ಸ್ವಂತ ತಂದೆಯನ್ನೇ ಮದುವೆಯಾದ ಪಾಕಿಸ್ತಾನಿ ಯುವತಿ – ತಂದೆಗೆ ಈಕೆ 4ನೇ ಹೆಂಡತಿ!

Public TV
1 Min Read
pakistani girl father marriage

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಯುವತಿಯೊಬ್ಬಳು (Pakistani Girl) ತನ್ನ ತಂದೆಯನ್ನೇ ಮದುವೆಯಾಗಿರುವ ವಿಚಿತ್ರ ಪ್ರಕರಣವೊಂದು ಜರುಗಿದೆ. ತನ್ನ ತಂದೆಗೆ ಆ ಯುವತಿ ಈಗ ನಾಲ್ಕನೇ ಪತ್ನಿಯಾಗಿದ್ದಾಳೆ.

ಈ ಸನ್ನಿವೇಶದ ಕುತೂಹಲಕಾರಿ ಅಂಶವೆಂದರೆ ಮಗಳು ತನ್ನ ತಂದೆಯೊಂದಿಗೆ ಮದುವೆಯಾದ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ಅವರ ಮದುವೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಮದುವೆಗೆ ನೆಟ್ಟಿಗರು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಭಾರತದ ಪ್ರೇಮಿಯೊಂದಿಗೆ ಹೊಸ ಜೀವನ ಶುರು ಮಾಡ್ತಿದ್ದಾಳೆ ಪಾಕ್ ಮಹಿಳೆ

ಪಾಕಿಸ್ತಾನದಲ್ಲಿ ಈ ವೀಡಿಯೋದ ನಿಖರವಾದ ಸ್ಥಳ ಮತ್ತು ರೆಕಾರ್ಡಿಂಗ್ ದಿನಾಂಕವನ್ನು ದೃಢೀಕರಿಸಲಾಗಿಲ್ಲ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಕೆಲವು ನೆಟ್ಟಿಗರು ಈ ರೀತಿಯ ಮದುವೆಯನ್ನು ಟೀಕಿಸುತ್ತಿದ್ದಾರೆ. ಅದೇನೇ ಇದ್ದರೂ, ತಂದೆಯನ್ನು ಮದುವೆಯಾಗಿದ್ದೇನೆ ಎಂದು ಹೇಳುವ ಮೂಲಕ ಯುವತಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾಳೆ.

ವೀಡಿಯೋದ ಸತ್ಯಾಸತ್ಯತೆ ಮತ್ತು ವಿವರಗಳನ್ನು ಪರಿಶೀಲಿಸಲಾಗಿಲ್ಲ. ಇದು ಊಹಾಪೋಹ ಇರಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. ಮತ್ತೊಂದು ಕಡೆ ಈ ವಿವಾಹವು ವಿವಾದದ ಅಲೆಯನ್ನು ಹುಟ್ಟುಹಾಕಿದೆ. ಹುಡುಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದಾಳೆ ಮತ್ತು ತನ್ನ ಹೆಸರಿನಿಂದಾಗಿ ತನ್ನ ತಂದೆಯನ್ನು ಮದುವೆಯಾದಳು ಎಂದು ಹೇಳಿಕೊಳ್ಳುತ್ತಾಳೆ. ‘ರಾಬಿಯಾ ಎಂಬ ಹೆಸರಿನಿಂದಾಗಿ ನಾನು ನನ್ನ ತಂದೆಯನ್ನು ಮದುವೆಯಾಗಲು ನಿರ್ಧರಿಸಿದೆ’ ಎಂದು ಆಕೆ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಅಶ್ಲೀಲ ವೀಡಿಯೋ ಕಳಿಸಿ ಪಾಕಿಸ್ತಾನಿ ಏಜೆಂಟ್‌ನನ್ನ ಫ್ರೆಂಡ್‌ ಮಾಡ್ಕೊಂಡಿದ್ದ DRDO ವಿಜ್ಞಾನಿ!

ನನ್ನ ಪೋಷಕರಿಗೆ ನಾನು ಎರಡನೇ ಮಗಳು. ನನ್ನ ಬದುಕಿಗೆ ಪರಿಹಾರವೊಂದನ್ನು ಹುಡುಕುತ್ತಿದ್ದೆ. ಆಗ, ನನ್ನ ತಂದೆಗೇ ನಾನೇಕೆ 4ನೇ ಪತ್ನಿಯಾಗಬಾರದು ಎಂದು ಆಲೋಚನೆ ಹೊಳೆಯಿತು ಎಂದು ವೀಡಿಯೋವೊಂದರಲ್ಲಿ ಯುವತಿ ವಿವರಿಸುತ್ತಿದ್ದಾಳೆ. ಈ ವೀಡಿಯೋವನ್ನು ಹಮೀರ್‌ ದೇಸಾಯಿ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

Web Stories

Share This Article