿ: RBI: 5 ವರ್ಷಗಳ ಬಳಿಕ ರೆಪೊ ದರ ಕಡಿತ ಮಾಡಿದ ಆರ್‌ಬಿಐ
Advertisement
ಉಗ್ರರು ಒಳನುಸುಳಿ ಭಾರತದ ಕಡೆ ಬರುವ ಜಾಗದಲ್ಲಿ ನೆಲಬಾಂಬ್‌ಗಳನ್ನು ಹುದುಗಿ ಇಡಲಾಗಿದೆ. ಕೆಲವೊಮ್ಮೆ ಮಳೆಯಿಂದಲಾಗಿ ಈ ಬಾಂಬ್‌ಗಳು ದೂರ ಸಾಗಿ ಹೋಗುತ್ತವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.