ಇಸ್ಲಾಮಬಾದ್: ಮದುವೆಗೆ ವಧು ವರರಿಗೆ ಚಿನ್ನದ ಸರ, ಬಳೆ, ಉಂಗುರ, ಓಲೆ ತೊಡಿಸೋದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಪಾಕಿಸ್ತಾನದಲ್ಲಿ ನಡೆದ ಮದುವೆಯಲ್ಲಿ ವರ ಚಿನ್ನದ ಟೈ ಮತ್ತು ಚಿನ್ನದ ಶೂ ತೊಟ್ಟು ಮಿಂಚಿದ್ದಾರೆ.
ಪಾಕಿಸ್ತಾನದ ಲಾಹೋರ್ ನಿವಾಸಿಯಾದ ಹಫಿಜ್ ಸಲ್ಮಾನ್ ಶಾಹಿದ್ ಎಂಬ ವರ ಚಿನ್ನದ ಟೈ ಹಾಗೂ ಶೂ ತೊಟ್ಟಿದ್ದಾರೆ. ದಕ್ಷಿಣ ಏಷ್ಯಾದ ದೇಶಗಳಲ್ಲಿ ಮದುವೆಯ ದಿನದಂದು ವಧುವಿಗೆ ವಿವಿಧ ರೀತಿಯಲ್ಲಿ ಅಲಂಕಾರ ಮಾಡಲು ಬಂಗಾರವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
Advertisement
Advertisement
ಹಫಿಜ್ ಸಲ್ಮಾನ್ ಶಾಹಿದ್ ಅವರು ಸುಮಾರು 2.5 ಮಿಲಿಯನ್(16,30,14,000 ರೂ.) ಮೌಲ್ಯದ ಚಿನ್ನವನ್ನು ಧರಿಸಿ ಮದುವೆಯಾಗಿದ್ದಾರೆ. ಸಲ್ಮಾನ್ ಸುಮಾರು 2.5 ಮಿಲಿಯನ್ ಮೌಲ್ಯದ ಚಿನ್ನವನ್ನು ತನ್ನ ವಿವಾಹದ ದಿನದಂದು ಧರಿಸಿದ್ದು, ಚಿನ್ನದ ಬೂಟುಗಳ ಬೆಲೆ ಸುಮಾರು 1.7 ಮಿಲಿಯನ್(11,08,49,520) ಮೌಲ್ಯದ್ದಾಗಿದೆ. ಸುಮಾರು 32 ತೊಲ ಬಂಗಾರವಾಗಿತ್ತು. ಅವರು ಧರಿಸಿರುವ ಸೂಟ್ ಬರೋಬ್ಬರಿ 63,000 ರೂ. ಮೌಲ್ಯದ್ದಾಗಿದೆ. ಜೊತೆಗೆ ಅದರ ಮೇಲೆ 10 ತೊಲದ ಟೈ ಇದನ್ನು ಸ್ಫಟಿಕಗಳು ಮತ್ತು ಆಭರಣಗಳಿಂದ ಅಲಂಕೃತ ಮಾಡಲಾಗಿತ್ತು. ಇದರ ಮೌಲ್ಯ 5 ಲಕ್ಷವಾಗಿದೆ ಎಂದು ವರದಿಯಾಗಿದೆ.
Advertisement
ಅಷ್ಟೇ ಅಲ್ಲದೇ ಸಲ್ಮಾನ್ ಅವರಿಗೆ ಭದ್ರತಾ ಸಿಬ್ಬಂದಿಯನ್ನು ಕೂಡ ಒದಗಿಸಲಾಗಿತ್ತು. ನನ್ನ ಮದುವೆ ದಿನದಂದು ಏನನ್ನಾದರೂ ವಿಶೇಷವಾಗಿ ಧರಿಸಬೇಕೆಂದು ಬಯಸಿದ್ದೆ ಎಂದು ಅವರು ಹೇಳಿದ್ದಾರೆ.
Advertisement
ಸಲ್ಮಾನ್ ಓರ್ವ ಮಗನಾಗಿದ್ದು, 7 ಮಂದಿ ಸಹೋದರಿಯರಿದ್ದಾರೆ. ಹೀಗಾಗಿ ಅಲ್ಮಾನ್ ಪೋಷಕರು ಆತನ ಇಚ್ಛೆಯನ್ನು ಪೂರ್ಣಗೊಳಿಸಬೇಕೆಂದು ಬಯಸಿದ್ದರು ಎಂದು ವರದಿ ತಿಳಿಸಿದೆ.
https://www.instagram.com/p/BhZb10PghvB/?taken-by=divamagazinepakistan