ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ನಡೆದ ಎನ್‍ಕೌಂಟರ್‌ನಲ್ಲಿ ಭದ್ರತಾ ಪಡೆ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾ(ಎಲ್‍ಇಟಿ)ನ ಪಾಕಿಸ್ತಾನಿ ಭಯೋತ್ಪಾದಕನನ್ನು ಹತ್ಯೆ ಮಾಡಿದ್ದು, ಮೂವರನ್ನು ಬಂಧಿಸಿದೆ.
Advertisement
ಕಾಶ್ಮೀರ ವಲಯದ ಪೊಲೀಸರು ಟ್ವಿಟ್ಟರ್‌ನಲ್ಲಿ, ಎನ್‍ಕೌಂಟರ್‌ನಲ್ಲಿ ಹಂತನಾದ ಭಯೋತ್ಪಾದಕನನ್ನು ಪಾಕಿಸ್ತಾನಿಯವನು ಗುರುತಿಸಲಾಗಿದೆ. ಈತ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‍ಇಟಿಯೊಂದಿಗೆ ಸಂಪರ್ಕ ಹೊಂದಿದ್ದ. ಬಂಧಿತ ಭಯೋತ್ಪಾದಕರ ಜೊತೆಗೆ ಇನ್ನೂ 2 ರಿಂದ 3 ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
Advertisement
#KupwaraEncounterUpdate: Killed #terrorist has been identified as a #Pakistani, linked with proscribed #terror outfit LeT. 2-3 more #terrorists alongwith arrested terrorist trapped in ongoing #encounter: IGP Kashmir@JmuKmrPolice https://t.co/FTbpGgoIVS
— Kashmir Zone Police (@KashmirPolice) June 19, 2022
Advertisement
ಕುಪ್ವಾರದ ಲೋಲಾಬ್ ಪ್ರದೇಶದಲ್ಲಿ ಅಡಗಿರುವ ಬಂಧಿತ ಉಗ್ರಗಾಮಿ ಶೋಕೆಟ್ ಅಹ್ಮದ್ ಶೇಖ್ ಬಗ್ಗೆ ಕುಪ್ವಾರ ಪೊಲೀಸರ ಸೇನೆಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆ ಇವರು 28ಆರ್‌ಆರ್‌ನೊಂದಿಗೆ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
Advertisement
ಭದ್ರತಾ ಪಡೆ, ಉಗ್ರಗಾಮಿಗಳು ಅಡಗಿಕೊಂಡಿದ್ದ ಜಾಗವನ್ನು ಶೋಧಿಸಿದ್ದಾರೆ. ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಲು ಪ್ರಾರಂಭ ಮಾಡಿದ್ದು, ನಮ್ಮ ತಂಡವು ಪ್ರತಿದಾಳಿ ನಡೆಸಿದೆ. ಇದರಲ್ಲಿ ಒಬ್ಬ ಉಗ್ರನನ್ನು ಎನ್‍ಕೌಂಟರ್ ಮಾಡಲಾಗಿದೆ ಎಂದು ಕಾಶ್ಮೀರ ಐಜಿಪಿ ಹೇಳಿದರು.